PLACE YOUR AD HERE AT LOWEST PRICE
ಜೆಡಿಎಸ್ ಪಕ್ಷದವರು ಕುಮಾರಣ್ಣ ಅಂತ ಹೇಳ್ತಾರೆ, ಕಾಂಗ್ರೆಸ್ ಪಕ್ಷದವರು ಸಿದ್ದರಾಮಯ್ಯ ಅಂತಾರೆ ಅವರು ಯಾರು ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿಲ್ಲ, ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ನಿಮ್ಮ ಗ್ರಾಮಕ್ಕೆ ಬಂದು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.
ಕೋಲಾರ ತಾಲೂಕಿನ ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೋಳಘಟ್ಟ ಗ್ರಾಮದಲ್ಲಿ ಜೆಡಿಎಸ್ ಪಕ್ಷ ತೊರೆದು ಬಂದ ೩೦ಕ್ಕೂ ಹೆಚ್ಚು ಕುಟುಂಬಗಳನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ನಾನು ಶಾಸಕನಾಗಿದ್ದ ವೇಳೆ ಈ ಚೋಳ ಘಟ್ಟ ಗ್ರಾಮಕ್ಕೆ ಕುಡಿಯುವ ನೀರಿಗೆ ಬರಗಾಲ ಎದುರಾಗಿದ್ದ ವೇಳೆ ಐದಕ್ಕಿಂತ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದೇನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಿಕೊಟ್ಟಿದ್ದೇನೆ, ಗ್ರಾಮದಲ್ಲಿ ಸಿಸಿ ರಸ್ತೆಗಳನ್ನು ಮಾಡಿಸಿದ್ದೇನೆ, ನನ್ನ ಅವಽಯಲ್ಲಿ ಗ್ರಾಮಕ್ಕೆ ವಿದ್ಯುತ್ ದೀಪಗಳು ಉತ್ತಮ ಚರಂಡಿ ವ್ಯವಸ್ಥೆ ಎಲ್ಲವೂ ಈ ಗ್ರಾಮಕ್ಕೆ ಆಗಿದೆ, ನಾನು ಕಳೆದ ಚುನಾವಣೆಯಲ್ಲಿ ಸೋತ ನಂತರ ಈ ಗ್ರಾಮದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಆಗಲಿಲ್ಲ ನಿಮ್ಮ ಗ್ರಾಮಕ್ಕೆ ಈಗಿನ ಜನ ಪ್ರತಿನಿಽ ಬಂದು ನಿಮ್ಮ ಬಳಿ ಕಷ್ಟ ಸುಖಗಳಲ್ಲಿ ಭಾಗಿಯಾಗಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಾದ ಮಂಜುನಾಥ, ಮೂರ್ತಿ, ಚಂದ್ರು, ಮಹೇಶ್, ಮಲ್ಲಿಕಾರ್ಜುನ, ಕಿಟ್ಟಿ ಸ್ವಾಮಿ, ದೊಡ್ಡಪ್ಪಯಣ್ಣ, ಶ್ರೀನಿವಾಸ್, ಶಿವಣ್ಣ, ಲೋಕೇಶ್, ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್ ,ಬಂಕ್ ಮಂಜುನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ತಂಬಳ್ಳಿ ಮುನಿಯಪ್ಪ, ಮದ್ದೇರಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಂಜುಳಾ ರಾಜಣ್ಣ, ಚೋಳಘಟ್ಟ ಗ್ರಾಮದ ಹಿರಿಯ ಮುಖಂಡರಾದ ನಂಜಪ್ಪ, ವೆಂಕಟಸ್ವಾಮಿ. ವೆಂಕಟಚಲಪತಿ, ಮಲ್ಲು, ಮದ್ದೇರಿ ಮುರಳಿ ಗೌಡ ಹಾಗೂ ಉಪಸ್ಥಿತರಿದ್ದರು.