• Sun. Apr 28th, 2024

ಜ.೨೪ ರಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ವೇಳಾಪಟ್ಟಿಯಂತೆ ಸಕಾಲಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗಿ-ಡಿಡಿಪಿಐ ಕೃಷ್ಣಮೂರ್ತಿ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೨ ಮತ್ತು ಪ್ರೌಢ ಶಾಲಾ ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-೧ ಮತ್ತು ವಿಶೇಷ ಶಿಕ್ಷಕರ ೨೦೨೨-೨೩ನೇ ಸಾಲಿನ ಹೆಚ್ಚುವರಿ ವರ್ಗಾವಣೆ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಗಳು ಹಾಗೂ ನಿರ್ದಿಷ್ಟ ಪಡಿಸಿದ ವೃಂದದ ಕನಿಷ್ಠ ೦೩ ರಿಂದ ೦೫ ವರ್ಷದೊಳಗಡೆ ಶಿಕ್ಷಕರ ಗಣಕೀಕೃತ ಕೌನ್ಸಿಲಿಂಗ್ ಜ.೨೪ ರಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ನಗರದ ಎಸ್‌ಎಸ್‌ಎ. ವಿಭಾಗದಲ್ಲಿ ನಡೆಯಲಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.


ಪ್ರಾಥಮಿಕ ಶಾಲಾ ಶಿಕ್ಷಕರ ಹೆಚ್ಚುವರಿ ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆಯಲ್ಲಿ ಜ.೨೪ ರ ಮಂಗಳವಾರ ಬ್ಲಾಕ್ ಹಂತದ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ನಡೆಯಲಿದ್ದು, ಜಿಲ್ಲೆಯ ಬಂಗಾರಪೇಟೆ,ಕೆಜಿಎಫ್,ಕೋಲಾರ,ಮಾಲೂರು,ಮುಳಗಾಗಿಲು ಶ್ರೀನಿವಾಸಪುರ ಬ್ಲಾಕ್‌ಗಳ ಶಿಕ್ಷಕರು ಪೂರ್ವಾಹ್ನ ಹಾಜರಿರಲು ಸೂಚಿಸಲಾಗಿದೆ.

ಇದೇ ಜ.೨೪ರ ದಿನ ಮಧ್ಯಾಹ್ನ ಬ್ಲಾಕ್ ಹಂತದಲ್ಲಿ ಉಳಿಕೆಯಾಗುವ ಎಲ್ಲಾ ಪ್ರಾಥಮಿಕ ಹೆಚ್ಚುವರಿ ಶಿಕ್ಷಕರು ಜಿಲ್ಲಾ ಹಂತದ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಸೂಚಿಸಿದೆ.

ಜ.೩೦ ರಂದು ಜಿಲ್ಲಾ ಹಂತದಲ್ಲಿ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ನಂತರ ಉಳಿಕೆಯಾಗುವ ಹೆಚ್ಚುವರಿ ಶಿಕ್ಷಕರನ್ನು ಜಿಲ್ಲೆಯೊಳಗೆ ಪಿ.ಟಿ.ಆರ್ ಪ್ರಕಾರ ಅತಿ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಲ್ಲಿ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರುಹೊಂದಾಣಿಕೆಗೆ ಕ್ರಮ ಕೈಗೊಳ್ಳಲಿದ್ದು, ಜಿಲ್ಲಾಹಂತದಲ್ಲಿ ಉಳಿಕೆಯಾದ ಎಲ್ಲಾ ಹೆಚ್ಚುವರಿ ಪ್ರಾಥಮಿಕ ಶಿಕ್ಷಕರು ಪಾಲ್ಗೊಳ್ಳಬೇಕು.

ಜ.೩೧ ರಂದು ಗರಿಷ್ಟ ೫ ವರ್ಷ ಅವಧಿ ಮುಗಿದ ನಿರ್ಧಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ.

ಫೆ.೯ ರಿಂದ ೧೪ ರವವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ತಾಲ್ಲೂಕಿನ ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಕೋರಿಕೆ ವರ್ಗಾವಣೆಯ ಅಂತಿಮ ಜೇಷ್ಠತಾ ಪಟ್ಟಿಯಂತೆ ನಡೆಯಲಿದೆ.

ಫೆ.೧೬ರಂದು ಪೂವಾಹ್ನ ಪ್ರಾಥಮಿಕ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ಪರಸ್ಪರ ವರ್ಗಾವಣೆಯ ಅಂತಿಮ ಜೇಷ್ಠತಾ ಪಟ್ಟಿಯಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಫೆ.೧೭ ರಂದು ಕನಿಷ್ಠ ೩ ರಿಂದ ೫ ವರ್ಷದೊಳಗಡೆ ಅವಧಿ ಮುಗಿದ ನಿರ್ಧಿಷ್ಟಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತ ಪ್ರಕ್ರಿಯೆ ನಡೆಸುವರು ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಜ.೨೫ರಿಂದ ಪ್ರೌಢಶಾಲೆ
ಶಿಕ್ಷಕರ ವರ್ಗಾವಣೆ
ಜ.೨೫ರ ಪೂವಾಹ್ನ ಜಿಲ್ಲಾಹಂತದಲ್ಲಿನ ಪ್ರೌಢಶಾಲಾ ಶಿಕ್ಷಕರ ಹೆಚ್ಚುವರಿ ವರ್ಗಾವಣೆ ನಡೆಯಲಿದೆ. ಅದೇ ರೀತಿ ಜ.೩೦ ರಂದು ಜಿಲ್ಲಾ ಹಂತದಲ್ಲಿ ಉಳಿಕೆಯಾಗಿರುವ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೆ ಜಿಲ್ಲೆಯೊಳಗೆ ಪಿಟಿಆರ್ ಪ್ರಕಾರ ಅತೀ ಹೆಚ್ಚಿನ ಮಕ್ಕಳ ದಾಖಲಾತಿ ಇರುವ ಶಾಲೆಗಳಿಗೆ ಇಳಿಕೆ ಕ್ರಮಾಂಕದಲ್ಲಿ ಶಿಕ್ಷಕರ ಮರು ಹೊಂದಾಣಿಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಜ.೩೧ ರಂದು ಗರಿಷ್ಟ ೫ ವರ್ಷ ಅವಧಿ ಮುಗಿದ ನಿರ್ಧಿಷ್ಟಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ತಾಂತ್ರಿಕ ಸಹಾಯಕರು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ.

ಫೆ.೧೩ ರಿಂದ ೧೫ರವರೆಗೆ ಪ್ರೌಢಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ಜೇಷ್ಟತಾ ಪಟ್ಟಿಯಂತೆ ತಾಲ್ಲೂಕಿನ ಒಳಗೆ ಹಾಗೂ ತಾಲ್ಲೂಕಿನ ಹೊರಗೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಯಲಿದೆ.
ಫೆ.೧೬ ರಂದು ಪ್ರೌಢಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ಜೇಷ್ಟತಾ ಪಟ್ಟಿಯಂತೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಫೆ.೧೭ ರಂದು ಕನಿಷ್ಟ ೩ ರಿಂದ ೫ ವರ್ಷದೊಳಗಡೆ ಮುಗಿದ ನಿರ್ಧಿಷ್ಟಪಡಿಸಿದ ಶಿಕ್ಷಕರ ಅಂತಿಮ ಪಟ್ಟಿಯಂತೆ ತಾಂತ್ರಿಕ ಸಹಾಯಕರು ಗಣಕೀಕೃತಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.

ಶಿಕ್ಷಕರಿಗೆ ಸೂಚನೆ
ಪಟ್ಟಿಯಲ್ಲಿರುವ ಶಿಕ್ಷಕರು ವೇಳಾಪಟ್ಟಿಯಲ್ಲಿ ಸೂಚಿಸಿರುವ ದಿನಾಂಕಗಳಂದು ಸೂಚಿಸಿರುವ ಸಮಯಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗುವುದು. ತಡವಾಗಿ ಬಂದಲ್ಲಿ ನಿಮ್ಮ ಕ್ರಮಸಂಖ್ಯೆ ಮುಂದೆಹೋಗಿದ್ದಲ್ಲಿ ಆನ್‌ಲೈನ್ ಕೌನ್ಸಿಲಿಂಗ್ ಆಗಿರುವುದರಿಂದ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ಮತ್ತು ಪಟ್ಟಿಯಲ್ಲಿರುವ ಶಿಕ್ಷಕರು ಮಾತ್ರವೇ ಕೌನ್ಸಿಲಿಂಗ್ ಗೆ ಹಾಜರಾಗಲು ಸೂಚಿಸಿದೆ.
ಕೌನ್ಸಿಲಿಂಗ್‌ಗೆ ಹಾಜರಗುವ ಶಿಕ್ಷಕರು ಸಾಂದರ್ಭಿಕ ರಜೆ ಪಡೆದು ಕೌನ್ಸಿಲಿಂಗ್‌ಗೆ ಹಾಜರಾಗುವುದು, ಯಾವುದೇ ಕಾರಣಕ್ಕೂ ಅನ್ಯಕಾರ್ಯನಿಮಿತ್ತ ಒಒಡಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಡಿಡಿಪಿಐ ಕೃಷ್ಣಮುರ್ತಿ ಸ್ಪಷ್ಟಪಡಿಸಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!