• Mon. Apr 29th, 2024

ಭಾರತ ಸೇವಾದಳ ಕಚೇರಿಯಲ್ಲಿ ೭೪ ನೇ ಗಣರಾಜ್ಯೋತ್ಸವ – ಸಂವಿಧಾನಕ್ಕೆ ಬದ್ಧವಾಗಿದ್ದರೆ ದೇಶ ಸುಭದ್ರ – ಸಿಎಂಆರ್ ಶ್ರೀನಾಥ್

PLACE YOUR AD HERE AT LOWEST PRICE

ದೇಶದ ಸಮಸ್ತ ಜನತೆ ಸಂವಿಧಾನಕ್ಕೆ ಬದ್ಧವಾಗಿದ್ದರೆ ದೇಶವು ಸುಭದ್ರವಾಗಿರುತ್ತದೆಯೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.

ಕೋಲಾರನಗರದ ಭಾರತಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹಳೇ ಮಾಧ್ಯಮಿಕಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ೭೪ ನೇ ಭಾರತ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ವಿಭಿನ್ನ ಸಂಸ್ಕೃತಿ, ಊಟ ಉಪಚಾರ, ಭಾಷೆ, ಸಂಸ್ಕಾರಗಳನ್ನು ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನವು ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಸಾಕ್ಷಿಯಾಗಿದ್ದು, ದೇಶವನ್ನು ಒಗ್ಗೂಡಿಸುತ್ತಿರುವ ಸಂವಿಧಾನ ಆಶಯಗಳಿಗೆ ಪ್ರತಿಯೊಬ್ಬರೂ ಬದ್ಧರಾಗಿ ಅನುಸರಿಸಬೇಕೆಂದು ಅವರು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಮಾತನಾಡಿ, ದೇಶವು ಸ್ವಾತಂತ್ರ್ಯ ಬಂದ ಸುಮಾರು ೨ ವರ್ಷಗಳ ಕಾಲ ಸಂವಿಧಾನ ಇಲ್ಲದೇ ಆಡಳಿತ ನಡೆಸಬೇಕಾಯಿತು. ಆನಂತರ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ರಚನಾ ಸಮಿತಿಯಲ್ಲಿ ೩೦೬ ಮಂದಿಸದಸ್ಯರಿದ್ದರು. ಅಂತಿಮವಾಗಿ ಅಂಬೇಡ್ಕರ್ ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅಷ್ಟೇ ಉನ್ನತ ಮಟ್ಟದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದರು. ಸರಿಯಾಗಿ ೭೪ ವರ್ಷಗಳ ಹಿಂದೆ ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ಇದುವವೆರಿಗೂ ಅನುಸರಿಸಿಕೊಂಡು ಬಂದಿದ್ದೇವೆ. ಆದರೂ, ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಉದ್ಭವವಾಗಿದ್ದು, ಅವುಗಳನ್ನು ಸಂವಿಧಾನಾತ್ಮಕವಾಗಿಯೇ ಬಗೆಹರಿಸಿಕೊಳ್ಳುವ ಮೂಲಕ ದೇಶದ ಅಖಂಡತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಭಾರತವದ ಅಖಂಡತೆಗೆ ಸಂವಿಧಾನವೇ ಕಾರಣವಾಗಿದ್ದು, ಸಂವಿಧಾನದಿಂದ ಮಾತ್ರವೇ ಭಾರತ ದೇಶವು ಇದುವರೆವಿಗೂ ತನ್ನ ಅಖಂಡತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ, ಇಂತ ಸಂವಿಧಾನವನ್ನು ದೇಶಕ್ಕೆ ನೀಡಿದ ಅಂಬೇಡ್ಕರ್‌ರನ್ನು ಸ್ಮರಿಸುತ್ತಾ, ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಅನುಸರಿಸಿದರೆ ವಿಶ್ವದಲ್ಲಿಯೇ ಭಾರತ ಅಗ್ರಗಣ್ಯ ರಾಷ್ಟ್ರವಾಗಿ ನಿಲ್ಲಲು ಸಹಕಾರಿಯಾಗುತ್ತದೆಯೆಂದು ಎಂದರು.

ಭಾರತಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ತಾಲೂಕು ಅಧ್ಯಕ್ಷ ಶ್ರೀರಾಮ್, ಉಪಾಧ್ಯಕ್ಷ ಮುನಿವೆಂಕಟ್, ಕಾರ್ಯದರ್ಶಿ ಫಲ್ಗುಣ, ವಿ.ಪಿ.ಸೋಮಶೇಖರ್, ಡಿ.ಜೆ.ಮನೋಹರ್, ಬಿಇಒ ಕಚೇರಿಯ ಗಂಗಾಧರ್, ಶ್ರೀನಿವಾಸ್, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಭಾರತ ಸೇವಾದಳ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!