• Thu. May 2nd, 2024

೭೪ ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ-ಆಕರ್ಷಕ ಪಥ ಸಂಚಲನ ಸ್ನೇಹ,ಭ್ರಾತೃತ್ವ, ಮೌಲ್ಯಗಳೊಂದೊಗೆ ಉತ್ತಮ ಸಮಾಜ ಕಟ್ಟೋಣ-ಸಚಿವ ಮುನಿರತ್ನ

PLACE YOUR AD HERE AT LOWEST PRICE

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ಇಂದು ವಿಶ್ವಮಾನ್ಯವಾಗಿದೆ, ಈ ಘನತೆಯನ್ನು ಕಾಪಾಡಿಕೊಂಡು ಒಗ್ಗಟಿನಿಂದ ಮುನ್ನೊಡಿಯೋಣ ಸ್ನೇಹ,ಭ್ರಾತೃತ್ವ ಹಾಗೂ ಮೌಲ್ಯಗಳೊಂದೊಗೆ ಉತ್ತಮ ಸಮಾಜ ಕಟ್ಟೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕರೆ ನೀಡಿದರು.

ಕೋಲಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ೭೪ ನೇ ಗಣರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಅವರು ಸಂದೇಶ ನೀಡಿ, ಒಂದು ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ಅದರ ಸರ್ವತೋಮುಖ ಅಭಿವೃದ್ಧಿ ಅತ್ಯಗತ್ಯ, ಆರ್ಥಿಕ,ಸಬಲತೆ,ಸಾಮಾಜಿಕ ಕಳಕಳಿ,ಸಮೃದ್ಧ ಸಂಪನ್ಮೂಲದ ಜೊತೆ ಜೊತೆಗೆ ಆರೋಗ್ಯ ಸಮಾಜವೂ ಅತಿ ಮುಖ್ಯ,ಈ ಗಣ ತಂತ್ರವನ್ನು ಸುಭ್ರದ್ರವಾಗಿರಿಸಲು ನಮ್ಮ ಗಡಿಯಲ್ಲಿ ಕಾಯುವ ಯೋಧರ ತ್ಯಾಗ ಬಲಿದಾನಗಳನ್ನು ನಾವು ಗೌರವಿಸಬೇಕು, ನಮ್ಮ ಯೋಧರ ಧೈರ್ಯ ನಮ್ಮ ಅನ್ನದಾತರ ಸಂಯಮ ನಮಗಿಂದು ಆದರ್ಶಗಳಾಗ ಬೇಕಿದೆಯೆಂದರು.
ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾ ಪ್ರಭತ್ವ ದೇಶ ಎನಿಸಿಕೊಂಡಿರುವ ನಮ್ಮ ಭಾರತ ಪ್ರಜಾತಂತ್ರ ಮತ್ತು ಗಣತಂತ್ರ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆಯೆಂದರು.

ಕೋಲಾರ ಹರಿಕಾರ ಟಿ.ಚೆನ್ನಯ್ಯರವರು ಸಂವಿಧಾನ ಸಮಿತಿಯಲ್ಲಿ ಮೈಸೂರು ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರಲ್ಲಿ ಒಬ್ಬರಾಗಿದ್ದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ನೆನಪಿಸಿ ಕೊಂಡರು.
ಸ್ವಾತಂತ್ರ್ಯಾ ನಂತರ ಭಾರತದ ಅಭಿವೃದ್ಧಿಗೆ ಜಿಲ್ಲೆಯ ಹಲವಾರು ಮಹನೀಯರು ಶ್ರಮಿಸಿದ್ದು,ದೇಶದ ಪ್ರಗತಿಗೆ ಚಿನ್ನ,ಹಾಲು,ರೇಷ್ಮೆ ನೀಡಿದ ಕೀರ್ತಿ ಜಿಲ್ಲೆಗೆ ಸಲ್ಲುತ್ತದೆ ಎಂದರು. ಜಿಲ್ಲೆಯ ಪ್ರತಿಭಾನ್ವಿತರು ಭಾರತೀಯ ಆಡಳಿತ ಸೇವೆ ಮತ್ತು ಕರ್ನಾಟಕ ಆಡಳಿತ ಸೇವೆಯಲ್ಲಿ ತಮ್ಮದೇ ಮೈಲಿಗಲ್ಲನ್ನು ಸಾಧಿಸಿ ರುವುದಲ್ಲದೆ,ರಾಷ್ಟ್ರ ಸೇವೆಗೆ ಅನೇಕ ನ್ಯಾಯಾಧೀಶರನ್ನು ನೀಡಿ ಜಿಲ್ಲೆಯ ಗೌರವವನ್ನು ದೇಶದಲ್ಲಿ ಎತ್ತಿ ಹಿಡಿದೆಯೆಂದು ಅವರು ವಿವರಿಸಿದರು.

ಹಲವಾರು ವರ್ಷಗಳಿಂದ ಬರದಲ್ಲಿ ಬೆಂದ ಜನತೆ ಪ್ರಸ್ತುತ ವರ್ಷ ವರುಣನ ಕೃಪೆಯಿಂದ ಎಲ್ಲಾ ಕೆರೆಗಳು ಭರ್ತಿಯಾಗಿ ಜನತೆ ದೃಡ ವಿಶ್ವಾಸದಿಂದ ಬದಕು ಕಟ್ಟಿಕೊಳ್ಳಲು ಕೃಷಿ,ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆ ಕ್ಷೇತ್ರಗಳಲ್ಲಿ ವೈಜ್ಞಾನಿಕ ಪ್ರಯೋಗಗಳಿಂದ ದೇಶಕ್ಕೆ ಮಾದರಿಯಾಗಿದ್ದಾರೆಂದರು.

ಪೆರೇಡ್ ಕಮಾಂಡೆಂಟ್ ಎಂ.ಜಿ.ಜಮ್ಮನ್ನಾಳೆ ನೇತೃತ್ವದಲ್ಲಿ ಒಟ್ಟು ೨೪ ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದ್ದವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ೫ ಶಾಲೆಗಳ ಗ್ರೂಪ್ ತಂಡಗಳು ಮತ್ತು ೨೨ ಶಾಲೆಗಳ ವಿದ್ಯಾರ್ಥಿಗಳು ಸಾಮೂಹಿಕ ಪ್ರದರ್ಶನ ನೀಡಿದರು.

ಪೆರೇಡ್ ನಲ್ಲಿ ಭಾಗವಹಿಸಿದ್ದ ತಂಡಗಳಲ್ಲಿ ಉತ್ತಮ ಸಮವಸ್ತ್ರ ಧರಿಸಿದ್ದ ಸರ್ಕಾರಿ ಬಾಲಕರ ಕಾಲೇಜಿನ ಎನ್.ಸಿ.ಸಿ.ತಂಡ ಪ್ರಥಮ,ಪುರುಷ ಗೃಹ ರಕ್ಷಕದಳ ದ್ವಿತೀಯ, ಸರ್ಕಾರಿ ಮಹಿಳಾ ಕಾಲೇಜಿನ ಮಹಿಳಾ ಎನ್.ಸಿ.ಸಿ ತಂಡ ತೃತೀಯ ಬಹುಮಾನಗಳನ್ನು ಪಡೆದರು.

ಶಾಲಾ ತಂಡಗಳಲ್ಲಿ ಸುವರ್ಣ ಸೆಂಟ್ರಲ್ ಶಾಲೆ ಪ್ರಥಮ,ಬಿ.ಎಂ.ಎಸ್ ಶಾಲೆಯ ಬಾಲಕಿಯರ ತಂಡ ದ್ವಿತೀಯ, ಆರ್.ವಿ.ಇಂಟರ್ ನ್ಯಾಷನಲ್ ಶಾಲೆಯ ಬಾಲಕರ ತಂಡ ತೃತೀಯ ಬಹುಮಾನ ಪಡೆದವು.

ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಎಂ.ಎಲ್.ಸಿ ಗಳಾದ ಇಂಚರ ಗೋವಿಂದರಾಜು,ಅನಿಲ್ ಕುಮಾರ್,ಶಾಸಕ ಕೆ.ಶ್ರೀನಿವಾಸ ಗೌಡ,ನಗರ ಸಭೆ ಅಧ್ಯಕ್ಷೆ ಶ್ವೇತ ಶಭರೀಶ್,ಜಿಲ್ಲಾಧಿಕಾರಿ ವೆಂಕಟರಾಜ,ಜಿಲ್ಲಾ ರಕ್ಷಾಧಿಕಾರಿ ಎಂ. ನಾರಾಯಣ, ಜಿಪಂ ಸಿ.ಇ.ಒ ಯುಕೇಶ್ ಕುಮಾರ್ ಸೇರಿದಂತೆ ಹಲವಾರು ರಾಜಕೀಯ ಮುಖಂಡರುಗಳು,ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!