• Thu. May 2nd, 2024

PLACE YOUR AD HERE AT LOWEST PRICE

ಇಂದು ಶಾಸಕಿ ಡಾ ರೂಪಕಲಾ ಎಂ ಶಶಿಧರ್ ದೊಡ್ಡಗಾಂಡ್ಲಹಳ್ಳಿ ವಿ.ಎಸ್.ಎಸ್.ಎನ್. ಸೊಸೈಟಿಯ  ನೂತನ ಕಟ್ಟಡ ಉದ್ಘಾಟಸಿ ನಂತರ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಡೊಡ್ಡಗಾಂಡ್ಲಹಳ್ಳಿ ಸೊಸೈಟಿಯ ನೂತನ ಕಟ್ಟಡವನ್ನು ರೂ.30.00 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಕೋಲಾರ ಚಿಕ್ಕಬಳ್ಳಾಪುರ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಶ್ರೀ ಬ್ಯಾಲಹಳ್ಳಿ ಗೋವಿಂದಗೌಡ ಮತ್ತು ಶಾಸಕರು ಉದ್ಘಾಟನೆ ನೆರವೇರಿಸಿದರು.

ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ಮಹಿಳೆಯರು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ ಪುನಃ ಸಾಲ ಪಡದಿರುವ ಸ್ವ ಸಹಾಯ ಸಂಘದ ಎಲ್ಲಾ ಮಹಿಳಾ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸಿದರು.

ಒಂದು ಕುಟುಂಬದಲ್ಲಿ ಒಬ್ಬ ಮಹಿಳಾ ಸದಸ್ಯರನ್ನು ಆರ್ಥಿಕವಾಗಿ ಸಬಲರಾಗಿಸಿದಲ್ಲಿ ಇಡೀ ಕುಟುಂಬ ನೆಮ್ಮದಿಯಾಗಿ ಜೀವನವನ್ನು ಸಾಗಿಸಲಿದೆ. ಉತ್ತಮ ವಹಿವಾಟು ಹೊಂದಿರುವ ಸಂಘಗಳ ಸದಸ್ಯರಿಗೆ ರೂ.1.00 ಲಕ್ಷ ಸಾಲ ನೀಡಲು ಕ್ರಮವಹಿಸಲಾಗುವುದು ಎಂದರು.

ಮಹಿಳಾ ಸದಸ್ಯರಿಗೆ ಎ.ಟಿ.ಎಂ. ಕಾರ್ಡ್ ವಿತರಣೆ ಮಾಡುತ್ತಿದ್ದು ತಮ್ಮ ಹಣವವನ್ನು ಯಾವುದೇ ಬ್ಯಾಂಕಿನ ಎ.ಟಿ.ಎಂ. ನಿಂದ ಹಣ ಪಡೆಯಬಹುದು ಎಂದು ತಿಳಿಸಿದರು. 32 ಮಹಿಳಾ ಸಂಘಗಳಿಗೆ ಒಟ್ಟು. ರೂ.1.60 ಕೋಟಿ ಸಾಲ ವಿತರಣೆ ಮಾಡಲಾಯಿತು.

ಈ ವೇಳೆ ಕ್ಯಾಸಂಬಳ್ಳಿ ಸೋಸೈಟಿ ಅದ್ಯಕ್ಷ ವಿಜಯರಾಘವರೆಡ್ಡಿ, ಬೇತಮಂಗಲ ಸೊಸೈಟಿ ಅದ್ಯಕ್ಷ ಕಾರಿ ಪ್ರಸನ್ನ, ರಾಜ್ಯ ಮೀನು ಸಾಕಾಣಿಕೆದಾರರ ಸಹಕಾರ ಸಂಘದ ಮುಖಂಡ ಆ.ಮು.ಲಕ್ಷ್ಮೀನಾರಾಯಣ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!