• Thu. May 2nd, 2024

PLACE YOUR AD HERE AT LOWEST PRICE

ಬೇತಮಂಗಲ ಗ್ರಾಮದ ಹೊಸ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇಗುಲ 3 ದಿನಗಳಿಂದ ವಿವಿಧ ಪೂಜಾ ಹಾಗೂ ಹೋಮ- ಹವನಗಳೊಂದಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಕೃಷ್ಣ ರಕ್ಷಾ ದೇಗುಲದ ಜೀರ್ಣೋದ್ದಾರವನ್ನು ಉಡುಪಿಯ ಪ್ರಸಿದ್ಧ ವೇಧ ಬ್ರಾಹ್ಮಣರಿಂದ ವಿವಿಧ ಪೂಜಾ ಕೈಕರ್ಯಗಳು ಹಾಗೂ ಪ್ರಾಣ ಪ್ರತಿಷ್ಠಾಪನೆ, ದೇವಿಯ ನಾಮಸ್ಮರಣೆ, ಯಕ್ಷಗಾನ, ಮಹಿಳೆಯಿಂದ ದೇವತಾ ಗೀತೆಗಳ ಜಪದೊಂದಿಗೆ ಮೂರು ದಿನಗಳ ಕಾಲ ಯಶಸ್ವಿಯಾಗಿ ಪೂಜೆಗಳು ನಡೆಯಿತು.

ಗುರುವಾರ ಶ್ರೀ ಕೃಷ್ಣ ಪ್ರತಿಷ್ಠಾಪನೆ, ವಿಶೇಷ ಪೂಜೆ, ಸುದರ್ಶನ ಚಕ್ರ ಪ್ರಾತಿಷ್ಠಾಪನೆ ಹಾಗೂ ಮಹಾಮಂಗಳಾರತಿಯೊಂದಿಗೆ ಪ್ರಾಣ ಪ್ರತಿಷ್ಠಾಪನೆಯನ್ನು ನಡೆಸಲಾಯಿತು. ಸುಮಾರು 100 ಕೆ.ಜಿಯ ಸುದರ್ಶನ ಚಕ್ರವನ್ನು ದೇಗುಲದ ಗೋಪುರದ ಮೇಲೆ ಪ್ರತಿಷ್ಠಾಪನೆ ಮಾಡಲಾಯಿತು.

ಶ್ರೀ ಕೃಷ್ಣ ರಕ್ಷಾ ಸುದರ್ಶನವನ್ನು ವಿವಿಧ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತು, ವಿದ್ಯುತ್ದೀಪಗಳಿಂದ ದೇಗುಲ ಹಾಗೂ ಗ್ರಾಮವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು.

ಶ್ರೀ ಕೃಷ್ಣ ರಕ್ಷಾ ಸುದರ್ಶನ ದೇಗುಲ ಪ್ರಾತಿಷ್ಠಾಪನೆಯ ಪೂಜೆಯಲ್ಲಿ ಕೆಜಿಏಫ್ ಶಾಸಕಿ ರೂಪಕಲಾ, ಹಿರಿಯೂರು ಶಾಸಕಿ ಪೂರ್ಣಿಮ, ವಿಧಾನ ಪರಿಷತ್ ಸದಸ್ಯ ನಾಗರಾಜ್, ಯಾದವ ಸಮುದಾಯದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ್ ಗೌಡ.

ಆಂಧ್ರ ಪ್ರದೇಶದ ಗೋವಿಂದ್ ಯಾದವ್, ಕೆಜಿಏಫ್ ಮಾಜಿ ಶಾಸಕ ವೈ.ಸಂಪಂಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು, ಸಮಾಜ ಸೇವಕರಾದ ವಿ.ಮೋಹನ್ ಕೃಷ್ಣ, ಕಮ್ಮಸಂದ್ರ ಸುರೇಶ್, ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಯಾದವ ಸಮುದಾಯದ ಮುಖಂಡರಾದ ನಾಗರಾಜ್, ಶಂಕರಪ್ಪ, ಶ್ರೀನಿವಾಸ್, ಅಶ್ವಥ್, ನಾರಾಯಣಸ್ವಾಮಿ, ಶಿವಪ್ಪ ಸೇರಿದಂತೆ ಸಮುದಾಯದ ಮುಖಂಡರು ಹಾಗೂ ನೂರಾರೂ ಭಕ್ತರು ದೇವರ ಕೃಫೆಗೆ ಪಾತ್ರರಾದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!