• Tue. May 14th, 2024

ಮಕ್ಕಳಿಗೆ ಆಸ್ತಿ ಮಾಡದೆ ವಿದ್ಯೆ ಕಲಿಸಿ:ಬಟ್ಟುವಾರಹಳ್ಳಿಯಲ್ಲಿ ಶಂಕರಪ್ಪ.

PLACE YOUR AD HERE AT LOWEST PRICE

ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಜಮೀನು,ಆಸ್ತಿ,ಬಂಗಾರ, ನೀಡದೇ ಇದ್ಧರೂ  ಪರವಾಗಿಲ್ಲ ಎಲ್ಲಾ ಮಕ್ಕಳಿಗೆ ಪ್ರತಿಯೊಬ್ಬರೂ ಶಿಕ್ಷಣ, ವಿದ್ಯಾಭ್ಯಾಸ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಂಕರಪ್ಪ ತಿಳಿಸಿದರು.

ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಬಟ್ಟುವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಈ ಶಾಲೆಯ ವಿದ್ಯಾರ್ಥಿಗಳ ಹಾಗೂ ಶಾಲೆಯ ಸರ್ವಾಂಗಣ ಅಭಿವೃದ್ದಿಗಾಗಿ ನಮ್ಮ ಎಲ್ಲಾ  ಸಹಕಾರ ನೀಡಲು ಸದಾ ಸಿದ್ಧವಿದ್ದೇವೆ ,ಶಾಲಾ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ಎಲ್ಲಾ ಸೌಲಭ್ಯಗಳು ಸಲಕರಣೆಗಳನ್ನು ನೀಡಲು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಈ ಹಿಂದೆ ಈ ಶಾಲೆಯಲ್ಲಿ ಗಂಡ ಹೆಂಡತಿ ಇಬ್ಬರೂ ಶಿಕ್ಷಕರು ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಅಂತಹ ಸಂದರ್ಭದಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡದೆ ನಿರ್ಲಕ್ಷೆತೆ ವಹಿಸಿದ್ದರು.

ಹೆಂಡತಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿದರೆ, ಶಿಕ್ಷಕ ಶಾಲೆ ಬಿಟ್ಟು ಪಕ್ಕದಲ್ಲಿಯೇ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದರು. ಈ ವಿಚಾರವಾಗಿ ಗ್ರಾಮಸ್ಥರೆಲ್ಲರೂ ಸೇರಿ ಈ ಶಾಲೆಯ ಮತ್ತು ಮಕ್ಕಳ ಭವಿಷ್ಯದ ಉದ್ದೇಶದಿಂದ ಬಿ ಇ ಓ ರವರಿಗೆ ದೂರು ನೀಡಲಾಗಿತ್ತು.

ಆಗ ಬಿ ಇ ಓ ರವರು ಈ ಶಾಲೆಗೆ 2 ಬಾರಿ ಭೇಟಿ ನೀಡಿದಾಗ ಶಿಕ್ಷಕರು ಶಾಲೆಯಲ್ಲಿ ಇಲ್ಲದೆ ಗೈರು ಹಾಜರಾಗಿದ್ದರು, ಪುನಃ ಮತ್ತೂಂದು ಬಾರಿ ಭೇಟಿ ನೀಡಿದಾಗ ಶಿಕ್ಷಕರು ಶಾಲೆಯಲ್ಲಿ ಇಲ್ಲದೆ ಗೈರು ಹಾಜರಾಗಿದ್ದರು ಇದ್ದನ್ನು ನೋಡಿ ಶಿಕ್ಷಕರನ್ನು ಅಮಾನತ್ತು ಮಾಡಿದ್ದರು.

ನಂತರ ನಾರಾಯಣಸ್ವಾಮಿ ಮತ್ತು ತ್ರಿವೇಣಮ್ಮ ಶಾಲೆಗೆ ಬಂದು ಒಳ್ಳೆಯ ಶಿಕ್ಷಣ ನೀಡುತ್ತಿದ್ದಾರೆ, ನಮ್ಮ ಗ್ರಾಮಸ್ಥರು ಯಾವುದೇ ತೊಂದರೆ ನೀಡುವುದಿಲ್ಲ ಇನ್ನು ಹೆಚ್ಚಿನ ರೀತಿಯಲ್ಲಿ ಅವರಿಗೆ ಪ್ರೋತ್ಸಾಹ ಬೇಕಾದಂತಹ ಸಹಕಾರ ಹಾಗೂ ಇನ್ನೂ ಅನೇಕ ಸೌಲಭ್ಯಗಳು ನೀಡುವಲ್ಲಿ ಸದಾ ಸಿದ್ಧವಿರುತ್ತೇವೆಂದು ತಿಳಿಸಿದರು.

ಎಲ್ಲ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದಿದ್ದರೆ ಎಲ್ಲಿ ಬೇಕಾದರೂ ಹೋಗಿ ಒಳ್ಳೆ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ತಂದೆ ತಾಯಿಗಳು ಪ್ರತಿಯೊಬ್ಬ ಮಕ್ಕಳನ್ನು ಶಾಲೆಗೆ ಸೇರಿಸಿ ಒಳ್ಳೆಯ ಶಿಕ್ಷಣವನ್ನು ಪಡೆಯುವಂತೆ ಮಾಡಬೇಕೆಂದರು.

ಈ ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಮಾಡಲಾಯಿತು . ಶಾಲೆಯ ಆವರಣದಲ್ಲಿ ರಾಷ್ಟ್ರಧ್ವಜವನ್ನು ಆರಿಸಿ ನಂತರ ಭಾರತಾಂಬೆ ಅಂಬೇಡ್ಕರ್ ಮಹಾತ್ಮ ಗಾಂಧಿ  ಭಾವಚಿತ್ರಗಳನ್ನು ಬೀದಿಗಳಲ್ಲಿ ಮೆರವಣಿಗೆ ಮಾಡಿ, ಪೂಜೆ ಮಾಡಿ ಸಿಹಿ ತಿಂಡಿ ಹಂಚಿಕೊಳ್ಳಿ ವಿಶೇಷವಾಗಿತ್ತು.

ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಈ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮದ ಕೆಲವು ಧಾನಿಗಳು ಪ್ರಮುಖ ವ್ಯಕ್ತಿಗಳು ಈ ಶಾಲೆಗೆ ಬೇಕಾದಂತ ಅನೇಕ ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದು ಅತಿ ವಿಶೇಷವಾಗಿತ್ತು.

ಶಾಲೆಯ ಎಲ್ಲಾ ಮಕ್ಕಳಿಗೆ ಪುಸ್ತಕ ಪೆನ್ನು ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಹಾಗೂ ಶಾಲೆಗೆ ಬೇಕಾದ ವೀಲ್ ಚೇರುಗಳು ,ವಾಟರ್ ಫಿಲ್ಟರ್, ಚೇರುಗಳು, ಸೀಲಿಂಗ್ ಫ್ಯಾನ್ ,ಕುಕ್ಕರ್, ಮಿಕ್ಸಿ  ಮೊದಲಾದವುಗಳನ್ನು ನೀಡಲಾಯಿತು.

ಅಂಗನವಾಡಿಗೆ ಒಂದು ಬೀರುವ , ಹಲಗೆ ಅಡುಗೆ ಕೋಣೆಯಲ್ಲಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಬಾಕ್ಸ್ ಗಳು, ಶಾಲೆಗೆ ಬೇಕಾದ ಧ್ವನಿವರ್ಧಕ ಸೌಂಡ್ ಸಿಸ್ಟಮ್ ಅನ್ನು ಸಹ ಶಾಲೆಗೆ ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ್, ಪಂಚಾಯತಿ ಸದಸ್ಯರಾದ ರಾಮಕೃಷ್ಣಪ್ಪ, ಸಿ ಆರ್ ಪಿ ರುದ್ರಪ್ಪ ,ಹಿರಿಯ ಮುಖಂಡರಾದ ಬಿ.ಎಮ್ ಶ್ರೀನಿವಾಸ್ ರೆಡ್ಡಿ ನಾರಾಯಣಗೌಡ್ರು , ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಯದುರಾಯ ಗೌಡ, ಯುವಕರಾದ ಮೋಹನ್ ಬಾಬು, ಶ್ರೀರಾಂ ಗೌಡ ,ಬ್ರಹ್ಮಾನಂದ ರೆಡ್ಡಿ ,ರವಣಪ್ಪ ,ಮಂಜುನಾಥ್ ರೆಡ್ಡಿ, ಮುನಿರೆಡ್ಡಿ,  ಕುಮಾರ್ ಶ್ರೀರಾಮ ರೆಡ್ಡಿ, ವೆಂಕಟರಾಮಪ್ಪ ಸೋಮಶೇಖರ್ ರೆಡ್ಡಿ, ಶಾಲೆಯ ಮುಖ್ಯ ಶಿಕ್ಷಕರಾದ ಎಂ ನಾರಾಯಣಸ್ವಾಮಿ ಶಿಕ್ಷಕಿರಾದ ತಿಮ್ಮಕ್ಕ ತ್ರಿವೇಣಮ್ಮ, ನೋಡಲ್ ಕಾರ್ಯಕರ್ತೆ ಶೈಲಜ, ಆಶಾ ಕಾರ್ಯಕರ್ತೆ ಗೀತಾ ಅಡಿಗೆ ಸಿಬ್ಬಂದಿ , ಮತ ಮಹಿಳಾ ಪ್ರತಿನಿಧಿ ಸುಬ್ಬಲಕ್ಷ್ಮಿ, ವಿಜಯ್ ಕುಮಾರ್, ಲಕ್ಷ್ಮಣ  ಗ್ರಾಮಸ್ಥರು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!