• Tue. May 14th, 2024

ಸಾಲ ಕೊಡಿಸಲು ಮಧ್ಯಸ್ಥಿಕೆ ವಹಿಸಿದ್ದ ಮಹಿಳೆ ಆತ್ಮಹತ್ಯೆ.

PLACE YOUR AD HERE AT LOWEST PRICE

ಮಧ್ಯಸ್ತಿಕೆ ವಹಿಸಿ ಸ್ನೇಹಿತರಿಂದ ಮೊತ್ತೊಬ್ಬಳ ಸ್ನೇಹಿತೆಯರಿಗೆ ಬಡ್ಡಿಗೆ ಸಾಲವಾಗಿ ಹಣವನ್ನು ಕೊಡಿಸಿದ್ದ ಮಹಿಳೆಯೊಬ್ಬರು ಸಾಲಗಾರರಿಂದ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ಸರಹದ್ದಿನ ಹುಲಿಬೆಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅತ್ತಿಗಿರಿಕೊಪ್ಪ ಗ್ರಾಮದ ಸುಬ್ರಮಣಿ ಎಂಬುವವರ ಪತ್ನಿ ಪದ್ಮ (36) ಎಂಬುವವರು ಶೌಚಾಲಯದಲ್ಲಿ ವಾಸನೆ ಬರದೇ ಇರಲು ಹಾಕುವ ವಿಷದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ.

ಅತ್ತಿಗಿರಿಕೊಪ್ಪ ಗ್ರಾಮದ ಭಾಗ್ಯ ಹಾಗೂ ಚಂಬರಸಿ ಎಂಬ ಇಬ್ಬರು ಮಹಿಳೆಯರಿಗೆ ಮೃತಪಟ್ಟ ಪದ್ಮ ಅವರು, ಇವರ ಸ್ನೇಹಿತೆಯಾದ ದೇಶಿಹಳ್ಳಿ ವರಲಕ್ಷ್ಮಿ ಎಂಬುವವರಿಂದ ತಲಾ ಎರಡು ಲಕ್ಷಗಳು ಬಡ್ಡಿಗೆ ಸಾಲವನ್ನು ಕೊಡಿಸಿದ್ದಳು.

ಹಲವಾರು ದಿನಗಳಿಂದ ಸಾಲ ಹಾಗೂ ಬಡ್ಡಿಯನ್ನು ನೀಡದೇ ಸತಾಯಿಸುತ್ತಿದ್ದರಿಂದ ಸಾಲ ಕೊಟ್ಟವರು ಆತ್ಮಹತ್ಯೆ ಮಾಡಿಕೊಂಡ ಪದ್ಮರವರನ್ನು ಹಿಗ್ಗಾಮುಗ್ಗಾ ನಿಂದಿಸಿದ್ದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ ಯಾರೂ ಇಲ್ಲದ ಸಮಯದಲ್ಲಿ ಕಳೆದ ತಿಂಗಳು ಶೌಚಾಲಯದ ಪಿಟ್‍ನಲ್ಲಿ ದುರ್ವಾಸನೆ ಬರುತ್ತಿರುವುದರಿಂದ ಯಾವುದೋ ವಿಷದ ಮಾತ್ರೆಗಳು ತಂದು ಹಾಕಿದ್ದು, ಕೆಲವು ಮಾತ್ರೆಗಳು ಉಳಿದಿದ್ದು, ಈ ಉಳಿದ ಮಾತ್ರೆಗಳನ್ನು ಹೊಟ್ಟೆಗೆ ಸೇವಿಸಿದ್ದಾರೆ.

ಇದಕ್ಕೂ ಮುಂಚೆ ಯಾರಿಗೇ ಎಷ್ಠೇಷ್ಠು ಸಾಲ ಕೊಡಿಸಿರುವ ಬಗ್ಗೆ ಹಾಗೂ ಸಾಲ ಕೊಟ್ಟವರು ನಿಂದಿಸಿರುವುದರಿಂದ ತೀರಾ ಬೇಸರಗೊಂಡು ಸಾವನ್ನಪ್ಪುತ್ತಿದ್ದು, ನನ್ನ ಸಾವಿಗೆ ಇವರೇ ಕಾರಣವೆಂದು ಹೇಳಿ ಈ ವಿಚಾರವನ್ನು ತನ್ನ ಮೊಬೈಲ್‍ನಲ್ಲಿ ವಿಡೀಯೋ ಮಾಡಿದ್ದಾರೆ, ಇದು ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಕುಟುಂಬ ವರ್ಗದವರು ಹೇಳಿದ್ದಾರೆ.

ಮೃತರಿಗೆ ಗಂಡ, ಇಬ್ಬರು ಪುತ್ರಿಯರು ಹಾಗೂ ಒಂದು ಗಂಡು ಮಗು ಇದ್ದಾರೆ. ಸಾಲ ಪಡೆದುಕೊಂಡವರು ಭಾಗ್ಯ ಮತ್ತು ಚಂಬರಸಿ ವಿಷಯ ತಿಳಿದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಬೂದಿಕೋಟೆ ಸಬ್ ಇನ್ಸ್‍ಪೆಕ್ಟರ್ ಸಮೀವುಲ್ಲಾ, ಎಎಸ್‍ಐ ಎಲ್.ರಘು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!