• Fri. May 17th, 2024

ಕೆಜಿಎಫ್:ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಯಶಸ್ವಿ ರಕ್ತದಾನ ಶಿಬಿರ.

PLACE YOUR AD HERE AT LOWEST PRICE

ಅವಶ್ಯಕತೆ ಇರುವವರಿಗೆ ರಕ್ತ ದಾನ ಮಾಡುವ ಅಭ್ಯಾಸವನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು, ರಕ್ತದಾನಕ್ಕಿಂತ ಮಹಾದಾನವಿಲ್ಲವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ಅಭಿಪ್ರಾಯಪಟ್ಟರು.

ಅವರು ಕೆಜಿಎಫ್ ಡಿ.ಎ.ಆರ್. ಕಛೇರಿಯಲ್ಲಿ ಶುಕ್ರವಾರದಂದು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೆಜಿಎಫ್ ಜಿಲ್ಲಾ ಪೊಲೀಸ್ ವತಿಯಿಂದ ಲಯನ್ಸ್ ಕ್ಲಬ್ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದ ಅವಶ್ಯಕತೆ ಇರುವವರಿಗೆ, ಅಪಘಾತದಲ್ಲಿ ರಕ್ತ ಕಳೆದುಕೊಂಡವರಿಗೆ, ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದೆ ಇರುತ್ತದೆ, ಅಂತಹವರಿಗೆ ರಕ್ತದಾನ ಮಾಡುವ ಮೂಲಕ ಜೀವಕ್ಕೆ ಕುತ್ತು ಬಾರದಂತೆ ಕಾಪಾಡುವಂತಾಗಬೇಕೆಂದು ಅವರು ಕರೆ ನೀಡಿದರು.

ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಡಿವೈಎಸ್ಪಿ ವಿ.ಎಲ್.ರಮೇಶ್, ಪೊಲೀಸ್ ಇನ್ಸ್‍ಪೆಕ್ಟರ್ ಪಿ.ಜೆ.ಮಧುಕರ್, ಮಾರ್ಕೋಂಡಯ್ಯ, ಆರ್‍ಪಿಐ ವಿ.ಸೋಮಶೇಖರ, ಪಿಎಸ್‍ಐ ಪ್ರದೀಫ್, ವಿದ್ಯಾಶ್ರೀ.

ಲಿಪಿಕ ಸಿಬ್ಬಂದಿಗಳಾ ಎಸ್.ಹರೀಶ್, ಎಂ.ನವೀನ್, ವಿಜಯಸಿಂಹ, ಎಸ್‍ಪಿ ರವರ ಪುತ್ರ ಯಕ್ಷ್ ಅವರುಗಳು ಪ್ರಾರಂಭಿಕವಾಗಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಶಿಬಿರವು ಯಶಸ್ವಿಯಾಯಿತು.

ಲಯನ್ಸ್ ಕ್ಲಬ್ ರಕ್ತನಿಧಿ ಕೇಂದ್ರದ ಡಾ|| ಪ್ರಕೃತಿ ಪ್ರಸನ್ನ ಅವರು ರಕ್ತದಾನ ಶಿಬಿರದ ಉಸ್ತುವಾರಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!