• Fri. May 17th, 2024

ಕುಶಾಲನಗರದಲ್ಲಿ ಪಂಚರತ್ನ ಪ್ರಚಾರ ವಾಹನ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪ್ರಕರಣ ದಾಖಲು

PLACE YOUR AD HERE AT LOWEST PRICE

ರಾಜ್ಯದಲ್ಲಿ ಚುನಾವಣೆ ಕಾವು ದಿನೇ ದಿನೇ ಹೆಚ್ಚಾದಂತೆ ರಾಜಕೀಯ ಪಕ್ಷಗಳು ತಮ್ಮ ಇತಿಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರವಾಗಿದೆ. ನಾವು ಭಾರತ ದೇಶದಲ್ಲೇ ಇದ್ದೀವಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಏನಾಗಿದೆ ಈ ನಾಗರೀಕ ಸಮಾಜಕ್ಕೆ, ಏನೇ ಅನ್ಯಾಯವಾದರೂ ಪ್ರಶ್ನೆ ಮಾಡುವುದನ್ನೇ ಮರೆತು ಜಡ್ಡುಗಟ್ಡಿನಿಂತಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಳ್ಳುವಂತ ವಾತಾವರಣ ನಿರ್ಮಾಣ ಮಾಡುತ್ತಿದ್ದರೂ ಸುಮ್ಮನೆ ಕೂತರೆ, ಈ ದೇಶ ಸ್ವಾತಂತ್ರö್ಯ ಹೋರಾಟ ಮಾಡಿದ್ದು ಯಾಕಾಗಿ, ಬರೀ ಆಂಗ್ಲರನ್ನು ಓಡಿಸಲು ಮಾತ್ರವೇ ಅದರಿಂದ ಆಚೇ ಬೇರೆ ಸಮಗ್ರವಾದ ದೇಶ ನಿರ್ಮಾಣದ ಆಶಯವೇ ಇರಲಿಲ್ಲವೇ? ಈ ದೇಶದ ಸಂವಿಧಾನಕ್ಕೆ ಗೌರವ  ಕೊಡದವರು ದೇಶದ ನಾಗರೀಕರಾಗಲು ಹೇಗೆ ಸಾಧ್ಯ.

ಕೊಡಗಿನಂತಹ ಸುಸಂಸ್ಕೃತ ಮತ್ತು ಪ್ರಜ್ಞಾವಂತ ನಾಗರೀಕರ ನಾಡಿನಲ್ಲಿ ರಾಜಕಾರಣಿಯೊಬ್ಬರು ತನ್ನನ್ನು ಅಭಿವೃದ್ಧಿ ವಿಚಾರದಲ್ಲಿ ಟೀಕಿಸಿದರು ಎನ್ನುವ ಏಕೈಕ ಕಾರಣಕ್ಕೆ ದೂರವಾಣಿ ಕರೆ ಮಾಡಿ ಕೊಲೆ ಬೆದರಿಕೆ ಒಡ್ಡುತ್ತಾರೆ ಎನ್ನಲಾಗುತ್ತಿದೆ. ಇಲ್ಲಿನ ಆಡಳಿತ ಏನು ಮಾಡುತ್ತಿದೆ ಅನ್ನೋ ಪ್ರಶ್ನೆಗೆ ಉತ್ತರ ಕೊಡುವ ಜವಾಬ್ದಾರಿ ಯಾರದು? ಹಾಗಾದರೆ ಕೊಡಗಿನಲ್ಲಿ ಇದುವರೆಗೆ ಇಲ್ಲಿ ಜನ ಪ್ರತಿನಿಧಿಗಳಾಗಿ ಆಯ್ಕೆಯಾದವರು ಜನಸಾಮಾನ್ಯರ ಪ್ರೀತಿಯಿಂದಲ್ಲ ಬದಲಿಗೆ ಗೂಂಡಾಗಳ ತೋಳ್ಬಲದ ಭಯ ಹುಟ್ಟಿಸಿ ಎನ್ನುವ ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ.

ಇದು ಬರೀ ಕೊಡಗಿಗೆ ಮಾತ್ರ ಸೀಮಿತವಾಗಿದೆ ಅಂತ ಹೇಳಲಾಗದು, ಈ ರೀತಿಯ ವಾತಾವರಣ ಇಡೀ ರಾಜ್ಯದಲ್ಲಿ ಇದೆಯಾದರೂ ಅದು ಅಗೋಚರ ರೂಪದಲ್ಲಿ ತನ್ನ ವಿಷ ಬೇರುಗಳನ್ನು ಹರಡಿದೆ. ಕರ್ನಾಟಕ ರಾಜಕೀಯವಾಗಿ ಎಷ್ಟೇ ವಿಭಿನ್ನ ತಿರುವುಗಳನ್ನು ಪಡೆದರೂ ಅದು ಬಹಳ ಆರೋಗ್ಯಕರ ವಾತಾವರಣದಲ್ಲೇ ದೇಶಕ್ಕೆ ಸಂದೇಶ ರವಾನೆ ಮಾಡಿರುವುದು ಇತಿಹಾಸ. ಆದರೆ, ಈಗಿನ ಸ್ಥಿತಿ ನೋಡಿದರೆ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಸೃಷ್ಠಿಸಿದೆ ಎಂದರೆ ತಪ್ಪಾಗಲಾರದು.

ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷಗಳ ಅಸಂವಿಧಾನಿಕ ಅಥವಾ ಜನವಿರೋಧಿ ನಡೆಗಳ ಗೋಚರವಾದಾಗ, ಅದರ ವಿರುದ್ಧ ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸುವುದು, ಆ ಮೂಲಕ ಆಡಳಿತ ವ್ಯವಸ್ಥೆಯ ಸುಧಾರಣೆ ಕಡೆಗೆ ಸರ್ಕಾರದ ಗಮನ ಸೆಳೆಯುವುದು ವಿರೋಧ ಪಕ್ಷಗಳ ಗುರತರ ಜವಾಬ್ದಾರಿ ಹಾಗೂ ಕರ್ತವ್ಯವೂ ಕೂಡ. ಈ ಟೀಕೆ ಟಿಪ್ಪಣಿಗಳನ್ನು ವೈಯಕ್ತಿಕ ನೆಲೆಯಲ್ಲಿ ಪರಿಗಣಿಸುವುದಾಗಲೀ ಅಥವಾ ದ್ವೇಷ ಸಾಧನೆಗೆ ಸಾಧಕ ಮಾಡಿಕೊಂಡರೆ ಅದು ಸುಧಾರಣೆಗಿಂತ ಅಸಹಿಷ್ಣತೆಗೆ ದಾರಿ ಮಾಡುತ್ತದೆ.

ಈ ಪರಿಸ್ಥಿತಿಯಲ್ಲಿ ಶುಕ್ರವಾರ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥ ಯಾತ್ರೆಯ ಪ್ರಚಾರವಾಹನ ಚಾಲಕನ ಮೇಲೆ ಕುಶಾಲನಗರದ ಬಳಿ ತೀವ್ರ ಹಲ್ಲೆ ಮತ್ತು ಹತ್ಯೆ ಯತ್ನ ನಡೆಸಿರುವುದು ಕೊಡಗಿನಂತಹ ವೀರ ಶೂರರ ನಾಡಿನ ಜನರಿಗೆ ಮಾಡಿರುವ ಅವಮಾನವಾಗಿದೆ. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಟ್ಟಿನಲ್ಲಿ ಇಂತಹ ಘಟನೆಗಳು ನಡೆದಾಗ ರಾಜಕೀಯ ಪಕ್ಷಗಳು ಪರಸ್ಪರ ಕೆಸರು ಎರಚಿಕೊಳ್ಳುವುದು ಸಹಜವೇ ಆದರೂ, ಪಂಚರತ್ನ ಪ್ರಚಾರ ವಾಹನ ಚಾಲಕ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ನಿಜವಾಗಲೂ ರಾಜಕೀಯ ಪ್ರೇರಿತವಾಗಿದೆಯಾ ಅಥವಾ ವೈಯಕ್ತಿಕ ನೆಲೆಯಲ್ಲಿ ನಡೆದಿದೆಯಾ ಎನ್ನು ಸತ್ಯ ಬಯಲಾಗಬೇಕಿದೆ. ಕಾರ್ಯಾಂಗ ತನ್ನ ನ್ಯಾಯ ಸಮ್ಮತ ಭದ್ರತೆಯನ್ನು ಸಮಾಜಕ್ಕೆ ಖಾತ್ರಪಡಿಸುವ ಅನಿವಾರ್ಯವಿದೆ. ಚುನಾವಣಾ ಆಯೋಗವೂ ಸಹ ಮುಕ್ತ ಹಾಗೂ ನಿರ್ಭಯ ಚುನಾವಣಾ ವಾತಾವರಣ ನಿರ್ಮಾಣಕ್ಕೆ ಸಜ್ಜಾಗುವುದೇ ಕಾದು ನೋಡಬೇಕು.

 

ಪ್ರತಿಕ್ರಿಯೆ:

“ಶಾಸಕ ಅಪ್ಪಚ್ಚು ರಂಜನ್ ತನ್ನನ್ನು ಅಭಿವೃದ್ಧಿ ವಿಚಾರದಲ್ಲಿ ಟೀಕಿಸಿದರು ಎನ್ನುವ ಏಕೈಕ ಕಾರಣಕ್ಕೆ ಜೆಡಿಎಸ್ ಪಕ್ಷದ ನಾಯಕ ನಾಪ೦ಡ ಮುತ್ತಪ್ಪನವರಿಗೆ ದೂರವಾಣಿ ಕರೆ ಮಾಡಿ ನಿನಗೊಂದು ಗತಿ ಕಾಣಿಸುತ್ತೇನೆ ಎಂದು ಯಾವುದೇ ಕಾನೂನಿನ ಭಯವಿಲ್ಲದೆ ಕೊಲೆ ಬೆದರಿಕೆ ಒಡ್ಡುತ್ತಾರೆ. ಮಧ್ಯಾಹ್ನ ಶಾಸಕರ ಬೆದರಿಕೆಯ ಕರೆ ಬರುತ್ತದೆ ಮತ್ತು ರಾತ್ರಿ ಶಾಸಕರ ಗೂಂಡಾಗಳು ಜೆಡಿಎಸ್ ಪಕ್ಷದ ಪಂಚರತ್ನ ರಥ ಯಾತ್ರೆಯ ವಾಹನ ಚಾಲಕನ ಮೇಲೆ ಕುಶಾಲನಗರದ ಬಳಿ ತೀವ್ರ ಹಲ್ಲೆ ಮತ್ತು ಹತ್ಯೆಯತ್ನ ನಡೆಸಿರುವುದು ಕೊಡಗಿನ ಜನರಿಗೆ ಮಾಡಿರುವ ಅವಮಾನವಾಗಿದೆ.

ಶಾಸಕರ ಆಡಳಿತ ವೈಫಲ್ಯದಿಂದ ಈ ಬಾರಿ ಕ್ಷೇತ್ರದ ಜನರು ರೋಸಿ ಹೋಗಿರುವುದು ಮತ್ತು ಅಭಿವೃದ್ಧಿ ಹಳ್ಳ ಹಿಡಿದಿರುವುದರಿಂದ ಈ ಬಾರಿ ಬಿಜೆಪಿಗೆ ಐತಿಹಾಸಿಕ ಸೋಲು ಉಂಟಾಗಲಿದೆ ಮತ್ತು ನಾಪಂಡ ಮುತ್ತಪ್ಪನವರು ಇತ್ತೀಚಿಗೆ ಗಳಿಸುತ್ತಿರುವ ಜನಬೆಂಬಲ ನೋಡಿ ಹತಾಶೆಗೆ ಒಳಗಾಗಿ ಶಾಸಕರು ಈ ದುಸ್ಸಾಹಸಕ್ಕೆ ಮುಂದಾಗಿರುವುದು ನಿಜಕ್ಕೂ ವಿಷಾದಕರ ಮತ್ತು ಖಂಡನೀಯ, ಚುನಾವಣೆಗೂ ಮುನ್ನವೇ ಈ ರೀತಿಯ ದಬ್ಬಾಳಿಕೆ, ಗೂಂಡಾಯಿಸo, ಹತ್ಯೆ ಯತ್ನ ಕೊಡಗಿನ ರಾಜಕೀಯಕ್ಕೆ ಶೋಭೆ ತರದು ಮತ್ತು ಈ ರೀತಿಯ ದುಷ್ಟ ನಡವಳಿಕೆ ಕೊಡಗಿನಲ್ಲಿ ನ್ಯಾಯ ಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ ಎನ್ನುವ ಸಂದೇಶ ರವಾನೆ ಮಾಡಿದ್ದು ದಯವಿಟ್ಟು ಚುನಾವಣಾ ಆಯೋಗ ಕೊಡಗಿನ ಮಡಿಕೇರಿ ಕ್ಷೇತ್ರಕ್ಕೆ ವಿಶೇಷ ವೀಕ್ಷಕರನ್ನು ಈಗಲೇ ರವಾನೆ ಮಾಡಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಕೊಡಗಿನ ಜನರು ಆಗ್ರಹಿಸುತ್ತಿದ್ದಾರೆ.”

ನಾಪಂಡ ಮುದ್ದಪ್ಪ, ಕಾರ್ಮಿಕ ಮುಖಂಡರು, ಬೆಂಗಳೂರು.

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!