• Fri. May 3rd, 2024

ಕೆಜಿಎಫ್‌:ಶಾಸಕರ ದುರಾಡಳಿತ ಅಂತ್ಯವಾಗಬೇಕಿದೆ: ಬಿಜೆಪಿ ವಿ.ಮೋಹನ್ ಕೃಷ್ಣ.

PLACE YOUR AD HERE AT LOWEST PRICE

ಕೆಜಿಎಫ್ ಕ್ಷೇತ್ರದಲ್ಲಿ ನಿರುದ್ಯೋಗ ಸೃಷ್ಠಿಯಾಗಿದ್ದು, ಕಾಂಗ್ರೆಸ್ ಸರ್ಕಾರದ ಮಾಜಿ ಕೇಂದ್ರ ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಶಾಸಕಿ ರೂಪಕಲಾ ಅವರೇ ಕಾರಣವೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ವಿ.ಮೋಹನ್
ಕೃಷ್ಣ ಆರೋಪಿಸಿದರು.
ಬೇತಮಂಗಲದ ಅಶ್ವಿನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೋಹನ್ ಕೃಷ್ಣ ಯುವ ಸೇನೆ ಬಿಜೆಪಿ ಸೇರ್ಪಡೆ
ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇದಕ್ಕೂ ಮುನ್ನ ಬಸ್ ನಿಲ್ಧಾಣದ ಡಾ.ಅಂಬೇಡ್ಕರ್ ಪತ್ಥಳಿಗೆ ಮೋಹನ್ ಕೃಷ್ಣ ಮಾಲಾರ್ಪಣೆ ಮಾಡಿದರು.
ನಂತರ ಕ್ರೇನ್ ಮೂಲಕ ಬಿಜೆಪಿ ಮುಖಂಡ ವಿ.ಮೋಹನ್ ಕೃಷ್ಣ, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್
ನಾಯ್ಡು, ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ, ಯುವ ನಾಯಕ ನವೀಣ್ ರಾಮ್ ಅವರಿಗೆ ಬೃಹತ್ ಸೇಭಿನ
ಹಾರವನ್ನು ಹಾಕಿ ಸ್ವಾಗತಿಸಿ ತೆರದ ವಾಹನದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ
ಮೇರಗು ನೀಡಲಾಯಿತು.
ಕೆಜಿಎಫ್‍ನಲ್ಲಿ ದಶಕಗಳಿಂದಲೂ ನಿರುದ್ಯೋಗ ಸೃಷ್ಟಿಯಾಗಿದ್ದು, ಹೆಚ್ಚಾಗಿ ಯುವಕರು ಉದ್ಯೋಗಕ್ಕಾಗಿ ದೂರದ ಬೆಂಗಳೂರು ಮತ್ತಿತರ ಕಡೆ ಪ್ರಯಾಣ ಮಾಡಬೇಕಿದ್ದು, ಇದಕ್ಕೆಲ್ಲ ಕಾರಣ ಮಾಜಿ ಸಂಸದರು ಹಾಗೂ ಹಾಲಿ ಶಾಸಕರೇ
ಕಾರಣವೆಂದು ದೂರಿದರು.
ಶಾಸಕರು 937 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಹೇಳುತ್ತಾರೆ. ಆದರೆ 30 ವರ್ಷಗಳಿಂದ ಅಧಿಕಾರ ಅನುಭವಿಸಿದ ಅವರ ತಂದೆ ಏಕೆ ಕೈಗಾರಿಕೆ ತಂದಿಲ್ಲ ಎಂದು ಪ್ರಶ್ನಿಸಿದರು.
ಶಾಸಕರ ದುರಾಡಳಿತ ಅಂತ್ಯವಾಗಬೇಕಿದೆ, ಜನರನ್ನು ಯಾಮಾರಿಸುವ ಜನಪ್ರತಿನಿಧಿಗಳನ್ನ ನಂಬದಿರಿ, ನಿಮ್ಮ
ಸೇವೆ ಮಾಡಲು ನನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿ, ಶಕ್ತಿ ಮೀರಿ  ಪಕ್ಷದ ಸಂಘಟನೆ ಮಾಡಿ ಶತಾಯ ಗತಾಯ ಬಿಜೆಪಿ ಗೆಲ್ಲಿಸಲು ಶ್ರಮ ಪಡುತ್ತೇನೆಂದು ವಿ.ಮೋಹನ್ ಕೃಷ್ಣ ಹೇಳಿದರು.
ಮೋಹನ್ ಕೃಷ್ಣ ಯುವ ಸೇನೆ ಕಟ್ಟಿ 4 ವರ್ಷಗಳಾಗಿದ್ದು, ಇದು ಕೇವಲ ನಮ್ಮ ಸೇನೆಯಲ್ಲ ಬಿಜೆಪಿ ಯುವ ಸೇನೆಯಾಗಿದ್ದು, ಇಂದು 480ಕ್ಕೂ ಅಧಿಕ ಯುವಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸುಮಾರು 1500ಕ್ಕೂ ಅಧಿಕ ಯುವಕರು ಸೇರ್ಪಡೆ ಕಾರ್ಯಕ್ರಮ ನಡೆಯುತ್ತದೆ ಎಂದರು.
ಗ್ರಾಪಂ ಮಾಜಿ ಅಧ್ಯಕ್ಷ ನವೀಣ್ ರಾಮ್ ಮಾತನಾಡಿ, ಯುವಕರು ಸ್ವಯಂ ಪ್ರೇರತರಾಗಿ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವನ್ನು ಇಟ್ಟುಕೊಂಡು ಪಕ್ಷಕ್ಕೆ ಸೇರಿದ್ದು ವಿ.ಮೋಹನ್‍ಕೃಷ್ಣ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ, ಶಾಸಕರಾಗಿ ಆಯ್ಕೆ ಮಾಡಬೇಕೆಂದು ಜನ ಬಯಸಿದ್ದಾರೆಂದರು.
ರೈತನ ಮಗನಾಗಿರುವ ಮೋಹನ್ ಕೃಷ್ಣ ಅವರು ಸ್ವ ಕ್ಷೇತ್ರದವರಾಗಿದ್ದು, ಎಲ್ಲರೂ ಕಷ್ಟ ಪಟ್ಟು ಶಾಸಕರಾಗಿ
ಮಾಡಬೇಕು. ಹಿಂದೆ ಬ್ರಿಟೀಷರು ಕೆಜಿಎಫ್‍ನಲ್ಲಿ ಆಳ್ವಿಕೆ ಮಾಡಿ ಇಲ್ಲಿದ್ದ ಚಿನ್ನವನ್ನು ದೋಚಿದ್ದಾರೆ ಅದೇ ರೀತಿಯಲ್ಲಿ ಇಲ್ಲಿ ಆಯ್ಕೆಯಾದ ವಲಸಿಗ ಶಾಸಕರು ದೋಚಿಕೊಂಡು ಹೋಗಿದ್ದು ಸಾಕು ನರೇಂದ್ರ ಮೋದಿಯವರ
ಆಡಳಿತವನ್ನು ನೋಡಿ ಬಿಜೆಪಿಗೆ ಮತ ಹಾಕಿ ಮಣ್ಣಿನ ಮಕ್ಕಳನ್ನು ಗೆಲ್ಲಿಸಬೇಕೆಂದು ಹೇಳಿದರು.
ಬಿಜೆಪಿ ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೆಜಿಎಫ್ ತಾಲೂಕಿನಲ್ಲಿ ಮೋಹನ್ ಕೃಷ್ಣ ಅವರು 4 ವರ್ಷಗಳಿಂದ ಸಮಾಜ ಸೇವೆ ಮೂಲಕ ಗುರುತಿಸಿಕೊಂಡು ಬಿಜೆಪಿ ಪಾರ್ಟಿಯನ್ನು ಯಶಸ್ವಿಯಾಗಿ ಕಟ್ಟಿ ಶಕ್ತಿ ತುಂಬಿದ್ದಾರೆ ಎಂದರು.
ಇಂದು ಇಲ್ಲಿ ಬಿಜೆಪಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ಜೆಡಿಎಸ್, ಕಾಂಗ್ರೆಸ್  ಪಕ್ಷಗಳಿಗೆ ನಡುಕ ಸೃಷ್ಠಿಯಾಗಿದೆ. ಕೆಜಿಎಫ್‍ನಲ್ಲಿ ಬಿಜೆಪಿ ಶೇ.100% ಗೆಲ್ಲುತ್ತದೆ ಬಿಜೆಪಿ ಪಾರ್ಟಿ ಎಲ್ಲಾ ಆಕಾಂಕ್ಷಿಗಳನ್ನು ಕರೆದು  ವರಿಷ್ಠರು ಸಭೆ ಮಾತಾಡಿದ್ದಾರೆ. ಪಕ್ಷ ಕೇವಲ ಒಬ್ಬರಿಗೆ ಭಿ.ಪಾರಂ ಕೊಡುತ್ತದೆ ಎಲ್ಲರೂ ಪಕ್ಷದ ಸಂಘಟನೆ ಮಾಡಬೇಕು ಪಾರ್ಟಿ ಅರ್ಹ ವ್ಯಕ್ತಿಯನ್ನು ಗುರುತಿಸಿ ಟಿಕೇಟ್ ನೀಡುತ್ತದೆ ಎಂದರು.
ವಿ.ಮೋಹನ್ ಕೃಷ್ಣ ನೇತೃತ್ವದಲ್ಲಿ ಸೇರ್ಪಡೆಯಾದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದವರು 8000090009ಕ್ಕೆ ಮೀಸ್ ಕಾಲ್ ಕೊಟ್ಟು ವಿಜಯ ಸಂಕಲ್ಪ ಸದಸ್ಯತ್ವ ಮಾಡಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಕೆಡಿಎ ಮಾಜಿ ಅಧ್ಯಕ್ಷ ಮುನಿರತ್ನಂನಾಯ್ಡು, ಗ್ರಾಮಾಂತರ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ಪ್ರಧಾನ ಕಾರ್ಯದರ್ಶಿ ಆನಂದಗೌಡ, ಬೇತಮಂಗಲ ಗ್ರಾಪಂ ಅಧ್ಯಕ್ಷೆ ಮಮತಾ ಗಣೇಶ್, ಶ್ರೀನಿವಾಸಸಂದ್ರ ಅಧ್ಯಕ್ಷ ರಘು, ರಾಮಸಾಗರ ರಮಾದೇವಿ ಮುರಳಿ, ಕ್ಯಾಸಂಬಳ್ಳಿ ಮಾಜಿ ಅಧ್ಯಕ್ಷೆ ಸರಸ್ವತಿ ಜಗದಭಿರಾಮ್, ಉಪಾಧ್ಯಕ್ಷ ಅರುಣ್, ಮುಖಂಡರಾದ ಕೇಶವಗೌಡ, ಶ್ರೀರಾಮಗೌಡ, ಟಿಪಿ ಬಾಬು, ಗಂಗಿರೆಡ್ಡಿ, ಕೃಷ್ಣಪ್ಪ, ಶ್ರೀನಾಥ್, ತೇಜು, ನಂದೀಶ್ ಗೌಡ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!