• Sun. May 12th, 2024

ಬಂಗಾರಪೇಟೆ:ಸ್ವಕಲಿಕೆಗೆ ಪೂರಕ ‘ಕಲಿಕಾ ಹಬ್ಬ’:ಹೆಚ್.ಎಂ.ರವಿ.

PLACE YOUR AD HERE AT LOWEST PRICE

ಬಂಗಾರಪೇಟೆ ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ “ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ” ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕಲಿಕಾಹಬ್ಬ’ ಕಾರ್ಯಕ್ರಮವನ್ನು ಗ್ರಾಪಂ ಅದ್ಯಕ್ಷ ಹೆಚ್.ಎಂ.ರವಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು ಪ್ರತಿಯೊಬ್ಬ ಮಗುವಿನ ಬೌದ್ಧಿಕ ಹಾಗೂ ಮಾನಸಿಕ ವಿಕಾಸವು ವಿಭಿನ್ನತೆಯನ್ನು ಹೊಂದಿರುತ್ತದೆ. ಇದರ ಪರಿಣಾಮವಾಗಿ ಅವರ ಕಲಿಕೆಯಲ್ಲಿ ಬಹಳಷ್ಟು ವ್ಯತ್ಯಾಸವನ್ನು ನಾವು ಕಾಣಬಹುದು.

ಸಾಂಪ್ರದಾಯಿಕ ಕಲಿಕೆಯು ಕೇವಲ ಹೆಚ್ಚು ಅಂಕ ಪಡೆಯುವುದೇ ಏಕೈಕ ಗುರಿಯಾಗಿರುತ್ತದೆ. ಇಂತಹ ಕಲಿಕಾ ಹಬ್ಬಗಳಿಂದಾಗಿ ಮಕ್ಕಳಲ್ಲಿ ಬೌದ್ಧಿಕ ಶಕ್ತಿ ಹೆಚ್ಚಾಗಿ ಕಲಿಕೆಯಲ್ಲಿ ಭೌತಿಕ ವಿಕಾಸ ಅನುಭವ ಆಗುತ್ತದೆ. ಮತ್ತು ಸ್ವಕಲಿಕೆಯಿಂದ ಪ್ರತಿಭೆ ಮೂಡಿ ಬರುತ್ತದೆ ಎಂದರು.

ಶಿಕ್ಷಕರು ಮತ್ತು ಪೋಷಕರು ಯಾಂತ್ರಿಕ ಕಲಿಕೆಗೆ ಹೆಚ್ಚಿನ ಆದ್ಯತೆಯನ್ನು ನೀಡದೆ ಚಟುವಟಿಕಾಧಾರಿತವಾದ ಕಲಿಕೆಗೆ ಪ್ರೋತ್ಸಾಹ ನೀಡಬೇಕು. ಮಗುವಿನ ಕಲಿಕೆಯು ಸಂಪೂರ್ಣವಾಗಿ ಅನುಭವ ಜನ್ಯವಾಗಿರಬೇಕು ಎಂದರು

ಚಟುವಟಿಕಾಧಾರಿತ ಹಾಗೂ ಸಂತಸದಾಯಕ ಅನುಭವ ಪ್ರೇರಿತ ಕಲಿಕೆಯಿಂದ ಮಕ್ಕಳಲ್ಲಿ ಹೊರೆ ಮತ್ತು ಒತ್ತಡ ಕಡಿಮೆಯಾಗುವುದರ ಜೊತೆಗೆ ಶಾಶ್ವತ ಕಲಿಕೆ ರೂಪಿಸಲು ಸಹಕಾರಿಯಾಗಬೇಕು ಎಂದರು.


ಆಧುನಿಕತೆಯ ಭರಾಟೆಯಲ್ಲಿ ವಿದ್ಯಾರ್ಥಿಗಳು ಗ್ರಾಮಗಳ ಸೊಗಡನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮೀಣ ಭಾಗದ ಆಚಾರ. ವಿಚಾರ. ಸಂಪ್ರದಾಯ. ರೂಢಿ ನಿಯಮ. ಪದ್ಧತಿಗಳನ್ನು ಮನವರಿಕೆ ಮಾಡಿಕೊಡಬೇಕು.

ಕಾರ್ಯಕ್ರಮದಲ್ಲಿ ಜನಪದ ವೃತ್ಯ, ಕೋಲಾಟ, ಹಾಡು, ದೀಪಗಳ ಅಲಂಕಾರ, ಡೊಳ್ಳು ವಾದ್ಯ, ಎತ್ತಿನ ಗಾಡಿಗಳನ್ನು ಅಲಂಕರಿಸಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಒ ಚಿತ್ರ .ಕಾರ್ಯದರ್ಶಿ ಪ್ರೇಮ. ಸದಸ್ಯರಾದ ಮೂರ್ತಿ. ಸುರೇಶ. ನಯಾಜ್ ಪಾಷ. ತಾನಪ್ಪ. ಮಂಜಣ್ಣ ಹಾಗೂ ಮುಖಂಡರಾದ ಚಂದ್ರಣ್ಣ ನಾಗರಾಜ್ ಹಾಗೂ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕ್ಲಸ್ಟರ್ ಉಪಾಧ್ಯಾಯರುಗಳು ಶಿಕ್ಷಕ ವರ್ಗದವರು ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!