• Wed. May 1st, 2024

ಕೋಲಾರ I ಚಿಕ್ಕನಹಳ್ಳಿ ಹಾಲಿನ ಡೇರಿ ನೂತನ ಕಟ್ಟಡ ಉದ್ಘಾಟನೆ

PLACE YOUR AD HERE AT LOWEST PRICE

ಹಾಲು ಉತ್ಪಾದಕರು ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು ಎಂದು ಕೋಲಾರ ಹಾಲು ಒಕ್ಕೂಟದ ನಿರ್ದೇಶಕ ವಡಗೂರು ಡಿ.ವಿ ಹರೀಶ್ ತಿಳಿಸಿದರು

ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಜನರ ಆರ್ಥಿಕ ಮೂಲ ಹೈನುಗಾರಿಕೆಯಾಗಿದೆ ಹೊರಗಡೆ ರಾಸುಗಳ ಆಹಾರ ಧಾನ್ಯಗಳ ಬೆಲೆ ಹೆಚ್ಚಾಗಿದೆ ಉತ್ಪಾದಕರಿಗೆ ಬಂದ ಹಣ ಎಲ್ಲವೂ ಸಾಕಾಣಿಕೆಗೆಯೇ ಸಾಲದಾಗಿದೆ ಉತ್ಪಾದಕರು ರಾಸುಗಳಿಗೆ ಮನೆಯಲ್ಲಿಯೇ ತಯಾರು ಮಾಡುವ ಆಹಾರವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಮಾಡಿಕೊಳ್ಳಬೇಕು ಗ್ರಾಮೀಣ ಭಾಗದ ಆಧುನಿಕ ವೈಜ್ಞಾನಿಕ ಪದ್ಧತಿ ಅನುಸರಿಸುತ್ತಿರುವುದರಿಂದ ಮಾತ್ರವೇ ಹೈನುಗಾರಿಕೆಯಲ್ಲಿ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದರು

ಕೋಲಾರ ಜಿಲ್ಲೆಯಾದ್ಯಂತ ಹಲವಾರು ವರ್ಷಗಳಿಂದ ಹೈನುಗಾರಿಕೆಯನ್ನು ನಂಬಿ ಬದುಕುವ ವಾತಾವರಣ ಸೃಷ್ಟಿಯಾಗಿದೆ ಆರ್ಥಿಕವಾಗಿಯೂ ಇದರಿಂದಾಗಿ ನಡೆಯುತ್ತಾ ಇದೆ ವಿದ್ಯಾವಂತರು ಉದ್ಯೋಗವಿಲ್ಲದೆ ಪರದಾಡುವ ಬದಲು ತಮ್ಮಲ್ಲಿನ ಜ್ಞಾನವನ್ನು ಬಳಸಿಕೊಂಡು ಕೃಷಿ, ಹೈನುಗಾರಿಕೆ ವೃತ್ತಿಯಲ್ಲಿ ನಿರತರಾದರೆ ಉತ್ತಮ ಆದಾಯ ಪಡೆಯಬಹುದು ಜೊತೆಗೆ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಅನೇಕ ಸೌಲಭ್ಯಗಳನ್ನು ನೀಡಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಕೋಲಾರ ಮತ್ತು ಚಿಕ್ಕಬಳ್ಳಾಪುರ ಒಕ್ಕೂಟವು ಪ್ರತ್ಯೇಕವಾಗಿದ್ದು ಜಿಲ್ಲೆಗೆ ಸುಮಾರು ೨೦೦ ಕೋಟಿ ವೆಚ್ಚದಲ್ಲಿ ಎಂವಿಕೆ ಡೈರಿ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಕೋಲಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ ಮಹೇಶ್ ಮಾತನಾಡಿ, ಉತ್ಪಾದಕರು ಉತ್ತಮ ಗುಣಮಟ್ಟದ ಹಾಲು ನೀಡಿದರೆ ಮಾತ್ರವೇ ಹೈನುಗಾರಿಕೆಯಲ್ಲಿ ಲಾಭ ಗಳಿಸುಲು ಸಾಧ್ಯವಾಗುತ್ತದೆ ಉತ್ಪಾದಕರಿಗೆ ರಾಸುಗಳ ಸಾಕಾಣಿಕೆ ಬಗ್ಗೆ ಮಾಹಿತಿ ಕೊರತೆಯಿಂದ ಗುಣಮಟ್ಟದ ಹಾಲು ಉತ್ಪಾದನೆ ಕಡಿಮೆಯಾಗಿದ್ದು ಒಣ ಮೇವು ಹಸಿ ಮೇವು ವಿಂಗಡಣೆಯ ವಿಧಾನದಿಂದ ಜೊತೆಗೆ ಕಾಲಕಾಲಕ್ಕೆ ತಕ್ಕಂತೆ ಒಕ್ಕೂಟ ಮಾರ್ಗದರ್ಶನದಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಚಿಕ್ಕನಹಳ್ಳಿ ಡೈರಿ ಅಧ್ಯಕ್ಷ ಸಿ.ಅಮರೇಶ್ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಟೀಕೆಗಳು ಸಹಜವಾಗಿಯೇ ಇರುತ್ತವೆ ಟೀಕೆಗಳನ್ನು ಮೆಟ್ಟಿ ಪ್ರಮಾಣಿಕವಾಗಿ ಕೆಲಸ ಮಾಡುವ ಮೂಲಕ ಡೈರಿಯ ಮತ್ತಷ್ಟು ಅಭಿವೃದ್ಧಿಗೆ ಉತ್ಪಾದಕರು ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡೋಣ ಡೈರಿಗೆ ಉತ್ಪಾದಕರೇ ಶಕ್ತಿಯಾಗಿದ್ದು ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದಿಂದ ಸಿಗುವ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಅನಿಲ್ ,ಕೋಲಾರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್ ರಾಮಾಂಜಿನಪ್ಪ, ಗ್ರಾಪಂ ಸದಸ್ಯ ರಾಜಣ್ಣ, ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಶ್ರೀನಿವಾಸಪ್ಪ, ಸಿ ನಾಗರಾಜ್, ರಮೇಶ್, ಅಚ್ಚಪ್ಪ, ಸಿ.ಸಿ ಶ್ರೀನಿವಾಸ್, ಶಾರದದೇವಿ, ಸೊಣ್ಣಮ್ಮ, ವೆಂಕಟಮ್ಮ, ವಿಮಲಮ್ಮ, ಭಾಗ್ಯಲಕ್ಷ್ಮೀ, ಸಿಬ್ಬಂದಿ ಸಿ.ಎಂ ಮುನಿಯಪ್ಪ, ಆರ್ ಗೋಪಾಲಪ್ಪ, ಬೈಚೇಗೌಡ, ಗ್ರಾಮಸ್ಥರಾದ ಸಿ.ಎಂ ಬೈರಪ್ಪ, ಚಿಕ್ಕಕೃಷ್ಣಪ್ಪ, ವೆಂಕಟರಮಣಪ್ಪ, ಪ್ರಕಾಶ್, ನಾಗರಾಜ್, ಅಂಜನಗೌಡ, ನಾರಾಯಣಸ್ವಾಮಿ, ಸೋಮೇಶ್, ಸೇರಿದಂತೆ ಸುತ್ತಮುತ್ತಲಿನ ಡೈರಿಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉತ್ಪಾದಕರು ಗ್ರಾಮಸ್ಥರು ಇದ್ದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!