• Fri. Apr 26th, 2024

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಕೋಲಾರ ತಾಲ್ಲೂಕಿನ ಪುಟ್ಟ ಮಗು ಅಗಣ್ಯ

PLACE YOUR AD HERE AT LOWEST PRICE

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಅಗಣ್ಯ

ಬೆಳೆಯುವ ಮರ ಮೊಳಕೆಯಲ್ಲೇ ಕಾಣುತ್ತೆ ಎಂಬoತೆ, ಇಲ್ಲೊಂದು ಪುಟ್ಟ ಮಗು ತನ್ನ ಎರಡನೇ ವಯಸ್ಸಿನಲ್ಲಿ ತನಗಿರುವ ನೆನಪಿನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಸಾಧನೆ ಮಾಡಿ ತೋರಿದ್ದಾಳೆ.

ಕೋಲಾರ ತಾಲ್ಲೂಕಿನ ಕಾಮದೇನಹಳ್ಳಿ ಗ್ರಾಮದ ಅಗಣ್ಯ ಎಸ್ .ಮೂರ್ತಿ (ಜನನ ಆಗಸ್ಟ್ ೨೧ ೨೦೨೦ )ರವರು ತಮ್ಮ ೨ ವರ್ಷ ೪ ತಿಂಗಳು ಅತಿ ಕಿರಿ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-೨೦೨೨ ಗೆ ಸೇರುವ ಮೂಲಕ ಸಾಧನೆ ಮಾಡಿ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಇವರು ಪ್ರಾಣಿ, ಪಕ್ಷಿ, ಹಣ್ಣುಗಳನ್ನು, ದಿನಗಳನ್ನು ಗುರುತಿಸುವುದರ ಮೂಲಕ ಸಾಧನೆ ಮಾಡಿದ್ದಾರೆ. ೮ ಬಣ್ಣಗಳನ್ನು ,೨೪ ಹಣ್ಣುಗಳನ್ನು ,೨೪ ಸಾಕು ಪ್ರಾಣಿಗಳನ್ನು, ೨೪ ಕಾಡುಪ್ರಾಣಿಗಳನ್ನು, ೧೬ ದೇಹದ ಅಂಗಗಳನ್ನು ,೮ಪಕ್ಷಿಗಳನ್ನು ,೨೪ ತರಕಾರಿಗಳನ್ನು ,೧೧ ಜಲಚರ ಪ್ರಾಣಿಗಳನ್ನು, ೨೦ ವಾಹನಗಳನ್ನು, ೧೭ ಪ್ರಸಿದ್ಧ ವ್ಯಕ್ತಿಗಳನ್ನು, ೭ ದಿನಗಳನ್ನು ,೭ ದೇಶದ ಚಿಹ್ನೆಗಳನ್ನು ಮತ್ತು ೧-೧೦ರ ಇಂಗ್ಲಿಷ್ ಸಂಖ್ಯೆಗಳನ್ನು ಗುರುತು ಹಿಡಿದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್- ೨೦೨೨ ಗೆ ಸೇರಿರುವುದು ಅಭಿನಂದನೀಯ ಹಾಗೂ ಗಮನಾರ್ಹ ಬೆಳವಣಿಗೆಯಾಗಿದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!