• Wed. May 1st, 2024

PLACE YOUR AD HERE AT LOWEST PRICE

ಜನರ ಬದುಕಿಗೆ ಅಸರೆಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಸರಕಾರಗಳು ಹಾಗೂ ಜನಪ್ರತಿನಿಧಿಗಳು ರೂಪಿಸಿದರೇ ಮಾತ್ರವೇ ಸಾಮಾನ್ಯ ವರ್ಗದ ಜನರು ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.

ಕೋಲಾರ ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಸಾಹಿತಿ ಡಾ.ಜಿ ಶಿವಪ್ಪ ಅರಿವು ಅವರ “ನೆಲದ ಕನಸು ಜಿಲ್ಲೆಯ ಅಗತ್ಯಗಳು” ಕೃತಿ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯ ಅಭಿವೃದ್ಧಿಗೆ ಸರಕಾರದ ಮೇಲೆ ಎಷ್ಟೇ ಹೋರಾಟ ಮಾಡಿದರೂ ಸಾಧ್ಯವಿಲ್ಲ ಆದರೆ ನಮ್ಮನ್ನು ಆಳುವ ಪಕ್ಷಗಳು ತಮ್ಮ ತಮ್ಮ ಸರಕಾರಗಳಲ್ಲಿ ಜಿಲ್ಲೆಯ ಸಮಗ್ರವಾದ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆಯನ್ನು ನೀಡಬೇಕಾಗಿದೆ ಎಂದರು

ಜಿಲ್ಲೆಯ ಅಭಿವೃದ್ಧಿಗೆ ಕೃಷಿ ಆಧಾರಿತವಾದ ಕೈಗಾರಿಕೆಗಳು, ಉದ್ಯೋಗದ ಸೃಷ್ಟಿ, ನೀರಾವರಿ ಸೇರಿದಂತೆ ಅಗತ್ಯವಾದ ಯೋಜನೆಗಳ ಜಾರಿಗಾಗಿ ನಾನು ಕೂಡ ನಿಮ್ಮ ಜೊತೆಯಲ್ಲಿ ಇದ್ದು ಸಾಧ್ಯವಾದರೆ ಸರಕಾರದ ಗಮನಕ್ಕೆ ತರುತ್ತೇನೆ ಈ ಪುಸ್ತಕಗಳದಲ್ಲಿನ ಕನಿಷ್ಠ ಐದಾರು ಅಂಶಗಳು ಮುಂಬರುವ ದಿನಗಳಲ್ಲಿ ಸರಕಾರಗಳು ಜಾರಿಯಾಗಿ ಪ್ರತಿಯೊಬ್ಬರ ಬದುಕಿಗೆ ದಾರಿಯಾಗಲಿ ಎಂದು ಆಶಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ ಸಮಾಜದಲ್ಲಿ ಅಭಿವೃದ್ಧಿಗೆ ಮಾನವ ಕೇಂದ್ರೀಕೃತ ಕೂರೂಪಗಳು ನೆಲಸಮವಾಗಬೇಕು ಈ ನೆಲಕ್ಕೆ ತಕ್ಕ ಧ್ವನಿಯಾಗಿ ಈ ಕೃತಿಯ ವಿಚಾರಗಳು ಬರಬೇಕಾಗಿದೆ ಸರಕಾರಗಳಿಗೆ ಮಕ್ಕಳ ಹಾಗೂ ಹಿರಿಯರ ಮೇಲೆ ಕಾಳಜಿಯಿಲ್ಲವಾಗಿದೆ ಇಂತಹ ಸಂದರ್ಭಗಳಲ್ಲಿ ನಮ್ಮದೇ ನೇತೃತ್ವದ ರಾಜಕೀಯ ವ್ಯವಸ್ಥೆ ತರದೇ ಹೋದರೆ ಇಂತಹ ಬೇಡಿಕೆಗಳನ್ನು ಜಾರಿ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಜನಪ್ರತಿನಿಧಿಗಳು ಯಾರು ರಿಯಲ್ ಎಸ್ಟೇಟ್ ದಾರರು ಯಾರು ಎಂಬುದೇ ತಿಳಿಯದಾಗಿದೆ ರಾಜಕೀಯ ತರಬೇತಿ ಕೊಡುವ ಶಾಲೆಗಳು ಅವಶ್ಯಕತೆ ಇದೆ ಜೊತೆಗೆ ಸಾಂಸ್ಕೃತಿಕ ಬದಲಾವಣೆಗೆ ಚಿತ್ರಕಲಾ ಶಾಲೆಯ ಜೊತೆಗೆ ಮಕ್ಕಳಿಗೆ ಪುಸ್ತಕ ಮಳಿಗೆ ತೆರೆಯುವ ಮೂಲಕ ಭೌದ್ಧಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ವಿಚಾರಗಳಿಗೆ ಒತ್ತು ನೀಡುವ ಅವಶ್ಯಕತೆ ಇದೆ ಎಂದರು.

ಕೃತಿಯ ಕರ್ತೃ ಡಾ ಅರಿವು ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಈ ನೆಲದ ಕನಸು ಎಂಬ ಪುಸ್ತಕ ಜಿಲ್ಲೆಯ ಹೊಸ ಕಲ್ಪನೆಯ ಜೊತೆಗೆ ಅಭಿವೃದ್ಧಿ ವಿಚಾರಗಳನ್ನು ಒಳಗೊಂಡಿದೆ ಮುಂಬರುವ 2023 ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯ ಪ್ರಣಾಳಿಕೆಯಲ್ಲಿ ಈ ಅಂಶಗಳನ್ನು ಬಳಸಿಕೊಳ್ಳುವ ಮೂಲಕ ಪರಿಣಾಮಕಾರಿಯಾಗಿ ಬೀರುವಂತೆ ಮಾಡಬೇಕಾಗಿದೆ ಎಂದರು.

ಸಾಹಿತಿ ಸ.ರಘುನಾಥ್, ಹಿರಿಯ ದಲಿತ ಮುಖಂಡ ಸಿ.ಎಂ ಮುನಿಯಪ್ಪ, ಕೋಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ಜಿಪಂ ಮಾಜಿ ಅಧ್ಯಕ್ಷೆ ಚೌಡೇಶ್ವರಿ ರಾಮು, ಮಾಜಿ ಸದಸ್ಯ ಅರವಿಂದ್, ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಜರಾಯಿ ಇಲಾಖೆಯ ತಹಶಿಲ್ದಾರ್ ನಾಗವೇಣಿ, ನೀರಾವರಿ ಹೋರಾಟಗಾರ ಅಂಜನೇಯರೆಡ್ಡಿ, ದಲಿತ ಮುಖಂಡರಾದ ಟಿ.ವಿಜಿಕುಮಾರ್,ಪಂಡಿತ್ ಮುನಿವೆಂಕಟಪ್ಪ, ಉಪನ್ಯಾಸಕ ಡಾ ಶ್ರೀನಿವಾಸಗೌಡ, ಡಾ ವೆಂಕಟಾಚಲ, ಮುಂತಾದವರು ಇದ್ದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!