• Tue. Apr 30th, 2024

PLACE YOUR AD HERE AT LOWEST PRICE

ರಾಜಿ-ಸಂಧಾನದ ಮೂಲಕ ನಿಮ್ಮ ನಡುವೆ ವ್ಯಾಜ್ಯಗಳನ್ನು ಕಂದಾಯ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋಲಾರ  ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಕರೆ ನೀಡಿದರು.

ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯ ಮುಂದೆ ಏರ್ಪಡಿಸಿದ್ದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಅವರು ಮಾಡಿದರು. ಹಲವಾರು ಕಾರಣಗಳಿಂದಾಗಿ ಜಮೀನುಗಳಿಗೆ ಸಂಬಂಧಿಸಿದಂತೆ ವ್ಯಾಜ್ಯಗಳು ಉದ್ಭವಿಸುವುದು ಸಾಮಾನ್ಯ. ಆದರೆ ಇದೇ ಸಮಸ್ಯೆಗಳ ಇತ್ಯರ್ಥಕ್ಕಾಗಿ ನೀವು ನಮ್ಮಲ್ಲಿ ಮೇಲ್ಮನವಿಗಳನ್ನು ದಾಖಲಿಸಿ ದಿನಗಟ್ಟಲೇ ಬರುವುದನ್ನು ಇಲಾಖೆಯು, ಸರ್ಕಾರವು ಗಂಭೀರವಾಗಿ ಪರಿಗಣಿಸಿ, ನಿಮ್ಮ ಸಮಸ್ಯೆಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಅವಕಾಶವನ್ನು ಕಲ್ಪಿಸಿದೆ. ಇಂಥ ಅವಕಾಶವೇ ಕಂದಾಯ ಅದಾಲತ್ ಆಗಿದೆ ಎಂದರು.

ಕಂದಾಯ ಅದಾಲತ್‌ನಲ್ಲಿ ನಾವು ನಿಮ್ಮನ್ನು ರಾಜಿಯಾಗಿ ಎಂದು ಒತ್ತಾಯಿಸುವುದಿಲ್ಲ, ಒತ್ತಡ ಹೇರುವುದಿಲ್ಲ. ಆದರೆ ನೀವು ಯಾವುದೇ ದುರ್ಬಲ ಘಳಿಗೆಯಲ್ಲಿ ವ್ಯಾಜ್ಯಗಳನ್ನು ಮಾಡಿಕೊಂಡು, ಅದೇ ಕೋಪ, ಹಠದಲ್ಲಿ ಜಿದ್ದಿಗೆ ಬಿದ್ದು ಕೇಸುಗಳನ್ನು ನಡೆಸಿಕೊಂಡು ಬಂದಿರುತ್ತೀರಿ. ದಿನ ಕಳೆದಂತೆ ನಿಮಗೂ ಕೇಸುಗಳ ಬಗ್ಗೆ ಆಸಕ್ತಿ ಕಡಿಮೆಯಾಗಿರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುವ ಅಹಂ ನಿಮ್ಮನ್ನು ನೀವಾಗಿಯೇ ರಾಜಿಯಾಗುವುದಕ್ಕೆ ಬಿಡುವುದಿಲ್ಲ. ಇಂಥ ಸಂದರ್ಭಕ್ಕೆ ರಾಜಿಯೇ ಮದ್ದು ಎಂದು ಹೇಳಿದರು.

ರಾಜಿಯಾಗುವಂಥ ಪ್ರಕರಣಗಳಲ್ಲಿ ನಾವು ನೀವಿಬ್ಬರೂ ಪಾರ್ಟಿಗಳನ್ನು ಒಂದೆಡೆ ಕುಳಿತು ರಾಜಿ-ಸಂಧಾನ ಮಾತುಕತೆ ನಡೆಸಲು ಮುಕ್ತ ವಾತಾವರಣವನ್ನು ಕಲ್ಪಿಸುತ್ತೇವೆ. ಇಂಥ ಮಾತುಕತೆಗಳಲ್ಲಿ ನಿಮಗೂ ನಿಮ್ಮ ಬಿಗುಮಾನ, ದುಮ್ಮಾನಗಳು ಕಡಿಮೆಯಾಗುತ್ತವೆ. ಹಠ ನಿವಾರಣೆಯಾಗುತ್ತದೆ. ಇದೇ ರಾಜಿಯತ್ತ ನಿಮ್ಮನ್ನು ಸೆಳೆದೊಯ್ಯುತ್ತದೆ. ಹೀಗೆ ರಾಜಿಯಾಗುವುದಕ್ಕೆ ಇಲಾಖೆಯು ಕಲ್ಪಿಸಿರುವ ವೇದಿಕೆಯೇ ಈ ಕಂದಾಯ ಅದಾಲತ್ ಆಗಿದೆ ಎಂದು ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಕಂದಾಯ ಅದಾಲತ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಿದೆ. ಇದಕ್ಕಾಗಿ ನಾವು ಸುಮಾರು ತಿಂಗಳು ಕಾಲದಿಂದಲೇ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ರಾಜಿಯಾಗಲು ಉದ್ಧೇಶವಿದೆಯೇ, ಮನಸ್ಸಿದೆಯೇ ಎಂದು ಪಾರ್ಟಿಗಳನ್ನು ಕೇಳುತ್ತಾ ಬಂದಿದ್ದೇವೆ. ಇಂಥ ಸಂದರ್ಭದಲ್ಲಿ ಇಕ್ಕೆಡೆಯ ವಕೀಲರೂ ನಮಗೆ ತುಂಬಾ ಸಹಕಾರವನ್ನು ನೀಡಿ ರಾಜಿ ಮಾತುಕತೆಯಾಡಿದ್ದಾರೆ. ತಮ್ಮ ಕಕ್ಷಿದಾರರ ಮನವೊಲಿಸಿ ರಾಜಿ ಆಗುವುದಕ್ಕೆ ಅವರನ್ನು ಸಜ್ಜುಗೊಳಿಸಿ ಕಂದಾಯ ಅದಾಲತ್‌ಗೆ ಕರೆ ತಂದಿದ್ದಾರೆ ಎಂದರು.

ಕಂದಾಯ ಅದಾಲತ್‌ನ ಯಶಸ್ವಿಗೆ ನಮ್ಮ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,  ತಹಶೀಲ್ದಾರ್‌ಗಳು, ವಕೀಲರು, ಕಕ್ಷಿದಾರರೂ ಸಹಾ ನೇರ ಕಾರಣರಾಗಿದ್ದಾರೆ ಎಂದು  ಸ್ಮರಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!