• Sat. May 11th, 2024

PLACE YOUR AD HERE AT LOWEST PRICE

ಪತ್ರಕರ್ತರಿಗೆ ಸ್ವಾಭಿಮಾನವೇ ಸರ್ವಶ್ರೇಷ್ಟವಾಗಿದೆ. ಅದನ್ನು ಪ್ರತಿಯೊಬ್ಬರೂ ತಮ್ಮ ವೃತ್ತಿಯಲ್ಲಿ ಮಾತ್ರವಲ್ಲ ಜೀವನದಲ್ಲೂ ಅಳವಡಿಸಿಕೊಂಡು ಬೆಳೆಸುವಂತಾಗ ಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕರೆ ನೀಡಿದರು.

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಥಮವಾಗಿ ಆಯೋಜಿಸಿದ್ದ ಡಿ.ವಿ.ಗುಂಡಪ್ಪನವರು ಮುಂಚೂಣಿಯಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪತ್ರಕರ್ತರ ಸಂಘವನ್ನು ಸಂಘಟಿಸಿ ಸ್ಥಾಪಿಸಿದ ೯೧ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪತ್ರಿಕೆಗಳು ಸಮಾಜದ ಕಾವಲು ನಾಯಿಗಳಂತೆ ಕಾರ್ಯನಿರ್ವಹಿಸಬೇಕೆಂದು ಪತ್ರಕರ್ತರ ಸಂಘದ ಸಂಸ್ಥಾಪಕ ಡಿ.ವಿ.ಗುಂಡಪ್ಪನವರ ನಾಣ್ಣುಡಿಯನ್ನು ಪ್ರತಿಯೊಬ್ಬ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುವಂತಾಗಬೇಕಾಗಿದೆ ಎಂದು ಕರೆ ನೀಡಿದರು. ಅದರೆ ಇಂದು ಪತ್ರಕರ್ತರ ವೃತಿಯಲ್ಲಿ ಯಾರ ಕಾವಲು ನಾಯಿಗಳಾಗಿ ಕೆಲಸ ನಿರ್ವಹಿಸಲಾಗುತ್ತಿದೆಯೇ? ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಕರ್ತರ ಸಹಕಾರ ಸಂಘದ ಅಧ್ಯಕ ಕೆ.ಎಸ್.ಗಣೇಶ್ ಮಾತನಾಡಿ, ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಲಹೆ ಮೇರೆಗೆ ಡಿ.ವಿ.ಜಿ. ಅವರು ಕೋಲಾರದಲ್ಲಿ ಪ್ರಪ್ರಥಮವಾಗಿ ಸ್ಥಾಪಿಸಿದ ಪತ್ರಕರ್ತರ ಸಂಘದಿಂದಾಗಿ ರಾಜ್ಯದಲ್ಲಿ ಇಂದು ಕೆ.ಡಬ್ಲೂ.ಜೆ.ಎ.ಸ್ಥಾಪಸಿಲು ಕಾರಣವಾಯಿತು. ಕೋಲಾರಕ್ಕೆ ಪ್ರಪ್ರಥಮ ಮುಖ್ಯಮಂತ್ರಿ ನೀಡಿದ್ದು ಹಾಗೂ ಪ್ರಥಮವಾಗಿ ಪತ್ರಕರ್ತರ ಸಂಘ ಸ್ಥಾಪಿಸಿದ್ದು ಕೋಲಾರ ಜಿಲ್ಲೆಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಇಂದು ಪತ್ರಕರ್ತರಿಗೆ ದೊಡ್ಡ ಪತ್ರಿಕೆಗಳಲ್ಲಿ, ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರಿಗೆ ಸೇವಾ ಭದ್ರತೆ ಇಲ್ಲದೆ ಇರುವುದು ಸೇರಿದಂತೆ ಬಿ.ಬಿ.ಸಿ. ಮೇಲೆಯೇ ಐ.ಟಿ. ದಾಳಿ ಮಾಡಿಸಿ ಬೆದರಿಸುವಂತ ಮಟ್ಟಕ್ಕೆ ಇಳಿದಿರುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುತ್ತಿರುವುದು ವಿಷಾಧನೀಯ ಸಂಗತಿಯಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಮಾತನಾಡಿ, ಡಿ.ವಿ.ಜಿ.ಅವರು ಕೋಲಾರದ ಮುಳಬಾಗಿಲು ತಾಲ್ಲೂಕಿನವರು ಆಗಿದ್ದು ಪತ್ರಕರ್ತರ ಸಂಘವನ್ನು ಪ್ರಪ್ರಥಮವಾಗಿ ಸ್ಥಾಪಿಸುವ ಮೂಲಕ ಪತ್ರಿಕಾ ರಂಗಕ್ಕೆ ಶಕ್ತಿ ತುಂಬಿದರು, ಅವರು ಸಂಘ ಸ್ಥಾಪಿಸಿದ ದಿನವನ್ನು ಸಂಸ್ಥಾಪಕರ ದಿನವನ್ನಾಗಿ ನಮ್ಮ ಸಂಘದ ಮೂಲಕ ಪ್ರಥಮವಾಗಿ ಆಚರಿಸುತ್ತಿರುವುದು ತಡವಾದರೂ ಶ್ಲಾಘನೀಯ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಎಸ್.ಸಚ್ಚಿದಾನಂದ ಮಾತನಾಡಿ, ಡಿ.ವಿ.ಜಿ. ಅವರು ಪತ್ರಕರ್ತರ ಸಂಘವನ್ನು ಸ್ಥಾಪಿಸಿದ ದಿನವನ್ನು ಪತ್ರಿಕಾ ದಿನಾಚರಣೆಯನ್ನು ಆಚರಿಸಿದಂತೆ ಸಂಸ್ಥಾಪನಾ ದಿನವನ್ನು ಆಚರಿಸುವಂತಾದರೆ ಅರ್ಥಪೂರ್ಣವಾಗುವುದು ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ಸಾಕ್ಷಿ ಮಂಜುನಾಥ್ ಮಾತನಾಡಿ, ಪತ್ರಕರ್ತರ ಸಂಘವು ಇಂದು ಬೃಹದಾಕಾರವಾಗಿ ಬೆಳೆದಿರುವುದಕ್ಕೆ ಭಗವದ್ಗೀತೆಯಲ್ಲಿ ವಾಮನಮೂರ್ತಿಯ ಮೂರನೇ ಹೆಜ್ಜೆ ಇಡಲು ಬೃಹದಕಾರವಾಗಿ ಬೆಳೆದಂತೆ ಪತ್ರಿಕಾ ಕ್ಷೇತ್ರವಾಗಿ ಬೆಳೆದು ಸಮಾಜದಲ್ಲಿ ಲೋಪ ದೋಷಗಳನ್ನು ಮೆಟ್ಟಿ ನಿಲ್ಲುವಂತಾಗಬೇಕೆಂದು ಆಶಿಸಿದರು.

ಪ್ರಕಾಶ್(ಮಾಮಿ) ಸ್ವಾಗತಿಸಿ, ಕೆ.ಆಸೀಫ್‌ಪಾಷ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ಜಗದೀಶ್, ಅಬ್ಬಣಿ ಶಂಕರ್, ಬಿ.ಎಸ್.ಸ್ಕಂದಕುಮಾರ್, ಓಂಕಾರಮೂರ್ತಿ, ಸಿ.ವಿ.ನಾಗರಾಜ್, ಬಂಗಾರಪೇಟೆ ಎಂ.ಸಿ.ಮಂಜುನಾಥ್, ಕೆ.ರಮೇಶ್, ವೆಂಕಟೇಶಪ್ಪ, ಮುಕ್ತಿಯಾರ್ ಅಹಮದ್, ಸೈಯುದ್ ಪರ್ವೀಜ್, ಎ.ಬಾಲನ್, ಎನ್.ಗಂಗಾಧರ್ ಉಪಸ್ಥಿತರಿದ್ದರು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!