• Mon. Sep 16th, 2024

ಫೆ.18 ಮಹಾಶಿವರಾತ್ರಿಗೆ ಕೊರಗೊಂಡನಹಳ್ಳಿ ಗ್ರಾಮದಲ್ಲಿ ಜಾಣ ಜಾಣೆಯರ ನಗೆ ಹಬ್ಬ

ByNAMMA SUDDI

Feb 16, 2023

PLACE YOUR AD HERE AT LOWEST PRICE

ಮಹಾಶಿವರಾತ್ರಿಯ ಆಚರಣೆ ಪ್ರಯುಕ್ತ ತಾಲೂಕಿನ  ಕೊರಗೊಂಡನಹಳ್ಳಿ ಗ್ರಾಮದಲ್ಲಿ  ಫೆಬ್ರವರಿ 18 ರಂದು ಜಾಣ ಜಾಣೆಯರ ನಗೆ ಜಾಗರಣೆಯ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ‌ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಯೋಧ ಹಾಗೂ ಗ್ರಾಪಂ ಸದಸ್ಯ ಅಶ್ವಥ್ ರಾಮ್ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ರಾಮದ ಕಾಶಿವಿಶ್ವೇಶ್ವರ ದೇವಸ್ಥಾನದಲ್ಲಿ ಕಳೆದ ವರ್ಷದಂತೆ ಈ ವರ್ಷವು ಕಾರ್ಯಕ್ರಮ ನಡೆಯಲಿದೆ ವಿಶೇಷವಾಗಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ, ಗ್ರಾಮೀಣ ಕ್ರೀಡೆಗಳು ಮಹಿಳೆಯರಿಗಾಗಿ ರಂಗೋಲಿ ಸ್ವರ್ಧೆ, ಹಗ್ಗಜಗ್ಗಾಟ ಆಯೋಜನೆ  ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿಕೊಳ್ಳಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಆಯೋಜಕ ಚಂದ್ರಶೇಖರ್ ದೀಕ್ಷಿತ್ ಮಾತ‌ನಾಡಿ, ಕಾಶಿ‌ ವಿಶ್ವೇಶ್ವರ ದೇಗುಲವನ್ನು ವಿಶೇಷ ಆಲಂಕಾರಗಳಿಂದ ಸಜ್ಜುಗೊಳಿಸಿ ಅಂದು ಬೆಳಿಗ್ಗೆ ೭.೩೦ರೊಳಗೆ ಜಲಾಭಿಷೇಕ ಮಾಡುತ್ತೇವೆ. ಆಗ ಸೂರ್ಯನ ಬೆಳಕು ಬೀಳಲಿದೆ. ವಿಶೇಷ ಹೂವಿನ ಅಲಂಕಾರ ಇರಲಿದೆ‌ ಹೆಚ್ಚಿನ ಭಕ್ತರು ಪಾಲ್ಗೊಳ್ಳಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಎಂ.ಉದಯ ಮಾತನಾಡಿ, ಫೆಬ್ರವರಿ18 ರಂದು ಇಡೀ ರಾತ್ರಿ ಹಾಸ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಜಾಣ ಜಾಣೆಯರ ನಗೆ ಜಾಗರಣೆ ಇರಲಿದೆ.‌‌ ಅಲ್ಲದೇ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಅವತ್ತು  ಸಂಜೆ ೭.೩೦ರಿಂದ ರಾತ್ರಿಯಿಡೀ ದೇವಿಕಾ ಪರಮೇಶ್ವರ ಅವರಿಂದ ಶಿವ ತಾಂಡವ ನೃತ್ಯ, ಪ್ರೊ.ಕೃಷ್ಣೇಗೌಡ ಹಾಸ್ಯ ಭಾಷಣ, ರಮೇಶ್ ಬಾಬು ಮಿಮಿಕ್ರಿ, ಜೂನಿಯರ್ ರಾಜಕುಮಾರ್, ಜೂನಿಯರ್ ಪುನೀತ್ ರಾಜಕುಮಾರ್ ಭಾಗಿ, ಮಿಮಿಕ್ರಿ ಗೋಪಿ ಹಾಸ್ಯ ಕಾರ್ಯಕ್ರಮ, ಡ್ರಮ್ಸ್ ದೇವರಿಂದ ಮನರಂಜನೆ, ಕೃಷ್ಣ ಸಂಧಾನ ನಾಟಕ, ಸಂಗೀತ ಸೌರಭ ಕಾರ್ಯಕ್ರಮ ನಡೆಯಲಿವೆ ಎಂದು ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜನಕರಾದ ಕೋನೇಪುರ ನಾರಾಯಣಸ್ವಾಮಿ, ಎಪಿಎಂಸಿ ಪುಟ್ಟರಾಜು, ರಘು, ಅಶೋಕ್, ಬೆಗ್ಲಿ ವೆಂಕಟೇಶಗೌಡ, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You missed

error: Content is protected !!