• Sun. May 12th, 2024

PLACE YOUR AD HERE AT LOWEST PRICE

ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಽಕಾರಿಗಳು ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ೬೯ ರೌಡಿ ಶೀಟರ್‌ಗಳು ಹಾಗೂ ೭೨ ಪುಡಿ ಕಳ್ಳರನ್ನು ಠಾಣೆಗೆ ಕರೆಯಿಸಿ ಅವರಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ, ಶಾಂತಿ ಕದಡುವುದಿಲ್ಲವೆಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.

ಫೆ೧೫ ರ ಇಡೀ ರಾತ್ರಿ ಬೆಳಗಿನ ಜಾವದವರೆವಿಗೂ ನಡೆದ ಈ ಕಾರ್ಯಾಚರಣೆಯನ್ನು ಮಾಡಿದ ಪೊಲೀಸರು ರೌಡಿ ಶೀಟರ್‌ಗಳು, ಪುಡಿ ಕಳ್ಳರು ಹಾಗೂ ರಾತ್ರಿ ವೇಳೆ ಅನಗತ್ಯವಾಗಿ ಬೀದಿ ಹೆದ್ದಾರಿಗಳಲ್ಲಿ ತಿರುಗಾಟ ನಡೆಸುತ್ತಿದ್ದವರಿಗೆ ಬುದ್ಧಿ ಕಲಿಸಿದರು.

ಕೋಲಾರ ನಗರ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೬ ಚೋರರು, ಗಲ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೧೩ ಚೋರರು, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ೨ ರೌಡಿಗಳು, ಒಬ್ಬ ಚೋರ, ವೇಮಗಲ್ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ಒಬ್ಬ ಚೋರ, ಮಾಲೂರು ಠಾಣೆ ವ್ಯಾಪ್ತಿಯಲ್ಲಿ ೨೦ ರೌಡಿಗಳು, ೩ ಚೋರರು, ಮಾಸ್ತಿ ಠಾಣೆಯಲ್ಲಿ ೫ ರೌಡಿಗಳು, ಒಬ್ಬ ಚೋರ, ನಂಗಲಿ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೧೦ ಮಂದಿ ಚೋರರಿಗೆ, ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ ೧೦ ಮಂದಿ ಚೋರರಿಗೆ, ಗೌನಿಪಲ್ಲಿ ಠಾಣೆಯಲ್ಲಿ ೧೨ ರೌಡಿಗಳು, ೨ ಚೋರರು, ರಾಯಲ್ಪಾಡ್ ಠಾಣೆಯಲ್ಲಿ ೩ ರೌಡಿಗಳು, ೪ ಚೋರರು, ಮುಳಬಾಗಿಲು ಠಾಣೆಯಲ್ಲಿ ೨ ರೌಡಿಗಳು ಹಾಗೂ ೪ ಚೋರರಿಂದ ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.

ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ರವಿಕಾಂತೇಗೌಡ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಎಂ.ನಾರಾಯಣ, ಪೊಲೀಸ್ ಅಽಕ್ಷಕ ವಿ.ಬಿ.ಭಾಸ್ಕರ್ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ಸುದ್ದಿ ಓದಿ ಹಂಚಿ:

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!