PLACE YOUR AD HERE AT LOWEST PRICE
ಬಂಗಾರಪೇಟೆ:ರೈಲ್ವೆ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ ಚೆನ್ನೈ-ಬೆಂಗಳೂರು ಮಾರ್ಗದ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ.
ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ಲೈನ್ ತುಂಡಾಗಿ ರೈಲಿನೆ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಾಪಾಯವಾಗಿರುವುದಿಲ್ಲ. ವಿದ್ಯುತ್ ತಂತಿ ತುಂಡಾಗಿರುವುದನ್ನು ರೈಲ್ವೆ ನೌಕರರು ಸಮರೋಪಾದಿಯಲ್ಲಿ ಸರಿಪಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ವಿದ್ಯುತ್ ತಂತಿ ತುಂಡಾಗಿರುವ ಹಿನ್ನೆಲೆ ಚೆನ್ನೈ-ಬೆಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ಲೈನ್ ತುಂಡಾಗಿ ಬಿದ್ದಿದೆ. ದುರಸ್ತಿ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸುಮಾರು 8ಕ್ಕೂ ಹೆಚ್ಚು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ಪ್ರಮುಖವಾಗಿ ಮಾರಿಕುಪ್ಪಂ ಬೆಂಗಳೂರು, ಬೆಂಗಳೂರು ಮೈಸೂರು ತಿರುಪತಿ, ಬೆಂಗಳೂರು ಚೆನೈ, ಜೋಲಾರ್ಪೇಟ್ ಬೆಂಗಳೂರು, ಸೇರಿದಂತೆ ಸುಮಾರು ಎಂಟು ರೈಲುಗಳ ಸಂಚಾರ ಸ್ಥಗಿತವಾಗಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಜಿಲ್ಲೆಯ ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ರೈಲು ತುಂಡಾಗಿ ಬಿದ್ದಿದೆ. ಮಧ್ಯಾಹ್ನ ಸುಮಾರಿಗೆ ವಿದ್ಯುತ್ ಲೈನ್ ತುಂಡಾಗಿರುವ ಕುರಿತು ಮಾಹಿತಿ ಸಿಕ್ಕ ತಕ್ಷಣ ಬಂಗಾರಪೇಟೆ ಹಾಗೂ ಕಂಟ್ರೋನ್ಮೆಂಟ್ ರೈಲ್ವೇ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.
ಸದ್ಯ ವೇಗದೂತ ರೈಲುಗಳು ಓಡುತ್ತಿದ್ದು, ಎಲ್ಲಾ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಸಾಗಿಸಲು ವಿಶೇಷ ಕ್ರಮವನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆಯಾದರೂ ಪ್ರತಿನಿತ್ಯ ಸಂಚರಿಸುವ ಸುಮಾರು 20 ಸಾವಿರ ನಿತ್ಯ ಪ್ರಯಾಣಿಕರಿಗೆ ತೊಂದರೆಯಾಗಿದ್ದು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.