• Sat. Sep 7th, 2024

ಕೋಲಾರ I ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೈವೇ ಸಂತ್ರಸ್ತ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರಕ್ಕೆ ಒತ್ತಾಯ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯಲ್ಲಿ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂತ್ರಸ್ತ ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬುಧವಾರ ಸಂತ್ರಸ್ತ ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಮಂಡ್ಯ ಮಾತನಾಡಿ ದೇಶದ ಬೆನ್ನೆಲುಬು ರೈತರು ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳು ಇಲ್ಲದಿದ್ದರೂ ಸ್ವಾಭಿಮಾನದಿಂದ ಜೀವನ ನಡೆಸುತ್ತಾ ಇದ್ದಾರೆ ಆದರೆ ಸರಕಾರ ರೈತರ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನ್ಯಾಯಬದ್ಧ ಪರಿಹಾರ ನೀಡದೇ ರೈತರನ್ನು ಬೀದಿಗೆ ತಳ್ಳಿದ್ದಾರೆ ರೈತರು ತಮ್ಮ ಜಮೀನಿನ ಹಕ್ಕನ್ನು ಪಡೆಯಲು ಪ್ರಶ್ನೆ ಮಾಡಿದರೆ ಪೋಲಿಸರ ಮೂಲಕ ದೌರ್ಜನ್ಯ ನಡೆಸುತ್ತಾ ಇದ್ದಾರೆ ಎಂದರೆ ಸರಕಾರಗಳು ಜನಪ್ರತಿನಿಧಿಗಳು ಯಾರ ಪರವಾಗಿದ್ದಾರೆ ಎಂಬುದು ಅರ್ಥವಾಗುತ್ತದೆ ಎಂದರು.

ಸಂತ್ರಸ್ತ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್ ಮಾತನಾಡಿ. ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಂಡು ರೈತರನ್ನು ಬೆದರಿಸುವ ಮೂಲಕ ಅವರ ಹಕ್ಕುಗಳನ್ನು ದಮನಗೊಳಿಸಲು ಮುಂದಾಗಿದ್ದಾರೆ ಜಿಲ್ಲಾಡಳಿತ ಜೊತೆಗೆ ಸಂಸದ ಎಸ್ ಮುನಿಸ್ವಾಮಿ ಕೈ ಜೋಡಿಸಿದ್ದಾರೆ ಮಾನ್ಯ ಮುನಿಸ್ವಾಮಿ ಅವರಿಗೆ ಇದೇ ರೈತರು ಓಟು ಹಾಕಿದ್ದಾರೆ ಎಂಬುದು ಮರೆತಿದ್ದಾರೆ ಅವರನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಸಂಸದರದು ಆದರೆ ರಸ್ತೆ ನಿರ್ಮಿಸುವ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಗುತ್ತಿಗೆದಾರ ಪರವಾಗಿ ವಕಾಲತ್ತು ವಹಿಸಿದ್ದಾರೆ ಇವರನ್ನು ಮುಂದಿನ ದಿನಗಳಲ್ಲಿ ರೈತರು ತಕ್ಕಪಾಠ ಕಲಿಸಬೇಕಾಗಿದೆ ಎಂದರು.

ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಕಲಾವಿದ ಸ್ವಾಮಿ. ಮಾತನಾಡಿ ಬೆಂಗಳೂರು ನಿಂದ ಚೆನ್ನೈಗೆ ಹೋಗುವ ರಸ್ತೆಗೆ ಭೂಮಿಯನ್ನು ವಶಪಡಿಸಿಕೊಂಡಿರುವ ಜಿಲ್ಲಾಡಳಿತ ರೈತರಿಗೆ ಪರಿಹಾರ ನೀಡಲು ಮುಂದಾಗಿಲ್ಲ ಬದಲಿಗೆ ದೌರ್ಜನ್ಯ ಮಾಡಿ ವಿಷಕುಡಿಯುವ ಪರಿಸ್ಥಿತಿಗೆ ತಂದಿದ್ದಾರೆ ಪಿ ನಂಬರ್, ಇನಾಮ್ತಿ ಜಮೀನು ಸಮಸ್ಯೆ ಬಗ್ಗೆ ಇತ್ಯರ್ಥ ಮಾಡಿಕೊಡಲು ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಸಭೆ ಮಾಡಿದ್ದರೂ ಕೇವಲ ಸಭೆಗೆ ಮಾತ್ರ ಸೀಮಿತವಾಗಿದೆ ಪರಿಹಾರವಾಗಲಿ ಸಮಸ್ಯೆ ಇತ್ಯರ್ಥವಾಗಲಿ ಯಾವುದೂ ಆಗಿಲ್ಲ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ರೈತರ ಭೂಮಿಗೆ ನ್ಯಾಯಯುತವಾಗಿ ರೈತರು ಸಮ್ಮತಿಸಿ ನಿಗದಿಪಡಿಸಿದ ಬೆಲೆಯನ್ನು ನೀಡಬೇಕಾದ ಸರಕಾರ ಮತ್ತು ಜಿಲ್ಲಾಡಳಿತ ತಾರತಮ್ಯ ಮಾಡುತ್ತಾ ಇದ್ದಾರೆ ಸಂತ್ರಸ್ತ ರೈತರ ಕುಟುಂಬಕ್ಕೆ ಉದ್ಯೋಗ ನೀಡಬೇಕು ರೈತರಿಗೆ ಪೂರ್ತಿ ಪರಿಹಾರ ಹಣ ಸಿಗುವ ತನಕ ರೈತರ ಜಮೀನಿನಲ್ಲಿ ರಸ್ತೆ ಕಾಮಗಾರಿ ಮಾಡುವುದನ್ನು ನಿಲ್ಲಿಸಬೇಕು ಸರ್ವೆ ಸಮೀಕ್ಷೆಯಲ್ಲಿ ನಿಗದಿಪಡಿಸಿದ ವಸ್ತುಗಳಿಗೆ ಗಿಡಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಸಂತ್ರಸ್ತ ಹೋರಾಟ ಸಮಿತಿಯ ಮುಖಂಡರಾದ ಟಿ.ಎಂ ವೆಂಕಟೇಶ್, ಕೆ.ಎನ್ ಮುನಿವೆಂಕಟೇಗೌಡ, ಕಲ್ಲುಕೆರೆ ಬಾಬು, ರಂಗನಾಥ್, ನಾರಾಯಣರೆಡ್ಡಿ, ರಮೇಶ್, ಸುಶೀಲಾ, ರಾಮಚಂದ್ರಪ್ಪ, ಮಂಜುನಾಥ್, ಅಂಜನಪ್ಪ, ಮುನಿಯಪ್ಪ, ತಿಮ್ಮರಾಯಪ್ಪ, ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಗೋವಿಂದಪ್ಪ, ಅಪ್ಪಾಜಿಗೌಡ, ಮುಂತಾದವರು ಇದ್ದರು.

ಸುದ್ದಿ ಓದಿ ಹಂಚಿ:

Leave a Reply

Your email address will not be published. Required fields are marked *

You missed

error: Content is protected !!