• Fri. Apr 26th, 2024

PLACE YOUR AD HERE AT LOWEST PRICE

ಕೆಜಿಎಫ್ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಹಸಿದವರ ಹೋಟ್ಟೆ ತುಂಬಿಸುವ ನಿಟ್ಟಿನಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಭಾರತ್ ಮಾತಾ ಕ್ಯಾಂಟಿನ್ ಆರಂಭಿಸಿದ್ದು, ಅವರ ಸೇವಾ ಕಾರ್ಯ ನಿರಂತರವಾಗಿ ಮುಂದುವರೆಯಲಿ ಎಂದು ಎಸ್‍ಐ ಭಾರತಿ ಹೇಳಿದರು.

ಅವರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ರವರು ಅಯೋಜಿಸಿದ್ದ ಭಾರತಾ ಮಾತ ಕ್ಯಾಂಟಿನ್‍ಗೆ ಚಾಲನೆ ನೀಡಿ ಮಾತನಾಡಿ ಇಂದಿನ ದಿನದಲ್ಲಿ ಒಂದು ಕುಟುಂಭದಲ್ಲಿ ತಂದೆ ತಾಯಿ,ಮಗಳು ಮಗ ಇದ್ದರೆ ಅವರುಗಳ ದಿನದ ವೆಚ್ಚ ಎಷ್ಟು ಆಗಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಆದರೆ ಸುರೇಶ್ ರವರು ತಮ್ಮ ದುಡಿಮೆಯ ಹಣದಿಂದ ಬಡ ಕುಟುಂಭಗಳಿಗೆ ನಿತ್ಯ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಿರುವುದು ಸಂತೋಷಕಾರಿ ಸಂಗತಿಯಾಗಿದ್ದು ಎಲ್ಲರು ಸದ್ಬಳಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಕಮ್ಮಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಮಾತನಾಡಿ ನಾನು ಬಡ ಕುಟುಂಭದಿಂದ ಬಂದಿದ್ದು ಬಡವರ ಸಂಕಷ್ಟದ ಅರಿವು ನನಗೆ ಇದೆ. ಆದ್ದರಿಂದ ನಿತ್ಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಅವರ ಕುಟುಂಭದವರಿಗೆ ನನ್ನ ಕೈಲಾದ ಸೇವೆಯನ್ನು ಮಾಡುವ  ಅವಕಾಶವನ್ನು ಭಗವಂತ ಕಲ್ಪಿಸಿಕೊಟ್ಟಿರುವುದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ ಎಂದರು.

ಓಆರ್‍ಎಸ್ ಟ್ರಸ್ಟ್ ವತಿಯಿಂದ ಭಾರತಾ ಮಾತ ಎಂಬ ನಾಮಂಕಿತವನ್ನು ಇಟ್ಟು ಅನ್ನದಾಸೋಹವನ್ನು ಮಾಡಲಾಗುತ್ತಿದೆ. ನಾನು ಮಾಡುತ್ತಿರುವ ಸೇವೆಯಲ್ಲಿ ಯಾವುದೆ ರಾಜಕೀಯ ಉದ್ದೇಶವಿಲ್ಲ ಒಂದು ವೇಳೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ವರಿಷ್ಠರು ನನ್ನ ಸೇವೆಯನ್ನು ಗಮನಿಸಿ ಟಿಕೇಟ್ ನೀಡಿ  ಮತದಾರರು ಆಶೀರ್ವಾದ ಮಾಡಿದರೆ ಇನ್ನು ಹೆಚ್ಚಿನ ಸೇವೆಗಳನ್ನು ಮಾಡುತ್ತೇನೆ ಎಂದರು.

ಜಾತಿ ಮತ ಭೇದವಿಲ್ಲದೆ ಎಲ್ಲ ಹಸಿದವರಿಗೂ ಉಚಿತವಾಗಿ ಊಟವನ್ನು ಸವಿಯಬಹುದು ನಾನು ಮನೆಯಲ್ಲಿ ನಿತ್ಯ ಸೇವಿಸುವ ಆಹಾರವನ್ನೇ ಇಲ್ಲಿನ ಜನರಿಗೂ ನೀಡುತ್ತೇನೆ ಯಾವುದೆ ಕಾರಣಕ್ಕೂ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ನಿತ್ಯ 1 ಗಂಟೆಯಿಂದ 3 ಗಂಟೆಯವರೆಗೂ ಅನ್ನದಾಸೋಹ ನಡೆಯಲಿದ್ದು ಎಲ್ಲರು ಬಂದು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಸುರೇಶ್ ಆಹಾರ ಗುಣಮಟ್ಟದ ಅಧಿಕಾರಿ ವರಲಕ್ಷ್ಮಿ,  ಕಲೈಸೇಲ್ವಿ, ಮಾಜಿ ಗ್ರಾಮ ಪಂಚಾಯ್ತಿ ಸದಸ್ಯ ಆನಂದ ಹಾಗೂ ಮುಖಂಡ ಬೊಮ್ಮಾಂಡಹಳ್ಳಿ ಸುಭ್ರಮಣಿ ಮತ್ತು ಇತರರು ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!