• Fri. May 3rd, 2024

ಕೋಲಾರ I ಆದಿಮದಲ್ಲಿ ಹ.ಸೋಮಶೇಖರ್ ನೆನಪು-ನಮನ ಕಾರ್ಯಕ್ರಮ ಮನದ ಮಲಿನತೆ ತೊಳೆಯಲು ಒಗ್ಗೂಡಿ – ಡಾ.ಕಾಳೇಗೌಡ ನಾಗವಾರ

PLACE YOUR AD HERE AT LOWEST PRICE

ಮನದ ಮಲಿನತೆಯನ್ನು ತೊಳೆಯಲು ಸಮಾನತೆ ಬಯಸುವ ಎಲ್ಲಾ ವಾದಿಗಳು ಒಗ್ಗೂಡಬೇಕಾಗಿರುವ ಅನಿವಾರ್ಯತೆ ಎದುರಾಗಿದೆಯೆಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಲೇಖಕ ಡಾ.ಕಾಳೇಗೌಡ ನಾಗವಾರ ಹೇಳಿದರು.

ಕೋಲಾರ ನಗರದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಭಾನುವಾರ ಅಗಲಿದ ಸಮಾಜವಾದಿ ಚಿಂತಕ ಡಾ.ಹ.ಸೋಮಶೇಖರ್ ನೆನಪು ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಂಬೇಡ್ಕರ್, ಪೆರಿಯಾರ್, ನಾರಾಯಣಗುರು, ಲೋಹಿಯಾವಾದಿಗಳು ಪ್ರತ್ಯೇಕವಾಗಿರುವುದಕ್ಕಿಂತಲೂ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಎಲ್ಲಾ ವಾದಿಗಳು ಒಗ್ಗೂಡಬೇಕಿದೆಯೆಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ನೆಲದ ಲೋಹಿಯಾವಾದಿಗಳಲ್ಲಿ ಕೋಲಾರದ ಹ.ಸೋಮಶೇಖರ್ ಪ್ರಮುಖರಾಗಿದ್ದರು, ಅಪರೂಪದ ವ್ಯಕ್ತಿತ್ವ ಹೊಂದಿದ್ದರು, ಸಂವೇದನಾಶೀಲ ವ್ಯಕ್ತಿಯಾಗಿದ್ದರೆಂದು ಬಣ್ಣಿಸಿದರು.

ಹ.ಸೋಮಶೇಖರ್ ಬರೆದಿರುವ ಎಲ್ಲಾ ಪುಸ್ತಕಗಳನ್ನು ಸಮಗ್ರವಾಗಿ ಪ್ರಕಟಿಸಬೇಕು, ಅವರ ಆಶಯಗಳ ಕುರಿತು ವಿಚಾರ ಸಂಕಿರಣ ನಡೆಸಬೇಕು ಮತ್ತು ಅವರ ಕುರಿತು ಗೆಳೆಯರ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರ ತರಬೇಕೆಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ಸಾಹಿತಿ ಕವಿ ಜೆ.ಬಾಲಕೃಷ್ಣ ಮಾತನಾಡಿ, ಕೃಷಿ ವಿವಿಯಲ್ಲಿ ಹ.ಸೋಮಶೇಖರ್ ಅನ್ವೇಷಕ ಬಳಗವನ್ನು ಮಾಡಿಕೊಂಡಿದ್ದರು. ಜಾತಿ ವಿನಾಶಕ ಸಂಕಿರಣವನ್ನು ಏರ್ಪಡಿಸಿದ್ದರು. ಅವರು ಅಗಲಿದ ನಂತರವೂ ಅವರ ಚಿಂತನೆಗಳ ಗೌರವಿಸುವರು ಸೇರಿ ನೆನಪು ನಮನ ಮಾಡುತ್ತಿದ್ದೇವೆಎಂದರು.

ಪ್ರಾಸ್ತಾವಿಕವಾಗಿ ಆದಿಮ ಹ.ಮಾ.ರಾಮಚಂದ್ರ ಮಾತನಾಡಿ, ಅಹಿಂದ ಚಳವಳಿಯಲ್ಲಿ ಹ.ಸೋಮಶೇಖರ್ ಪ್ರಮುಖ ಪಾತ್ರವಹಿಸಿದ್ದರು, ಪ್ರಖರ ಲೋಹಿಯಾವಾದಿಗಳಾಗಿದ್ದರು, ಅವರ ಆಶಯಗಳನ್ನು ನಾವೆಲ್ಲರೂ ಈಡೇರಿಸಬೇಕಿದೆಯೆಂದರು.

ದಲಿತ ಬಂಡಾಯ ಚಳವಳಿ ಮತ್ತು ಹ.ಸೋಮಶೇಖರ್ ವಿಷಯ ಕುರಿತು ಲಕ್ಷ್ಮೀಪತಿ ಕೋಲಾರ ಮಾತನಾಡಿ, ದಲಿತ ಚಳವಳಿಗೆ ತಾತ್ವಿಕ ಚೌಕಟ್ಟು ಹಾಕುವ ಉದ್ದೇಶಹೊಂದಿದ್ದ ಹ.ಸೋಮಶೇಖರ್ ಅಹಿಂದ ಚಳವಳಿಯ ತಾತ್ವಿಕ ಬುನಾದಿಯಾಗಿದ್ದರೆಂದರು.
ಕೋಲಾರದಲ್ಲಿ ಮೊದಲ ಬಾರಿಗೆ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಸಿ ಪ್ರೊ.ನಂಜುಂಡಸ್ವಾಮಿಯಿಂದ ಉದ್ಘಾಟಿಸಿದ್ದರು, ಅನ್ಯಾಯ ಎಲ್ಲೇ ಕಂಡರೂ ವಿರೋಽಸಬೇಕೆಂಬ ಪಾಠವನ್ನು ನಮಗೆಲ್ಲಾ ಹೇಳಿ ಕೊಟ್ಟ ಲೋಹಿಯಾ ಹಿನ್ನಲೆಯ ತಾತ್ವಿಕ ಗುರುವಾಗಿದ್ದರೆಂದು ನೆನಪು ಮಾಡಿಕೊಂಡರು.

ಹಿಂದುಳಿದವರ್ಗಗಳ ಹೋರಾಟ ಕುರಿತಂತೆ ಕೆ.ನಾರಾಯಣಸ್ವಾಮಿ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಪ್ರೊ.ಚಂದ್ರಶೇಖರ್ ನಂಗಲಿ ತಮ್ಮ ಹಾಗೂ ಹ.ಸೋಮಶೇಖರ್ ಬಾಂಧವ್ಯವನ್ನು ವಿವರಿಸಿದರು.

ಮಧ್ಯಾಹ್ನ ನಡೆದ ನಾ.ಕಂಡಂತೆ ಹ.ಸೋಮಶೇಖರ್ ಕುರಿತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದವರು ನೆನಪು ಹಂಚಿಕೊಂಡರು. ಅಧ್ಯಕ್ಷತೆಯನ್ನು ಡಾ.ಟಿ.ಎಸ್.ಚೆನ್ನೇಶ್‌ವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಸಮಾರೋಪ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಹ.ಸೋಮಶೇಖರ್‌ರ ಪತ್ನಿ ಗಾಯಿತ್ರಿಸೋಮಶೇಖರ್ ಮತ್ತು ಬಂಧು ಬಳಗದವರು, ಗೆಳೆಯರು ಭಾಗವಹಿಸಿದ್ದರು. ಆದಿಮ ಗೋವಿಂದಪ್ಪ ಸ್ವಾಗತಿಸಿ, ನಾವೆಂಕಿ ಮತ್ತು ನೇತ್ರಾವತಿ ನಿರೂಪಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!