• Fri. May 3rd, 2024

PLACE YOUR AD HERE AT LOWEST PRICE

ಕೆಜಿಎಫ್:ಕರ್ನಾಟಕ-ಆಂದ್ರ ಗಡಿ ಭಾಗದ ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬೇಕೆಂಬ ಹಿತದೃಷ್ಠಿಯಿಂದ ಸುಮಾರು 100ಕೋಟಿ ಬೆಲೆ ಬಾಳುವ 25 ಎಕರೆ ಜಾಗವನ್ನು ಎಪಿಎಂಸಿ ಮಾರುಕಟ್ಟೆಗೆ ನಿಗಧಿ ಪಡಿಸಲಾಗಿದೆ ಎಂದು ಶಾಸಕಿ ಡಾ.ಎಂ.ರೂಪಕಲಾ ಶಶಿಧರ್ ಹೇಳಿದರು.

ಬೇತಮಂಗಲ ಹೋಬಳಿಯ ಎನ್.ಜಿ.ಹಹುಲ್ಕೂರುನಲ್ಲಿ ಬೇತಮಂಗಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಜನಾಶೀರ್ವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಡಿ ಭಾಗದಲ್ಲಿ ನೂತನವಾಗಿ ಸಕಲ ಸೌಲಭ್ಯಗಳೊಂದಿಗೆ ಬೃಹತ್ ಮಾರುಕಟ್ಟೆ ಸ್ಥಾಪನೆಯಿಂದ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆ ಬರುವ ಜತೆಗೆ ನೂರಾರೂ ಮಂದಿಗೆ ಉದ್ಯೋಗ ಸಹ ದೊರೆಯುತ್ತದೆ ಎಂದರು.

ಎನ್.ಜಿ.ಹುಲ್ಕೂರು ಗ್ರಾಪಂನಲ್ಲಿ ಸುಮಾರು 05 ವರ್ಷಗಳಲ್ಲಿ ಸಿಸಿ ರಸ್ತೆ, ಐಮಾಸ್ಟ್ ದೀಪ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇತರೆ ಕಾಮಗಾರಿಗಳನ್ನು ಸುಮಾರು 4.50ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ತಿಳಿಸಿದರು.

ಪೂಗಾನಹಳ್ಳಿ ಹಾಗೂ ಪಂತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ನಾಶವಾಗಿರುವುದರಿಂದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಡಿಯಲ್ಲಿ ಶೀಘ್ರವಾಗಿ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಡಿಸಿಸಿ ಬ್ಯಾಂಕ್ ನಿಂದ ಯಾವುದೇ ಗ್ರಾಮದ ಮಹಿಳೆಯರು ಸಹ 1 ಸಂಘದ ಸದಸ್ಯರು 2- 3 ಭಾರಿ 50-1ಲಕ್ಷದ ವರೆಗೂ ಸಾಲ ಸೌಲಭ್ಯ ಪಡೆದು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀನಾರಾಯಣ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ರಾಧಕೃಷ್ಣರೆಡ್ಡಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ಗ್ರಾಪಂ ಅಧ್ಯಕ್ಷರಾದ ವೆಂಗಸಂದ್ರ ಶಂಕರ್, ಸುಂದರಪಾಳ್ಯ ರಾಂಬಾಬು, ಮಾಜಿ ಅಧ್ಯಕ್ಷರಾದ ಕಮ್ಮಸಂದ್ರ ನಾಗರಾಜ್, ಮುಖಂಡರಾದ ವಕೀಲ ಪದ್ಮನಾಭ ರೆಡ್ಡಿ, ಚಂದ್ರಕಾಂತ್, ಕಾರಿ ಪ್ರಸನ್ನ, ಅಪೋಜಿಗೌಡ, ಅನಂದ್ ಮೂರ್ತಿ, ನಾರಾಯಣಪ್ಪ, ಭಾರ್ಗವ್ ರಾಮ್, ಸ್ಕೂಲ್ ವೆಂಕಟೇಶ್, ನಾರಾಯಣಸ್ವಾಮಿ, ಜಯರಾಮ್ ರೆಡ್ಡಿ, ನಂಜುಂಡ ಗೌಡ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!