• Sat. May 4th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ಪದ್ಮಶ್ರೀ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ರವರಿಗೆ ಶಾಸಕ ರಮೇಶ್ ಕುಮಾರ್ ರ ಅದ್ಯಕ್ಷತೆಯಲ್ಲಿ ಸನ್ಮಾನ ಮಾಡಲಾಯಿತು.

ಶಾಸಕ ರಮೇಶ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ ಒಂದು ಬಡ ಕುಟುಂಬದಲ್ಲಿ ಹುಟ್ಟಿ ಪದ್ಮಶ್ರೀ ಪಿಂಡಿಪಾಪನಪಲ್ಲಿ ಮುನಿವೆಂಕಟಪ್ಪನವರ ಕಲೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿರುವುದು ತುಂಬಾ ಸಂತೋಷದ ವಿಷಯ  ಎಂದರು.

ನಿರಂತರ ಅಭ್ಯಾಸದ ಫಲವಾಗಿ ರಾಜ್ಯ ಸೇರಿ ದೇಶ ವಿದೇಶಗಳಲ್ಲಿ ತಮ್ಮ ತಮಟೆ ವಾದ್ಯದ ಪ್ರತಿಭೆಯನ್ನು ಪ್ರದರ್ಶಿರುವ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಸರ್ಕಾರದ ಒಂದು ತಂಡ ರಹಸ್ಯವಾಗಿ ಮಾಹಿತಿ ಪಡೆದುಕೊಂಡು ಪ್ರಶಸ್ತಿ ನೀಡಿದೆ ಎಂದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಮಟೆ ಹೊಡೆದು ನೆರದಿದ್ದ ಜನರಿಗೆ ಧನ್ಯವಾದಗಳು ತಿಳಿಸಿದರು.

ಇವರಿಗೆ ಮನೆಯಿಲ್ಲ ಎಂದು ತಿಳಿದುಕೊಂಡ ಶಾಸಕ ರಮೇಶ್ ಕುಮಾರ್ ಮನೆ ಇಲ್ಲದರಿವುದು ಬೇಸರದ ಸಂಗತಿ, ಮುಂದಿನ ದಿನಗಳಲ್ಲಿ ಎಲ್ಲರು ಕೈ ಜೋಡಿಸಿ ನಾವೇ ಮನೆಯನ್ನು ಕಟ್ಟಿಕೊಡೋಣ ಎಂದು ತಿಳಿಸಿದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!