• Fri. Sep 20th, 2024

ಕೋಲಾರ I ತಾಯಿಯ ಚಿನ್ನದ ಸರ ಅಡಇಟ್ಟು ಪತ್ರಿಕೆ ಆರಂಭಿಸಿದೆ ಅನೇಕರು ಬೆಳೆಸಿದರು – ಹೊನ್ನುಡಿ ಪ್ರಭಾಕರ

PLACE YOUR AD HERE AT LOWEST PRICE

ಪತ್ರಿಕೆ ಆರಂಭಿಸಲು ಹಣ ಇಲ್ಲದಿದ್ದಾಗ ತಮ್ಮ ತಾಯಿ ಚಿನ್ನದ ಸರ ನೀಡಿದ್ದರು, ಅದನ್ನು ಅಡ ಇಟ್ಟು ಆರಂಭಿಸಿದ ಹೊನ್ನುಡಿ ಪತ್ರಿಕೆಯನ್ನು ಅವಿಭಜಿತ ಕೋಲಾರ ಜಿಲ್ಲೆಯ ಓದುಗರು ಬೆಳೆಸಿದರು ಎಂದು ಹೊನ್ನುಡಿ ಪತ್ರಿಕೆ ಸಂಪಾದಕ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ ಹೇಳಿದರು.

ಕೆ.ಯೂ.ಡಬ್ಲ್ಯೂ.ಜೆ. ವಾರ್ಷಿಕ ದತ್ತಿ ಪ್ರಶಸ್ತಿಗೆ ಭಾಜನರಾಗಿರುವ ಹೊನ್ನುಡಿ ದಿನಪತ್ರಿಕೆಯ ಸಂಪಾದಕ ಎಂ.ಜಿ.ಪ್ರಭಾಕರ ಮಂಗಳವಾರ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನೆ ಸ್ಪೀಕರಿಸಿ ಮಾತನಾಡಿದರು.

ಪತ್ರಿಕೆ ಬೆಳೆಸಲು ನಾನೊಬ್ಬನೇ ಕಾರಣ ಅಲ್ಲ. ಹಲವಾರು ಮಂದಿ ಸೇರಿ ಕಟ್ಟಿದ ಪತ್ರಿಕೆ. ಈ ಪ್ರಶಸ್ತಿ ಎಲ್ಲರಿಗೂ ಸೇರಬೇಕು, ಪತ್ರಕರ್ತರು ನೇರ ನಿಷ್ಟೂರವಾದಿಗಳಾಗಿ ಕೆಲಸ ಮಾಡಬೇಕು. ಯಾರ ಮುಲಾಜಿಗೂ ಒಳಗಾಗಬಾರದು, ಪತ್ರಿಕಾ ಧರ್ಮವನ್ನು ಉಳಿಸಬೇಕೆಂದರು.

ಪತ್ರಕರ್ತರು ಸ್ವಾಭಿಮಾನ ಮತ್ತು ನಿರ್ದಾಕ್ಷಿಣ್ಯ ಮನೋಭಾವ ಉಳಿಸಿಕೊಳ್ಳಬೇಕು. ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ, ಇಂದಿನ ಬಹುತೇಕ ಪತ್ರಕರ್ತರಲ್ಲಿ ಈ ಎರಡೂ ಗುಣಗಳ ಕೊರತೆ ಕಂಡುಬರುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಿಷಾದಿಸಿದರು.

ಕೆ.ಯೂ.ಡಬ್ಲ್ಯೂಜೆ. ಖಜಾಂಚಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಹಿರಿಯಪತ್ರಕರ್ತ ಎಸ್.ಚಂದ್ರಶೇಖರ್, ಪ್ರಕಾಶ್ (ಮಾಮಿ), ಟೇಕಲ್ ಲಕ್ಷ್ಮೀಶ್ ಮಾತನಾಡಿ ಎಂ.ಜಿ.ಪಿಯವರನ್ನು ಅಭಿನಂದಿಸಿದರು.

ಎನ್.ಮುನಿವೆಂಕಟೇಗೌಡ, ಓಂಕಾರಮೂರ್ತಿ, ಕೆ.ಆಸೀಫ್ ಪಾಷ, ಸ್ಕಂದಕುಮಾರ್, ಎನ್.ಶಿವಕುಮಾರ್, ಎನ್.ಗಂಗಾಧರ್, ಎಂ.ಲಕ್ಷ್ಮ್ಮಣ, ಎನ್.ಸತೀಶ್, ಬಾಲನ್, ಬೆಟ್ಟಣ್ಣ, ಪವನ್, ಅಮರ್, ಕಿತ್ತಂಡೂರು ವೆಂಕಟರಾಮ್, ಪುರುಷೋತ್ತಮ್, ಜೆ.ಅಂಬರೀಶ್, ಎಂ.ವಿನೋದ್, ಮುಕ್ತಿಯಾರ್ ಅಹಮದ್, ಸರ್ವಜ್ಞಮೂರ್ತಿ, ಶ್ರೀಹರಿ, ಶ್ರೀಕಾಂತ್, ಶಿವುಸಸ್ಯ, ಪ್ರಕಾಶ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

You missed

error: Content is protected !!