• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ:2023ರಲ್ಲಿ ಬರಲಿರುವ ವಿಧಾನಸಭಾ ಚುನಾವಣಾ ಮತಯಂತ್ರವನ್ನು ಉನ್ನತೀಕರಿಸಿದ್ದು ಮತದಾರರು ಯಾವುದೇ ಅನುಮಾನ ಸಂಶಯವಿಲ್ಲದೆ ಮತಯಂತ್ರದ ಮೂಲಕ ಮತದಾನ ಮಾಡಬಹುದು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್.ವೆಂಕಟೇಶಪ್ಪ ಹೇಳಿದರು.

ಅವರು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಮತಯಂತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಮತಯಂತ್ರದ ಬಗ್ಗೆ ಮತದಾರರಿಗೆ ಇರಬಹುದಾದ ಅನುಮಾನಗಳ ನಿವಾರಣೆಗೆ ಈ ರೀತಿಯಾಗಿ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದರು.

ಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗುವ ಮತಯಂತ್ರಕ್ಕೆ ಹೆಚ್ಚುವರಿಯಾಗಿ ವಿವಿ ಪ್ಯಾಟ್ ಅಳವಡಿಸಲಾಗಿದೆ. ಇದರಿಂದ ಮತದಾರ ಯಾವ ಚಿನ್ಹೆಗೆ ಮತ ಚಲಾಯಿಸುತ್ತಾನೋ ಆ ಚಿನ್ಹೆಯನ್ನು ವಿವಿ ಪ್ಯಾಟ್ ನಲ್ಲಿ ನೋಡಬಹುದಾಗಿದೆ.

ಮತದಾರ ತನ್ನ ಇಚ್ಛೆಯ ಚಿನ್ಹೆಯ ಪಕ್ಕದಲ್ಲಿನ ಬಟನ್ ಒತ್ತಿದ ಮೇಲೆ ಅವರು ಯಾವ ಚಿನ್ಹೆಗೆ ಮತದಾನ ಮಾಡಿದರು ಎಂಬುದರ ಬಗ್ಗೆ ವಿವಿ ಪ್ಯಾಟ್ ನಲ್ಲಿ 7 ಸೆಕೆಂಡ್ ಅವರು ಒತ್ತಿದ ಚಿನ್ಹೆ ಕಾಣಿಸುತ್ತದೆ. ಹಾಗಾಗಿ ಯಾರಿಗೆ ಮತ ನೀಡಲಾಗಿದೆ ಎಂಬುದು ವಿವಿ ಪ್ಯಾಟ್ ನಲ್ಲಿ ನೋಡಬಹುದಾಗಿದೆ.

ಈ ಬಾರಿ ಚುನಾವಣಾ ಕೇಂದ್ರದಲ್ಲಿ ಕಂಟ್ರೋಲ್ ಯೂನಿಟ್ ಮತ್ತು ಬ್ಯಾಲೇಟ್ ಯೂನಿಟ್ ಜೊತೆಗೆ ವಿವಿ ಪ್ಯಾಟ್ ಸಹ ಅಳವಡಿಸಲಾಗುತ್ತದೆ. ಮತದಾರನಿಗೆ ತಾನು ಹಾಕುವ ಮತ ಬೇರೆಯವರಿಗೆ ಹೋಗುತ್ತದೆ ಎಂಬ ಅನುಮಾನ ಇದ್ದು ಅದನ್ನು ಹೋಗಲಾಡಿಸಲು ವಿವಿ ಪ್ಯಾಟ್ ಅಳವಡಿಸಲಾಗುತ್ತಿದೆ.

ಮತದಾರರಲ್ಲಿ ಇರುವ ಅನುಮಾನವನ್ನು ಹೋಗಲಾಡಿಸುವ ಸಲುವಾಗಿ ತಾಲ್ಲೂಕಿನಾದ್ಯಂತ ಈ ರೀತಿಯ ತರಭೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ತಾಲ್ಲೂಕಿನಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ತರಭೇತಿ ಕಾರ್ಯಕ್ರಮಗಳ ಮೂಲಕ ಮತದಾರರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದರು.

ಮತಯಂತ್ರದ ಬಗ್ಗೆ ತಿಳುವಳಿಕೆ ನೀಡಿದ ನಂತರ ಮತದಾನ ಮಾಡುವ ಮತ್ತು ಯಾವ ಚಿನ್ಹೆಗೆ ಮತದಾನ ಮಾಡಲಾಗಿದೆ ಎಂಬುದನ್ನು ವಿವಿ ಪ್ಯಾಟ್ ನಲ್ಲಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟು, ಸಾರ್ವಜನಿಕರಿಗೆ ತಾಲೀಮು ಮಾಡಿಸಿ ಅನುಮಾನ ಶಮನಗೊಳಿಸಲಾಯಿತು.

ಈ ಸಂದರ್ಬದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ಧೇಶಕ ಯುವರಾಜು, ಶಿರಸ್ತೆದಾರ್ ಚಂದ್ರಶೇಖರ್, ಪಿಡಿಒ ರಾಘವೇಂದ್ರ ಮೊಲದಾವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!