• Mon. May 6th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಕಾಮಸಮುದ್ರ ಹೋಬಳಿ ಕೇಂದ್ರದಲ್ಲಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಡಾಕ್ಟರ್ಸ್ ಇಲ್ಲದೇ ಇರುವುದರಿಂದ ಈ ಭಾಗದ ಜನತೆಗೆ ತುಂಬಾ ತೊಂದರೆಯಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಎಂದು ಜೈ ಭುವನೇಶ್ವರಿ  ಕರುನಾಡ ಸೇನೆಯ ಸಂಸ್ಥಾಪಕ ರಾಜ್ಯಾದ್ಯಕ್ಷ ನರಸಿಂಹ ಮೂರ್ತಿ ಅಸಮಾದಾನ ವ್ಯಕ್ತಪಡಿಸಿದರು.

ಅವರು ಕಾಮಸಮುದ್ರದಲ್ಲಿ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ಹಾಗೂ ಕೆ.ಟಿ.ರಾಮಚಂದ್ರ ಹಾಗೂ ಕೆ.ಜೆ.ಜಗನ್ರ ನೇತೃತ್ವದಲ್ಲಿ  ಬಂದ ಸುಮಾರು 50 ಕಾರ್ಯಕರ್ತರನ್ನು ಸಂಘಟನೆಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಆಸ್ಪತ್ರೆಯಲ್ಲಿನ ಕೊರತೆಗಳ ಮತ್ತು ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ನೀಡಲಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಮನವಿ ನೀಡಿದ ವಿಷಯವು ಮಾಧ್ಯಮದ ಮೂಲಕ ಪ್ರಚಾರವೂ ಆಗಿತ್ತು.

ಈ ಹಿನ್ನಲೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವೈದ್ಯರ ಕೊರತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಆದರೂ ಡಾಕ್ಟರ್‌ಗಳು ಇಲ್ಲಿ ನಿಯೋಜಿಸುವ ಕೆಲಸ ಆಗಿಲ್ಲ. ಸರ್ಕಾರಕ್ಕೆ ಮತ್ತು ಆರೋಗ್ಯ ಸಚಿವರಿಗೆ ಕೂಡ ಮನವಿ ನೀಡಲಾಗಿದೆಯಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರಾತ್ರಿ ವೇಳೇಯಲ್ಲಿ ವೈದ್ಯರಿಲ್ಲದ ಕಾರಣ ಈ ಭಾಗದ ಜನ ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅಸಮದಾನ ವ್ಯಕ್ತಪಡಿಸಿದರು.

ಕೂಡಲೆ ಸಮಸ್ಯಯನ್ನು ಸರ್ಕಾರ ಪರಿಹರಿಸಬೇಕು ಎಂದು ಒತ್ತಾಯಿಸಿದ ಅವರು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಜೈ ಭುವನೇಶ್ವರಿ ಕರುನಾಡ ಸೇನೆ ಸಂಘಟನೆ ವತಿಯಿಂದ ಕಾಮಸಮುದ್ರ ಹೋಬಳಿಯ ಎಲ್ಲಾ ಹಳ್ಳಿಗಳ ಮುಖಂಡರೊಂದಿಗೆ ಆರೋಗ್ಯ ಸಚಿವರ ಮನೆ ಮುಂದೆ ಹೋರಾಟ ಮಾಡಲಾಗುವುದು ಎಂದು ತಎಚ್ಚರಿಸಿದರು.

ಈ ವೇಳೆ ಜಿಲ್ಲಾ ಅಧ್ಯಕ್ಷ ರಾಮ್‌ರೆಡ್ಡಿ ಜಿಲ್ಲಾ ಪದಾಧಿಕಾರಿ ಕೆ.ಎಂ.ನಾರಾಯಣಕುಮಾರ್ಗೂ ತಾಲೂಕು ಪದಾಧಿಕಾರಿ ಕೆ.ಪಿ.ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕಾಮಸಮುದ್ರದ ಹೋಬಳಿ ಸಂಘಟನೆಯ  ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಆದಿನಾರಾಯಣ(ಕುಟ್ಟಿ), ಮುಖಂಡರಾದ ಕುಮರೇಶ್, ಪುರುಷೋತ್ತಮ್, ಮಂಜುನಾಥ್, ಬಿ.ಎಲ್.ನಾಗರಾಜ್, ಟಿ.ಸಿ.ವೆಂಕಟೇಶ್, ರಾಮಚಂದ್ರಪ್ಪ, ಸುಮನ್, ಧನುಷ್, ಅಭಿರಾಮ್, ಬಾಲಾಜಿ, ಅನಿಲ್, ಭರಣಿ, ಉದಯ್, ಲಕ್ಷ್ಮಣ್, ವಾಸು, ಮಣಿ, ರಾಜು, ಪೃಥ್ವಿ, ವಿನೋದ್ ಕುಮಾರ್, ಗಿರೀಶ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!