• Fri. Apr 26th, 2024

ಕೋಲಾರ I ಬಡ ರೋಗಿಗಳು ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಪ್ರಯೋಜನ ಪಡೆದುಕೊಳ್ಳ ಬೇಕು : ರೋಟರಿ ಸುಧಾಕರ್

PLACE YOUR AD HERE AT LOWEST PRICE

ಹಲವು ಕಾರಣಗಳಿಂದ ಕ್ಯಾನ್ಸರ್ ವ್ಯಾಪಕವಾಗಿ ಹರಡುತ್ತಿದ್ದು,ರೋಗ ತಪಾಸಣೆ ಹಾಗೂ ಚಿಕಿತ್ಸೆ ವೆಚ್ಚ ದುಬಾರಿಯಾಗಿರುವುದರಿಂದ ರೋಗಿಗಳಿಗೆ ಅನುಕೂಲ ಆಗಲೆಂದು ಉಚಿತ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಶಿಬಿರದ ಅನುಕೂಲವನ್ನು ಬಡ ರೋಗಿಗಳು ಪಡೆದುಕೊಳ್ಳುವಂತೆ ರೋಟರಿ ಕೋಲಾರ ಸೆಂಟ್ರಲ್ ಕಾರ್ಯದರ್ಶಿ ಸುಧಾಕರ್ ತಿಳಿಸಿದರು.

ಕೋಲಾರ ನಗರದ ಮುನಿಸಿಪಲ್ ಆಸ್ಪತ್ರೆಯಲ್ಲಿ ರೋಟರಿ ಸೆಂಟ್ರಲ್ ಮತ್ತು ವೈದೇಹಿ ಆಸ್ಪತ್ರೆ ಹಾಗೂ ಸಿ.ಎಂ.ಆರ್.ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕ್ಯಾನ್ಸರ್ ತಪಸಣಾ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡುತ್ತಾ,ಆಶಾ ಕಾರ್ಯಕರ್ತೆಯರು ಶ್ರಮವಹಿಸಿದರೆ ಕ್ಯಾನ್ಸರ್ ರೋಗಿಗಳ ಪತ್ತೆ ಹಾಗೂ ಚಿಕಿತ್ಸೆಗೆ ಅನುಕೂಲ ಆಗುತ್ತದೆ ಹಾಗೂ ಉಚಿತ ತಪಾಸಣೆ ಶಿಬಿರಗಳ ಪ್ರಯೋಜನ ಬಡ ರೋಗಿಗಳಿಗೆ ದೊರೆಯುತ್ತದೆ ಎಂದರು.

ಇದೇ ರೀತಿ ಬೇರೆ ಬೇರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಶಿಬಿರಗಳನ್ನು ಮುಂದಿನ ದಿನಗಳಲ್ಲೂ ಹಮ್ಮಿಕೊಳ್ಳಲಾಗುವುದು ಜಿಲ್ಲೆಯ ಬಡ ರೋಗಿಗಳು ಶಿಬಿರಗಳ ಪ್ರಯೋಜನ ಪಡೆದುಕೊಳ್ಳ ಬೇಕೆಂದು ಅವರು ತಿಳಿಸಿದರು.

ಕೋಲಾರ ಜಿಲ್ಲಾ ಭಾರತ ಸೇವಾದಳದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸಿ.ಎಂ.ಆರ್ ಶ್ರೀನಾಥ್ ರೋಟರಿ ಅಧ್ಯಕ್ಷರಾದ ಮೇಲೆ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುತ್ತಿರುವುದು ಶ್ಲಾಘನೀಯವೆಂದರು.

ಅನೇಕ ಕಾರಣಗಳಿಂದ ತರಾವರಿ ಕ್ಯಾನ್ಸರ್ ಬರುತ್ತಿದ್ದು,ಆರಂಭದ ಹಂತದಲ್ಲಿ ತಪಾಸಣೆಗೆ ಒಳಗಾದರೆ ರೋಗ ನಿಯಂತ್ರಣ ಹಾಗೂ ಉಲ್ಬಣವಾಗುವುದನ್ನು ತಡೆಯಬಹುದಾಗಿದೆ,ರೋಗಿಗಳ ಅನುಕೂಲ ಮಾಡಲು ಆಶಾ ಕಾರ್ಯಕರ್ತೆಯರು ಶ್ರಮಿಸಬೇಕೆಂದರು.

ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸುವಂತಾಗ ಬೇಕು ಹಾಗೂ ವೈದೇಹಿ ಆಸ್ಪತ್ರೆ ಕೋಲಾರ ನಗರದಲ್ಲಿ ತನ್ನ ಘಟಕವನ್ನು ತರೆದು ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ರಮೇಶ್,ವೈದೇಹಿ ಆಸ್ಪತ್ರೆಯ ಡಾ.ಕಿರಣ್,ಜೆ.ಡಿ.ಎಸ್.
ಮುಖಂಡರುಗಳಾದ ಎಮ್. ಇಮ್ರಾನ್ ಪಾಷ, ಪುಟ್ಟ ರಾಜು, ವಾಟರ್ ಬಾಬು, ಅಪ್ಸರ್, ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!