ಕೆಜಿಎಫ್: ಬೇತಮಂಗಲದ ಪಾಲಾರ್ ಕೆರೆ ದಡದಲ್ಲಿ ನೆಲೆಸಿರುವ ಪುರಾತನ ದೇಗುಲ ಶ್ರೀ ವಿಜಯೇಂದ್ರ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಶಾಸಕಿ ಎಂ.ರೂಪಕಲಾ ಸೇರಿದಂತೆ ಗಣ್ಯರು ಚಾಲನೆ ನೀಡಿದರು.
ಬೇತಮಂಗಲದ ಹಳೇ ಬಡಾವಣೆಯಲ್ಲಿರುವ ದೇಗುಲದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭನೆಯ ಬ್ರಹ್ಮ ರಥೋತ್ಸವವನ್ನು ಆಚರಿಸಲಾಯಿತು. ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಮಾಡಿದ ನಂತರ ರಥೋತ್ಸವಕ್ಕೆ ಹೋಮ ಹವನ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಅನ್ನದಾನ, ಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿತ್ತು. ದೇಗುಲ ಪ್ರಧಾನ ಆರ್ಚಕರಾದ ಸುದರ್ಶನಾಚಾರ್, ಮಂಜುನಾಥ್ ದೀಕ್ಷಿತ್, ಹಾಗೂ ಅನೇಕ ಅರ್ಚಕರಿದ್ದರು.
ಈ ಸಂದರ್ಭದಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್, ಮಾಜಿ ಶಾಸಕ ವೈ.ಸಂಪಂಗಿ, ದೇಗುಲ ಕನ್ವೀನರ್ ಅ.ಮು ಲಕ್ಷ್ಮೀನಾರಾಯಣ್, ಗ್ರಾಪಂ ಅಧ್ಯಕ್ಷೆ ಮಮತಾಗಣೇಶ್, ಜಿಪಂ ಮಾಜಿ ಸದಸ್ಯ ನಿರ್ಮಲ ಅಮರೇಶ್, ಮುಖಂಡರಾದ ದುರ್ಗಾ ಪ್ರಸಾದ್, ವಾಸವಿ ಮೂರ್ತಿ, ಕಸಾಪ ಅಧ್ಯಕ್ಷ ಶ್ರೀಹರಿ, ಅಶ್ವತ್, ಶ್ರೀಧರ್, ಬಾಬು, ಬಿ.ಕೆ ಶ್ರೀನಿವಾಸ್, ಕಳ್ಳಿಕುಪ್ಪ ಸುರೇಶ್, ಬಾರ್ಲಿ ಬಾಲಕೃಷ್ಣ, ಗ್ರಾಪಂ ಸದಸ್ಯರಾದ ವಿನು ಕಾರ್ತಿಕ್, ಶ್ರೀನಿವಾಸ್, ಓಂ ಸುರೇಶ್, ಶ್ರೀರಾಮ್, ಮೊದಲಾದವರಿದ್ದರು.