• Sat. May 4th, 2024

PLACE YOUR AD HERE AT LOWEST PRICE

ಕೆಜಿಎಫ್:ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಸಮ್ಮುಖದಲ್ಲಿ ಪಾರಂಡಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಮೂರು ಜನ ಸದಸ್ಯರು ಬಿ.ಜೆ.ಪಿ. ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಪಾರಂಡಹಳ್ಳಿಯಲ್ಲಿ ಗ್ರಾಪಂ ಹಾಲಿ ಅಧ್ಯಕ್ಷೆ ತುಳಸಮ್ಮ ರಾಮಚಂದ್ರಾರೆಡ್ಡಿ, ಹಾಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಮ್ಮ ವೆಂಕಟು, ವನಿತಾ ಸುರೇಶ್ ಮತ್ತು ಪೆಟ್ರಿಕ್ ಜಾರ್ಜ್ ಈ ನಾಲ್ವರು  ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಸೇರ್ಪಡೆಯಾದ ಅಧ್ಯಕ್ಷರು ಮಾತನಾಡಿ ಶಾಸಕರು ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಹಾಗೂ ಅಧಿಕಾರ ಮೋಹಕ್ಕೆ ಬೆಲೆ ಕೊಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದನ್ನು ಗಮನಿಸಿದ್ದೇವೆ.

ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರ ಹಾಗೂ ನಮ್ಮ ಪಂಚಾಯಿತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾನ್ಯ ಶಾಸಕರ ಮುಖಾಂತರ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.

ಈ ವೇಳೆ ಶಾಸಕಿ ಡಾ.ರೂಪಕಲಾ ಮಾತನಾಡಿ, ತಮ್ಮ ಮೇಲೆ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರ್ಪಡೆಯಾದ ಸದಸ್ಯರಿಗೆ ಹಾರ್ದಿಕವಾದ ಸ್ವಾಗತ ಕೋರಿ ಧನ್ಯವಾದಗಳನ್ನು ತಿಳಿಸಿದರು.

ಯಾವುದೇ ಸಮಸ್ಯೆ ಇರಲಿ ತಮ್ಮ ಬಳಿ ಬರಲು ತಿಳಿಸಿ ಪ್ರತಿಯೊಬ್ಬರನ್ನೂ ತಮ್ಮ ಪಕ್ಷದಲ್ಲಿ ಗೌರವಯುತವಾಗಿ ಕಾಣಲಾಗುವುದು. ಈ ಬೆಳವಣಿಗೆಯಿಂದ ನನಗೆ ಈ ಭಾಗದಲ್ಲಿ ಇನ್ನಷ್ಟು ಬಲ ಬಂದಂತಾಯಿತು ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ರಾಧಾಕೃಷ್ಣರೆಡ್ಡಿ, ಜಿಪಂ ಮಾಜಿ ಉಪಾದ್ಯಕ್ಷ ಅಪ್ಪಿವೆಂಕಟರಾಮರೆಡ್ಡಿ, ದಶರಥರೆಡ್ಡಿ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!