PLACE YOUR AD HERE AT LOWEST PRICE
ಕೆಜಿಎಫ್:ಬಂಗಾರಪೇಟೆ ತಾಲ್ಲೂಕಿನಿಂದ ಕೆಜಿಎಫ್ ತಾಲ್ಲೂಕು ಬೇರ್ಪಟ್ಟ ಮೇಲೆ ತಾಲ್ಲೂಕಿನಲ್ಲಿ ಎಲ್ಲಾ ಇಲಾಖೆಗಳನ್ನು ತರಲು ಶಕ್ತಿ ಮೀರಿ ಪರಿಶ್ರಮ ಪಟ್ಟಿದ್ದೀನಿ ಎಂದು ಶಾಸಕಿ ಡಾ.ರೂಪಕಲಾ ಶಶಿಧರ್ ಹೇಳಿದರು.
ಅವರು ಬೇತಮಂಘಲ ಹೋಬಳಿ ರಾಮಸಾಗರ ಗ್ರಾಪಂಯಲ್ಲಿ ಹಮ್ಮಿಕೊಂಡಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿ, ತಾಲ್ಲೂಕಿಗೆ ಬೇಕಿರುವ ಎಲ್ಲಾ ಇಲಾಖೆಗಳನ್ನು ಮಂಜೂರು ಮಾಡಿಸಿ, ನೂತನವಾಗಿ ಕಟ್ಟಡಗಳ ನಿರ್ಮಾಣಕ್ಕೆ ಸರಕಾರದ ಮೇಲೆ ಒತ್ತಾಡ ಹಾಕಿ ಕೋಟ್ಯಾಂತರ ಅನುದಾನ ತಂದು ಕೆಲವೇ ತಿಂಗಳುಗಳಲ್ಲಿ ಕಾಮಗಾರಿಗಳನ್ನು ಮುಗಿಸಲಾಗಿದೆ ಎಂದರು.
ಕ್ಷೇತ್ರಕ್ಕೆ ಏನು ಮಾಡಬೇಕೆಂಬ ಕನಸು ಕಟ್ಟಿಕೊಂಡು ಶಕ್ತಿ ಮೀರಿ ಅಭಿವೃದ್ಧಿ ಮಾಡಲಾಗಿದೆ ಎಂದ ಅವರು, ರಾಮಸಾಗರ ಗ್ರಾಪಂಯ ಎಲ್ಲಾ ಗ್ರಾಮಗಳಲ್ಲಿಯೂ ಸಿಸಿ ರಸ್ತೆ, ಶುದ್ಧ ಕುಡಿಯುವ ನೀರಿನ ಘಟಕ, ಹೈಮಾಸ್ಟ್ ದೀಪ, ಸಮುದಾಯ ಭವನ ಸೇರಿದಂತೆ ಅನೇಕ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು
ತಾಲ್ಲೂಕಿನ ಜನತೆಯು ಯಾವುದೇ ಕಾಯಿಲೆ ಹಾಗೂ ಅಪಘಾತಗಳು ಸಂಭವಿಸಿದಾಗ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕೆಂಬ ದೃಷ್ಠಿಯಿಂದ 8 ಕೋಟಿ ಅನುದಾನದಲ್ಲಿ ನೂತನವಾಗಿ ಸುಸಜ್ಜಿತವಾಗಿ ಆಸ್ಪತ್ರೆ ನಿರ್ಮಿಸಲಾಗಿದೆ ಎಂದರು.
ತಾಲ್ಲೂಕಿನ ರೈತರಿಗೆ ಉಪಯೋಗವಾಗಲು ಸ್ಥಳೀಯ ಮಟ್ಟದಲ್ಲಿಯೇ ಸುಮಾರು 25 ಎಕರೆ ಭೂ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆಗೆ ಜಾಗ ಗುರುತಿಸಲಾಗಿದೆ, ರೈತರು ತಾವು ಬೆಳೆಯುವ ಬೆಳೆಗಳನ್ನು ಇಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಕೃಷ್ಣರೆಡ್ಡಿ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಮುಖಂಡರಾದ ಪದ್ಮನಾಭ ರೆಡ್ಡಿ, ನಂಜುಂಡ ಗೌಡ, ಕೇಶವರೆಡ್ಡಿ, ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ದುರ್ಗಾಪ್ರಸಾದ್, ಸೊಸೈಟಿ ಅಧ್ಯಕ್ಷ ಕಾರಿಪ್ರಸನ್ನ, ಗ್ರಾಪಂ ಸದಸ್ಯರಾದ ಮುನಿಸ್ವಾಮಿರೆಡ್ಡಿ, ಚಂದ್ರಪ್ಪ, ಬಾಬುರೆಡ್ಡಿ, ಅಶ್ವಥ್, ಗಜೇಂದ್ರ, ಶ್ರೀನಾಥ್, ವಿನುಕಾರ್ತಿಕ್, ಒಬಿಸಿ ಮುನಿಸ್ವಾಮಿ, ವಿಕ್ಕಿರೆಡ್ಡಿ, ಮುರಳಿ, ಎನ್‍ಟಿಆರ್ ಮೊದಲಾದವರಿದ್ದರು.