• Thu. Sep 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬೆಂಗಳೂರಿನಿಂದ ಕುಪ್ಪಂ-ಮಾರಿಕುಪ್ಪಂ-ಜೋಲಾರ್ ಪೆಟ್ ನಡುವೆಯ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗವನ್ನು 130 ಕಿಲೋಮೀಟರ್ ಗೆ ಹೆಚ್ಚಿಸಲು ಜಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದು, ಕೆಲ ರೈಲುಗಳನ್ನು ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ರದ್ದುಪಡಿಸಿದೆ.

ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ರೈಲ್ವೆ ಇಲಾಖೆ ರೈಲುಗಳ ವೇಗ ಹೆಚ್ಚಿಸಲು  ಕಾಮಗಾರಿ ನಡೆಯುತ್ತಿದೆ. ಆ ಕಾರಣದಿಂದ ಕೆಲವು ರೈಲುಗಳನ್ನು ಕೆಲವು ದಿನಗಳಲ್ಲಿ ಮಾತ್ರ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

ಕೆ.ಎಸ್.ಆರ್ ಬೆಂಗಳೂರಿನಿಂದ ಮಾರಿಕುಪ್ಪಂಗೆ ಬರುವ ರೈಲು ಗಾಡಿ ಸಂಖ್ಯೆ01775ನ್ನು ಏಪ್ರಿಲ್ ತಿಂಗಳ 4,6,9,11,13,16,18,20,23,25,27,30 ಮತ್ತು ಮೇ ತಿಂಗಳ 2 ಮತ್ತು 4 ರಂದು ವೈಟ್ ಫೀಲ್ಡ್ ಮತ್ತು ಮಾರಿಕುಪ್ಪಂ ನಡುವ ಸಂಚಾರ ರದ್ದುಗೊಳಿಸಲಾಗಿದೆ.

ಮಾರಿಕುಪ್ಪಂನಿಂದ ಹೊರಡುವ ಬೈಯಪ್ಪನಹಳ್ಳಿ ವಿಶೇಷ ಮೆಮು ರೈಲು ಗಾಡಿ ಸಂಖ್ಯೆ 01778ನ್ನು ಏಪ್ರಿಲ್ 4,6,9,11,13,16,18,20, 23,25,27,30 ಮತ್ತು ಮೇ ತಿಂಗಳ 2 ಮತ್ತು 4ರಂದು ವೈಟ್ ಫೀಲ್ಡ್ ಮತ್ತು ಮಾರಿಕುಪ್ಪಂ ನಡುವ ಸಂಚಾರ ರದ್ದುಗೊಳಿಸಲಾಗಿದೆ.

ಕೆ.ಎಸ್.ಆರ್ ಬೆಂಗಳೂರಿನಿಂದ ಮಾರಿಕುಪ್ಪಂಗೆ ಹೊರಡುವ ಮೆಮು ರೈಲು ಗಾಡಿ ಸಂಖ್ಯೆ 01775ನ್ನು ಮೇ ತಿಂಗಳ 7,9,11,14,16 ಮತ್ತು 18 ರಂದು ಮಾಲೂರು ಮತ್ತು ಮಾರಿಕುಪ್ಪಂ ನಡುವೆ ರದ್ದುಗೊಳ್ಳಲಿದೆ.

ಮಾರಿಕುಪ್ಪಂನಿಂದ ಬೈಯಪ್ಪನಹಳ್ಳಿ ಕಡೆಗೆ ಹೊರಡುವ ಮೆಮು ರೈಲು ಗಾಡಿ ಸಂಖ್ಯೆ 01778ನ್ನು   ಮೇ ತಿಂಗಳ 7,9,11,14,16 ಮತ್ತು 18 ರಂದು ಮಾಲೂರಿನಿಂದ ಮಾರಿಕುಪ್ಪಂ ಮಾರ್ಗದ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಕೆ.ಎಸ್.ಆರ್.ಬೆಂಗಳೂರುನಿಂದ ಕುಪ್ಪಂಗೆ ಹೊರಡುವ ಮೆಮು ರೈಲು ಗಾಡಿ ಸಂಖ್ಯೆ 06529ನ್ನು ಜೂನ್ ತಿಂಗಳ 4,6,8,11,13 ಮತ್ತು 15ರಂದು ಕುಪ್ಪಂ ಮತ್ತು ವರದಾಪುರದ ನಡುವ ಸಂಚರಿಸಲು ವ್ಯವಸ್ಥೆಗೊಳಿಸಲಾಗಿದೆ.

ಕುಪ್ಪಂನಿಂದ ಕೆ.ಎಸ್.ಆರ್ ಬೆಂಗಳೂರಿಗೆ ಹೊರಡುವ ಮೆಮು ರೈಲು ಗಾಡಿ ಸಂಖ್ಯೆ 06530ನ್ನು ಜೂನ್ ತಿಂಗಳ 4,6,8,11,13 ಮತ್ತು 15ರಂದು ಕುಪ್ಪಂ ಮತ್ತು ವರದಾಪುರದ ನಡುವೆ ರದ್ದುಗೊಳಿಸಲಾಗಿರುತ್ತದೆ.

ಬಂಗಾರಪೇಟೆಯಿಂದ ಬೆಂಗಳೂರಿ ಕೆ.ಎಸ್.ಆರ್ ಗೆ ಹೊರಡುವ ರೈಲು ಗಾಡಿ ಸಂಖ್ಯೆ 01773ನ್ನು ಜೂನ್ ತಿಂಗಳ 17,20,22,24,27,29 ಮತ್ತು ಜುಲೈ 1ರಂದು ವೈಟ್ ಫೀಲ್ಡ್ ರೈಲು ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

ರೈಲುಗಳ ವೇಗ ಹೆಚ್ಚಿಸಲು ನಡೆಯುತ್ತಿರುವ ಕಾಮಗಾರಿಗಳ ಕಾರಣಕ್ಕೆ ಈ ರೀತಿ ರೈಲು ಸಂಚಾರಗಳಲ್ಲಿ ವ್ಯತ್ಯಾಸಗಳಾಗುತ್ತಿರುವ ಬಗ್ಗೆ ರೈಲ್ವೆ ಇಲಾಖೆ ಸಾರ್ವಜನಿಕರ ಗಮನಕ್ಕೆ  ನೋಟೀಸ್ ಜಾರಿಮಾಡಿದೆ.

Leave a Reply

Your email address will not be published. Required fields are marked *

You missed

error: Content is protected !!