• Fri. May 3rd, 2024

PLACE YOUR AD HERE AT LOWEST PRICE

ಮಾಲೂರು, ಏಪ್ರಿಲ್. ೧೫ : ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಇತರೆ ಪಕ್ಷ ಪ್ರತಿಸ್ಪರ್ಧಿಯಲ್ಲ, ಕಳೆದ ಐದು ವರ್ಷಗಳಲ್ಲಿ ಮಾಲೂರಿನ ಜನರು ಕೊಟ್ಟ ಅವಕಾಶವನ್ನು ಸದ್ವನಿಯೋಗಿಸಿ ಜನರ ವಿಶ್ವಾಸ ಉಳಿಸಿಕೊಂಡಿದ್ದೇನೆ. ನನ್ನ ಕನಸಿನ ಮಾಲೂರು ಕಟ್ಟಲು ಕ್ಷೇತ್ರದ ಜನತೆ ನನಗೆ ಮತ್ತೊಮ್ಮೆ ಆರ್ಶೀವಾದ ಮಾಡಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಮಾಲೂರಿನ ಕೊಮ್ಮನಹಳ್ಳಿ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು. ಮಾಲೂರು ಕ್ಷೇತ್ರದ ಜನತೆ ನನ್ನ ಮೆಲೆ ನಂಬಿಕೆ ಇಟ್ಟು ನನಗೆ ಅವಕಾಶ ಕೊಟ್ಟಿದ್ದರು, ಅವರ ನಂಬಿಕೆ ಉಳಿಸಿಕೊಳ್ಳಲು, ನಾನು ನನ್ನ ಕ್ಷೇತ್ರದಲ್ಲಿ ಮಾಡಿರುವ ಜನಪರ ಕಾರ್ಯಗಳು, ರಸ್ತೆ ಅಭಿವೃದ್ದಿ, ಕೊರೋನಾ ಸಂದರ್ಭದಲ್ಲಿ ಜನರೊಂದಿಗೆ ನಿಂತಿದ್ದು, ಸುಮಾರು ೩೦೦ ಕಿ.ಮೀ. ಪಾದಯಾತ್ರೆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯಗಳು ಹಾಗೂ ಜನ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಜಾಥಾ ನಡೆಸಿದ್ದು, ಮಾಲೂರಿನ ಜನತೆ ನನ್ನ ಕೈಬಿಡಲ್ಲ ಎಂಬುವ ವಿಶ್ವಾಸ ಮೂಡಿಸಿದೆ. ಎಂದರು.

ಕೊರೋನಾ ಸಂದರ್ಭದಲ್ಲಿ ದೃತಿಗೆಡದೆ ಕ್ಷೇತ್ರದ ಜನರ ಬೆನ್ನಿಗೆ ನಿಂತು ಅವರಿಗೆ ಧೈರ್ಯ ತುಂಬಿದ್ದೇನೆ. ಜನರ ಕಷ್ಟಗಳಲ್ಲಿ ಭಾಗಿಯಾಗಿದ್ದೇನೆ. ಇದಾದ ನಂತರ ಆಡಳಿತ ಪಕ್ಷದ ಜೊತೆ ಕೈಜೋಡಿಸಿದ ಹಲವಾರು ಶಾಸಕರು ಪಕ್ಷಾಂತರಗೊಂಡರು, ನನಗೂ ಆಮಿಷಗಳು ಬಂದವು ಆದರೆ, ನಾನು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ನನ್ನ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿಯಾಗಿ ನನಗೆ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದರು, ಅವರ ನಂಬಿಕೆಗೆ ದ್ರೋಹ ಬಗೆಯದೆ ಕ್ಷೇತ್ರದ ಜನರ ನಂಬಿಕೆ ಉಳಿಸಿಕೊಂಡಿದ್ದೇನೆ. ಹಾಗಾಗಿ ಜನರು ಈ ಬಾರಿ ನನ್ನ ಜೊತಗಿದ್ದಾರೆ ಹಾಗೂ ಬಹುಮತದಿಂದ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಲಭಿಸಲಿದೆ ಎಂದರು.

ಯರೋ ಕಟ್ಟಿದ ಮನೆಗೆ ಸೇರಿಕೊಳ್ಳುವ ಜನರಿಂದ ಬಿಜೆಪಿ ಪಕ್ಷದಲ್ಲಿ ಬಂಡಾಯ, ಇದರಿಂದ ಕಾಂಗ್ರೆಸ್ ಮೇಲೆ ಏನೂ ಪರಿಣಾಮ ಬೀರದು:
ಬಿಜೆಪಿ ಪಕ್ಷದಲ್ಲಿ ಬಂಡಾಯಕ್ಕೆ ಕಾರಣ, ಮನೆ ಕಟ್ಟಿದ್ದು ಒಬ್ಬರು ಆದರೆ ಆ ಮನೆಗೆ ಸೇರಿಕೊಂಡವರು ಬೇರೊಬ್ಬರು, ಈ ಹಿಂದೆ ಜೆಡಿಎಸ್ ಪಕ್ಷಕ್ಕೂ ಇದೇ ಪರಿಸ್ಥಿತಿ ಬಂದಿತ್ತು. ಹೀಗೆ ಯಾರೋ ಕಟ್ಟಿದ ಮನೆಗೋ ಬಂದು ಸೇರಿಕೊಳ್ಳೋರಿಂದ ಕಾಂಗ್ರೆಸ್ ಬಿಜೆಪಿಗೆ ನಷ್ಟವೇ ಹೊರತು ಕಾಂಗ್ರೆಸ್ ಮೇಲೆ ಏನೂ ಪರಿಣಾಮ ಬೀರಲ್ಲ.

ಏಪ್ರಿಲ್ ೧೭ಕ್ಕೆ ನಾಮಪತ್ರ ಸಲ್ಲಿಕೆ:
ಕಾಂಗ್ರೆಸ್ ಪಕ್ಷ ನನಗೆ ಮೊದಲ ಪಟ್ಟಿಯಲ್ಲೇ ಟಿಕೆಟ್ ಘೋಷಣೆ ಮಾಡಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ. ಇತರೆ ಪಕ್ಷಗಳಂತೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲಗಳಾಗಲೀ, ಬಂಡಾಯವಾಗಲಿ ಇಲ್ಲ, ಇಡೀ ಕ್ಷೇತ್ರ ಕಾಂಗ್ರೆಸ್ ಪರವಾಗಿದ್ದು ಮತ್ತೊಮ್ಮೆ ಕಾಂಗ್ರೆಸ್ ಜಯಭೇರಿ ಬಾರಿಸುವಲ್ಲಿ ಸಂದೇಹವಿಲ್ಲ ಎಂದು ಹೇಳಿದರು.

ಏಪ್ರಿಲ್ ೧೬ಕ್ಕೆ ರಾಹುಲ್ ಗಾಂಧಿ ಆಗಮನ ;
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯವರು ಏಪ್ರಿಲ್ ೧೬ರಂದು ಕೋಲಾರದಲ್ಲಿ ನಡೆಯುವ ಸತ್ಯಮೇವ ಜಯತೇ ಜನಾಂದೋಲನದ ಭಾಗವಾಗಿ ನಡೆಯುವ ಜೈಭಾರತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಸುಮಾರು ಒಂದು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದು, ಮಾಲೂರು ಕ್ಷೇತ್ರದಿಂದಲೂ ಸುಮಾರು ೧೦ ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಮುಖಂಡರು ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!