• Sat. May 4th, 2024

PLACE YOUR AD HERE AT LOWEST PRICE

ಕೋಲಾರ ೧೮ ಏಪ್ರಿಲ್ : ಡಿಎಸ್‌ಎಸ್ ಹೆಸರಿನಲ್ಲಿ ವಿ.ಸಂತೋಷ್ ನಡೆಸಿರುವ ಸಭೆಗೂ ಡಿಎಸ್‌ಎಸ್‌ಗೂ ಯಾವುದೇ ಸಂಬ0ಧವಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿ.ಸಂತೋಷ್ ಎಂಬುವವರು ಇತ್ತೀಚಿಗೆ ದಸಂಸ ಹೆಸರಿನಲ್ಲಿ ಸಭೆ ನಡೆಸಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯಕುಮರ್ ಪರವಾಗಿ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದ್ದು. ಈ ತೀರ್ಮಾನಕ್ಕೂ ದಲಿತ ಸಂಘರ್ಷ ಸಮಿತಿಗೂ ಯಾವುದೇ ಸಂಬ0ಧವಿಲ್ಲವೆ0ದು ಹಾರೋಹಳ್ಳಿ ರವಿ ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.

ಈ ಹಿಂದೆ ಮಾಲೂರು ತಾಲ್ಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿದ್ದ ವಿ.ಸಂತೋಷ್ ತಮ್ಮ ವಯುಕ್ತಿಕ ಕಾರಣಗಳಿಗಾಗಿ ಜನವರಿ ೧, ೨೦೨೩ರಂದು ದ.ಸಂ.ಸ ತಾಲೂಕು ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುತ್ತಾರೆ. (ಅರ್ಜಿ ಲಗತ್ತಿಸಿದೆ) ರಾಜೀನಾಮೆಯನ್ನು ದ.ಸಂ.ಸ ಜಿಲ್ಲಾ ಸಮಿತಿ ಅಂಗೀಕರಿಸಲಾಗಿತ್ತು.

ಅಂದು ರಾಜೀನಾಮೆ ಅಂಗೀಕರಿಸಿದ ನಂತರ ಇತರೆ ಪದಾಧಿಕಾರಿಗಳಿಗೆ ಮಾಲೂರಲ್ಲಿ ದ.ಸಂ.ಸ ಮುಂದಿನ ಸರ್ವಸದಸ್ಯರ ಸಭೆ ಕರೆಯುವವರೆಗೆ ತಾಲೂಕಲ್ಲಿ ಡಿ.ಎಸ್.ಎಸ್.ಹೆಸರಲ್ಲಿ ಯಾವುದೇ ಸಬೆಯನ್ನು ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಸಂತೋಷ್ ಆಗಲಿ ಬೇರೆ ಯಾರೇ ಆಗಲಿ ದ.ಸಂ.ಸ ಸಬೆಯಾಗಲಿ ಅಥವಾ ಚುಣಾವಣಾ ಸಂಬ0ಧಿ ಸಭೆಯಾಗಲಿ ಕರೆಯಲು ಜಿಲ್ಲಾ ಸಮಿತಿಯಿಂದ ಅನುಮತಿ ನೀಡಿರುವುದಿಲ್ಲ ಎಂದು ತಿಳಿಸಲಾಗಿತ್ತು.

ಇಷ್ಟಾದರೂ ಏಪ್ರಿಲ್ ೧೮ ರಂದು ದಸಂಸ ಹೆಸರಿನಲ್ಲಿ ಸಂತೋಷ್ ಕರೆದಿದ್ದ ಸಭೆ ಅಕ್ರಮವಾಗಿದ್ದು, ಆ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೂ ದಲಿತ ಸಂಘರ್ಷ ಸಮಿತಿಗೂ ಯಾವುದೆ ಸಂಬ0ದವಿಲ್ಲ ಎಂದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ಸ್ಪಷ್ಟಪಡಿಸಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!