• Fri. Apr 26th, 2024

PLACE YOUR AD HERE AT LOWEST PRICE

ಕೋಲಾರ ಜೂ.0೬ : ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆ ಸಾಹಿತ್ಯ ಪೋಷಕರಾದವರು ಎಂದು ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಕೆ.ಆರ್ ತ್ಯಾಗರಾಜ್ ಅಭಿಪ್ರಾಯ ಪಟ್ಟರು.

ಅವರು ನಗರದ ಜಯ ಕರ್ನಾಟಕ ಜಿಲ್ಲಾ ಕಛೇರಿಯಲ್ಲಿ ಜಯ ಕರ್ನಾಟಕ ಹಾಗೂ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಾಸ್ತಿ ಅವರ ಜನ್ಮ ದಿನಾಚರಣೆಯಲ್ಲಿ ಮಾತಾನಾಡುತ್ತಿದ್ದರು.

ಜೆ.ಪಿ ರಾಜರತ್ನಂ ಬೇಂದ್ರೆಯಂತವರಿಗೆ ಆದರ್ಶರಾದವರು ಮಾಸ್ತಿ. ಅನೇಕ ಕಾದಂಬರಿಗಳನ್ನು ಕಥೆಗಳನ್ನು ಬರೆದು ಇಡೀ ನಾಡಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ ಮಹಾನ್ ಕವಿ. ಈ ದಿನ ಎಲ್ಲಾ ಸಾಹಿತಿಗಳು ವಿದ್ಯಾರ್ಥಿಗಳು ಸ್ಮರಿಸುವುದು ಮತ್ತು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವುದು ಅತ್ಯವಶ್ಯಕ ವಾಗಿದೆ ಎಂದರು.

ಮಾಸ್ತಿಯವರು ಸುಮಾರು ಏಳು ದಶಕಗಳ ಅವಧಿಯಲ್ಲಿ ಒಂದು ನೂರು ಕಥೆಗಳನ್ನು ಬರೆದವರು. ನವೋದಯದ ಆರಂಭದಲ್ಲಿ ಕಥೆಗಳನ್ನೇ ತಮ್ಮ ಸೃಜನಶೀಲತೆಯನ್ನು ಪ್ರಥಮ ಮಾಧ್ಯಮವನ್ನಾಗಿ ಮಾಡಿದವರಲ್ಲಿ ಮಾಸ್ತಿಯವರೇ ಅಗ್ರಗಣ್ಯರು. ಇಂದು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ನಿವೃತ್ತ ಕ.ರಾ.ರ.ಸ ಅಧಿಕಾರಿ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ ಮಾಸ್ತಿಯವರು ಕೋಲಾರ ಜಿಲ್ಲೆಯ ಮತ್ತು ಕರ್ನಾಟಕ ರಾಜ್ಯ ಜನತೆಯ ಆಸ್ತಿಯಾಗಿದ್ದವರು ಇವರು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ನಾಟಕ ಕೃತಿಗಳನ್ನು ಮತ್ತು ಚಿಕ್ಕ ಕಥೆಗಳನ್ನು ಕನ್ನಡ ಜನತೆಗೆ ನೀಡಿದವರು ಹಾಗೂ ಒಳ್ಳೆಯ ಆಡಳಿತಗಾರರಾಗಿ ಸರ್ಕಾರಿ ಸೇವೆ ಸಲ್ಲಿಸಿದವರು ಕರ್ನಾಟಕ ಹೆಸರು ನಾಮಕರಣಕ್ಕೆ ಅಂದಿನ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ ಅರಸು ರವರಲ್ಲಿ ಆಗ್ರಹಿಸಿ ನಾಮಕರಣ ಮಾಡುವಂತೆ ಮಾಡಿದವರಲ್ಲಿ ಪ್ರಮುಖರು ಇವರ ಜನ್ಮದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸುದೈವ ಎಂದರು.

ಚು.ಸಾ.ಪ.ಅಧ್ಯಕ್ಷ ಪಿ. ನಾರಾಯಣಪ್ಪ ಮಾತಾನಾಡಿ ಮಾಸ್ತಿ ಯವರು ಬರೆದ ಕಥೆಗಳಲ್ಲಿ ನೂರು ವರ್ಷಗಳನ್ನು ಕಳೆದ ಕೆಲವೊಂದು ಕತೆಗಳನ್ನು ಈ ದಿನದ ಸಂದರ್ಭದಲ್ಲಿ ಮೆಲುಕು ಹಾಕಬೇಕಾಗುತ್ತದೆ. ಮಾಸ್ತಿಯವರ ಕಥೆಗಳಲ್ಲಿ ಜೀವನ ಪ್ರೀತಿ ಮತ್ತು ಕಾರುಣ್ಯದ ಧ್ವನಿ ಕುಡಿಯೊಡೆಯುತ್ತದೆ. ಹಾಗಾಗಿ ಇಂತಹ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ನಮ್ಮ ಸಾಹಿತಿಗಳನ್ನು ಅವರ ಸಾಹಿತ್ಯವನ್ನು ಪುನರಾವಲೋಕನ ಮಾಡುವುದು ಇಂದು ಅನಿವಾರ್ಯವಾಗಿದೆ ಎಂದರು.

ಎ.ಇ.ಎಸ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಹಾಗೂ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ, ಪಲ್ಗುಣ ಸ್ವಾಗತ ಕೋರಿ ನಿರೂಪಿಸಿದರು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆ.ಕ್ರು. ಸೋಮಶೇಖರ್.ನಿವ್ರತ್ತ ಎ.ಎಸ್.ಐ. ರವಿಕುಮಾರ್..ಜಯ ಕರ್ನಾಟಕ ಸಂಘಟನೆಯ ಮುಖಂಡರುಗಳಾದ ರಾಮಮೂರ್ತಿ ನಾಯ್ಡು. ಪ್ರಭಾತ್ ಟಾಕೀಸ್ ಟಿ.ಯು.ಶ್ರೀನಿವಾಸ್. ಸಾಗರ್. ಹೂವಳ್ಳಿ ನಂದೀಶ್. ಕಲ್ಲೇಶಿ. ಶೆಟ್ಟಿ ಕೊತ್ತನೂರು ನಾರಾಯಣಸ್ವಾಮಿ. ಇನ್ನಿತರರು ಉಪಸ್ಥಿತರಿದ್ದರು

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!