• Wed. May 1st, 2024

ಡಾ.ಬಿ.ಆರ್. ಅಂಬೇಡ್ಕರ್ ಕೋಲಾರ ಜಿಲ್ಲೆ ಎಂದು ನಾಮಕರಣ ಮಾಡಲು ಮುಖ್ಯಮಂತ್ರಿಗಳಲ್ಲಿ ಜೈಭೀಮ್ ಭಾರತ ಮನವಿ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಗೆ “ಡಾ.ಬಿ.ಆರ್.ಅಂಬೇಡ್ಕರ್ ಕೋಲಾರ ಜಿಲ್ಲೆ” ಎಂದು ನಾಮಕರಗೊಳಿಸಬೇಕೆಂದು ಜೈ ಭೀಮ್ ಭಾರತ ಸಂಘಟನೆಯು ಡಿಸಿ ವೆಂಕಟ್‌ರಾಜಾರಿಗೆ ಮನವಿ ಸಲ್ಲಿಸಿದೆ.

ಜೈ ಭೀಮ್ ಭಾರತ ಸಂಘಟನೆಯು ಸಂಸ್ಥಾಪಕ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಕಲ್ವಮಂಜಲಿ ಸಿ. ಶಿವಣ್ಣ, ಗೌರವಾಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಕಾರ್ಯಾಧ್ಯಕ್ಷ ರವೀಂದ್ರನಾಥ್, ಸಂಘಟನಾ ಕಾರ್ಯದರ್ಶಿ ಐತರಾಸನಹಳ್ಳಿ ವಿ.ಸಂಜೀವಯ್ಯ, ಮುಖಂಡರಾದ ದಿನ್ನಹಳ್ಳಿ ತಿಮ್ಮರಾಯಪ್ಪರವರು ಜಿಲ್ಲಾಽಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.
ಭಾರತ ಸಂವಿಧಾನದ ಸಂಭ್ರಮಾಚರಣೆಯು ಅಮೃತ ಮಹೋತ್ಸವದತ್ತ ಸಾಗುತ್ತಿರುವ ಸಂದರ್ಭಧಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಅಹಿಂದ ಸಮುದಾಯಗಳ ಜನಸಂಖ್ಯೆಯನ್ನು ಹೊಂದಿ ಹೋರಾಟಗಳ ತವರೂರೆಂದೇ ಖ್ಯಾತಿಯಾಗಿರುವ ಕೋಲಾರ ಜಿಲ್ಲೆಗೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹೆಸರಿಡಬೇಕೆಂದು ಮನವಿ ಮಾಡಿದ್ದಾರೆ.

ನರಸಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೭೫ ಪಕ್ಕದ ಕೆರೆ ಮತ್ತು ಬೆಟ್ಟಗಳ ಸಮೀಪ ಸುಂದರವಾದ ರಮಣೀಯ ಪ್ರದೇಶದಲ್ಲಿ ೧೫೦ ಅಡಿಗಳ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಿ ಬಹುಜನರ ಸ್ಪೂರ್ತಿಧಾಮವಾಗಿ ನಿರ್ಮಿಸಿಕೊಡಬೇಕೆಂದು

ಕೋಲಾರ ಜಿಲ್ಲೆ ಹೋರಾಟಗಳ ತವರೂರೆಂದು ಖ್ಯಾತಿಯಾಗಿದ್ದು, ರಾಜ್ಯಕ್ಕೆ ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತನ್ನದೇ ಆದ ವಿಶಿಷ್ಠವಾದ ಕೊಡುಗೆಯನ್ನು ನೀಡಿರುತ್ತದೆ. ೧೯೫೨ ರಿಂದ ೨೦೨೩ರವರೆಗೂ ಕೋಲಾರ ಜಿಲ್ಲೆ ಲೋಕಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಜಿಲ್ಲೆಯ ವ್ಯಾಪ್ತಿಗೆ ಸುಮಾರು ೬ ತಾಲೂಕುಗಳು ಸೇರಿದ್ದು, ಇವುಗಳಲ್ಲಿ ಮುಳಬಾಗಿಲು, ಕೆಜಿಎಫ್, ಬಂಗಾರಪೇಟೆ ಮೂರು ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿದ್ದು, ಉಳಿದ ಕೋಲಾರ, ಮಾಲೂರು, ಶ್ರೀನಿವಾಸಪುರ ಸಾಮಾನ್ಯ ವಿಧಾನಸಭಾ ಕ್ಷೇತ್ರಗಳಾಗಿವೆ.

ಭಾರತ ದೇಶದಲ್ಲಿಯೇ ಅತಿಹೆಚ್ಚಿನ ದಲಿತ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಎಂಬುದಾಗಿ ಪರಿಗಣಿಸಲಾಗಿದೆ. ಜಿಲ್ಲೆಯ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಸಮಾಜದ ಎಲ್ಲಾ ಸಮುದಾಯಗಳೊಂದಿಗೆ ಸೋದರತ್ವದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಇಲ್ಲಿನ ದಲಿತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಕಾರ್ಮಿಕ ಹಾಗೂ ಮಹಿಳಾ ಪರ ಸಂಘಟನೆಗಳು ಡಾ.ಬಿ.ಆರ್. ಅಂಬೇಡ್ಕರ್‌ರವರ ವಿಚಾರದಾರೆಗಳೊಂದಿಗೆ ಪ್ರಗತಿಪರ ಹೋರಾಟಗಳನ್ನು ಹಮ್ಮಿಕೊಂಡು ಜಿಲ್ಲೆಯ ಸಾಮಾನ್ಯ ಪ್ರಜೆಗಳಿಗೆ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡುವುದಲ್ಲಿ ಯಶಸ್ಸುಗಳನ್ನು ಕಂಡುಕೊಂಡಿರುತ್ತದೆ. ಇಲ್ಲಿನ ಅಹಿಂದ ವರ್ಗಗಳು ಜಿಲ್ಲೆಯ ಸರ್ವ ಜನಾಂಗಗಳೊಂದಿಗೆ ಪ್ರೀತಿ ವಿಶ್ವಾಸಗಳಿಂದ ಸಹ ಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದಾರೆ.

ಇತಿಹಾಸವನ್ನು ಬಲ್ಲವರು ಇತಿಹಾಸ ಸೃಷ್ಠಿಸಬಲ್ಲರು ಎಂಬುದಕ್ಕೆ ಸಾಕ್ಷಿಯಾಗಿ ಈ ಹಿಂದೆ ತಮ್ಮ ಆಡಳಿತ ಅವಽಯಲ್ಲಿ ೨೦೧೭ ಜುಲೈ ೨೧ ರಿಂದ ೨೩ರವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಿದ ಅಂತರಾಷ್ಟ್ರೀಯ ಅಂಬೇಡ್ಕರ್ ಸಮಾವೇಶವು ೨೧ನೇ ಶತಮಾನದಲ್ಲಿ ನಡೆದಿರುವ ಜಾಗತಿಕ ಮಟ್ಟದ ಸಮಾವೇಶಗಳಲ್ಲಿ ಒಂದಾಗಿ ಮಹತ್ವದ ಪಾತ್ರವನ್ನು ಹೊಂದಿರುತ್ತದೆ. ನೂರಾರು ಬುದ್ಧಿ ಜೀವಿಗಳನ್ನು ಆಹ್ವಾನಿಸಿ, ಸಾವಿರಾರು ಪ್ರತಿನಿಽಗಳ ಸಮ್ಮುಖದಲ್ಲಿ ಅಂಬೇಡ್ಕರ್ ರವರ ಆಶಯಗಳನ್ನು, ವಿಚಾರಧಾರೆ, ಚಿಂತನೆಗಳನ್ನು ದೇಶಕ್ಕೆ ಮತ್ತು ಜಗತ್ತಿಗೆ ಪರಿಚಯಿಸಿದ ಕೀರ್ತಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರನ್ನು ಅಭಿನಂದಿಸಿದ್ದಾರೆ.

ದೇಶದ ಶೋಷಿತರ ಅಭಿವೃದ್ಧಿಗಾಗಿ ಇಡೀ ತನ್ನ ಜೀವನವನ್ನು ಮೀಸಲಿಟ್ಟು, ಎಲ್ಲಾ ತರದ ನೋವುಗಳನ್ನು ಅನುಭವಿಸಿ ಪ್ರಪಂಚವೇ ಮೆಚ್ವುವಂತಹ ಶ್ರೇಷ್ಠ ಸಂವಿಧಾನವನ್ನು ನೀಡಿ ದೀನ ದಲಿತರಿಗೆ ಸ್ವಾಭಿಮಾನದ ಬೆಳಕನ್ನು ನೀಡಿದವರು. ಈ ದೇಶ ಕಂಡ ಮಹಾನ್ ಮೇದಾವಿ, ಮಹಾನ್ ಜ್ಞಾನಿ, ಮಹಾ ತ್ಯಾಗಿ, ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರು.

ಈ ನಿಟ್ಟಿನಲ್ಲಿ ಸಂವಿಧಾನ ಜಾರಿಗೆ ಬಂದು ಅಮೃತ ಮಹೋತ್ಸವದತ್ತ ಸಾಗುತ್ತಿರುವ ಈ ಸುಸಂದರ್ಭದಲ್ಲಿ ಕೋಲಾರ ಜಿಲ್ಲೆಗೆ ಡಾ.ಬಿ.ಆರ್.ಅಂಬೇಢ್ಕರ್ ಕೋಲಾರ ಜಿಲ್ಲೆಯೆಂದು ನಾಮಕರಣಗೊಳಿಸಿ ನರಸಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ-೭೫ರ ಪಕ್ಕದಲ್ಲಿರುವ ಕೆರೆ ಮತ್ತು ಬೆಟ್ಟಗಳ ರಮಣೀಯ ಪ್ರದೇಶದಲ್ಲಿ ೧೫೦ ಅಡಿಗಳ ಎತ್ತರದ ಪುತ್ಥಳಿಯನ್ನು ಸ್ಥಾಪಿಸಿ “ಬಹುಜನರ ಸ್ಪೂರ್ತಿಧಾಮ”ವನ್ನಾಗಿ ನಿರ್ಮಿಸಿಕೊಡಬೇಕೆಂದು ಜೈ ಭೀಮ್ ಭಾರತ್ ಸಂಘಟನೆಯು ಮುಖ್ಯಮಂತ್ರಿಗಳಿಗೆ ನೀಡಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!