• Wed. May 1st, 2024

ನಕಲಿ ಬೋನಫೈಡ್ ಹಗರಣ ಸಿಬಿಐ ತನಿಖೆಗೊಪ್ಪಿಸಲು ರೈತ ಸಂಘ ಆಗ್ರಹ

PLACE YOUR AD HERE AT LOWEST PRICE

ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ಆರ್.ಟಿ.ಒ ಕಚೇರಿಯಲ್ಲಿನ ಭ್ರಷ್ಟ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಟ್ರಾಕ್ಟರ್‌ಗಳ ಸಮೇತ ಕೋಲಾರ ಆರ್.ಟಿ.ಒ ಕಚೇರಿಯ ಮುಂದೆ ಹೋರಾಟ ಮಾಡಿ ಆರ್.ಟಿ.ಒ ಮುಖಾಂತರ ಕಂದಾಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಸರ್ಕಾರಿ ಕೆರೆ ಜಮೀನಿಗೆ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಯಾರದೋ ಜಮೀನಿಗೆ ಇನ್ಯಾರೋ ಮಾಲೀಕನ ಟ್ರಾಕ್ಟರ್‌ಗೆ ನಕಲಿ ಬೋನಫೈಡ್ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಲಾಗಿದೆ.

ಅಕ್ರಮ ಆರ್‌ಡಿ ನಂಬರ್‌ಗಳನ್ನು ಸೃಷ್ಠಿ ಮಾಡುವ ಮುಖಾಂತರ ಸಾವಿರಾರು ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವ ಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುವಂತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕಂದಾಯ ಇಲಾಖೆ ಅಕಾರಿಗಳು ಸರ್ಕಾರಿ ಕೆರೆ ಗೋಮಾಳ, ರಾಜಕಾಲುವೆಗೆ ನಕಲಿ ದಾಖಲಿಗೆ ಸೃಷ್ಠಿ ಮಾಡಿದರೆ ಆರ್.ಟಿ.ಒ ಕಚೇರಿಯಲ್ಲಿನ ಅಽಕಾರಿಗಳು ದಲ್ಲಾಳಿಗಳ ಮುಖಾಂತರ ಹೆಜ್ಜೆ ಹೆಜ್ಜೆಗೂ ಹಣವನ್ನು ಸುಲಿಗೆ ಮಾಡಿ ಜನ ಸಾಮಾನ್ಯರ ರಕ್ತ ಹೀರುವ ಇಲಾಖೆಗಳಾಗಿ ಮಾರ್ಪಟ್ಟಿದ್ದರೂ ಹಿರಿಯ ಅಽಕಾರಿಗಳು ಕಿರಿಯ ಅಧಿಕಾರಿಗಳ ನೀಡುವ ಲಂಚದ ಹಣಕ್ಕೆ ಬಾಯಿಯಿದ್ದು ಮಾತನಾಡದ ಮೂಖರಾಗಿದ್ದಾರೆಂದು ಆರೋಪ ಮಾಡಿದರು.

ಜಿಲ್ಲಾದ್ಯಂತ ಎಲ್ಲಾ ನಾಡಕಚೇರಿಗಳಲ್ಲಿ ಉಪ ತಹಸೀಲ್ದಾರ್‌ಗಳಿಗೆ ಆರ್‌ಟಿಒ ಕಚೇರಿಗಳಲ್ಲಿನ ದಲ್ಲಾಳಿಗಳು ಟ್ರಾಕ್ಟರ್ ಶೋರೂಂ ಮಾಲೀಕರ ಜೊತೆ ಶಾಮೀಲಾಗಿ ವಾಣಿಜ್ಯ ಹಾಗೂ ಬೇರೆ ಬೇರೆ ಉದ್ದೇಶಕ್ಕಾಗಿ ಟ್ರಾಕ್ಟರ್ ಖರೀದಿ ಮಾಡುವ ಶ್ರೀಮಂತರಿಗೆ ಕೃಷಿ ಮಾಡುವ ರೈತರ ಜಮೀನಿನ ಪಹಣಿ ಮುಂತಾದ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸಂಬಂಧಪಟ್ಟ ಅಽಕಾರಿಗಳನ್ನು ಕೈಕಟ್ಟಿಕೊಂಡು ಪ್ರತಿ ಬೋನಫೈಡ್ ದಾಖಲೆಗೆ ೧೦ ರಿಂದ ೫೦ ಸಾವಿರ ಲಂಚ ನೀಡುವ ಮುಖಾಂತರ ಮೂಲ ಮಾಲೀಕರ ಹೆಸರಿನಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿಗೆ ಬೋನಫೈಡ್ ಪತ್ರ ಸೃಷ್ಠಿ ಮಾಡಿ ನೋಂದಣಿ ಮಾಡಿರುವ ದಂಧೆಗೆ ಮುಕ್ತಿ ಸಿಗಬೇಕಾದರೆ ಹಗರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕಾಗಿದೆ ಎಂದು ಒತ್ತಾಯ ಮಾಡಿದರು.

ರೈತ ಸಂಘ ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಹೋಬಳಿ ನಾಡಕಚೇರಿಯ ಉಪ ತಹಸೀಲ್ದಾರ್ ಚಂದ್ರಶೇಖರ್ ಅವಽಯಲ್ಲಿ ನಡೆದಿರುವ ಬೋನಪೈಡ್ ಆಕ್ರಮ ಮರೆಮಾಚಲು ಜಿಲ್ಲಾದಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡಿರುವ ಜೊತೆಗೆ ಎಲ್ಲಾ ನಾಡಕಚೇರಿಗಳ ಉಪ ತಹಶೀಲ್ದಾರ್‌ಗಳ ಕೈಯಲ್ಲಿ ಥಂಬ್ ಕೊಡುವ ಪೆನ್‌ಡ್ರೈವ್ ಇರುತ್ತದೆ. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ಉಪತಹಸೀಲ್ದಾರ್ ನೀಡುತ್ತಾರೆಯೇ ಇದು ಸಾರ್ವಜನಿಕ ಬುದ್ಧಿವಂತರ ಪ್ರಶ್ನೆಯಾಗಿದೆ ಎಂದರು.

ಈ ದಂಧೆ ಪರಿಹಾರಕ್ಕಾಗಿ ರೈತರು ನೀಡಿರುವ ದಾಖಲೆಗಳ ದುರುಪಯೋಗ ಹಾಗೂ ಕೆರೆ, ಗೋಮಾಳ, ಗುಂಡುತೋಪು ಸರ್ಕಾರಿ ಆಸ್ತಿಗಳಿಗೆ ನಕಲಿ ರೈತರ ಹೆಸರನ್ನು ಸೃಷ್ಠಿ ಮಾಡಿ ಈ ಧಂಧೆ ನಡೆಯುತ್ತಿದೆ. ಕಂದಾಯ ಹಾಗೂ ಆರ್‌ಟಿಒ ಅಕಾರಿಗಳ ಕುಮ್ಮಕ್ಕಿಲ್ಲದೆ ಈ ದಂಧೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಆರ್‌ಟಿಒ ಕಚೇರಿ ಅಽಕಾರಿಗಳಿಗೆ ಮತ್ತು ದಲ್ಲಾಳರಿಗೆ ಚಿನ್ನದಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಹೆಜ್ಜೆಹೆಜ್ಜೆಗೂ ಜನಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆಯಾಗಿದೆ. ಒಂದು ಕಡೆ ನಕಲಿ ಬೋನಫೈಡ್ ದಂಧೆಯಾದರೆ ಮತ್ತೊಂದೆಡೆ ಐಷಾರಾಮಿ ಹೊರರಾಜ್ಯದ ಕಾರುಗಳಿಗೆ ಮುಖಬೆಲೆಯನ್ನು ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ನೋಂದಣಿ ಮಾಡುವ ದೊಡ್ಡ ನಕಲಿ ಜಾಲವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಿದರು.

ಅಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ ನಾಡಕಚೇರಿಗಳಲ್ಲಿ ಸೃಷ್ಠಿಯಾಗುವ ಬೋನಫೈಡ್ ಸಾವಿರ ಆದರೆ ಅದೇ ಆರ್‌ಡಿ ನಂಬರುಗಳನ್ನು ನಕಲು ಮಾಡಿ ೬ ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‌ಗಳನ್ನು ಅಽಕಾರಿಗಳು ತಿರುಚಿ ನೋಂದಣಿ ಮಾಡಿರುವ ಜೊತೆಗೆ ೫೦೦ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿಗೂ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಹೊರಗುತ್ತಿಗೆದಾರರ ಮೇಲೆ ಗೂಬೆ ಕೂರಿಸುವ ಅಽಕಾರಿಗಳ ಜಾಣ ನಡೆಗೆ ಸಾರ್ವಜನಿಕರು ದಂಗಾಗಿದ್ದಾರೆ.
ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೋನಫೈಡ್ ಮುಖಾಂತರ ಟ್ರಾಕ್ಟರ್, ಟ್ರಾಲಿಯನ್ನು ನೋಂದಣಿ ಮಾಡಿರುವ ದಂಧೆಯನ್ನು ಸಿಬಿಐಗೆ ಒಪ್ಪಿಸಿ ಭಾಗಿಯಾಗಿರುವ ಕಂದಾಯ, ಆರ್‌ಟಿಒ ಅಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅಮಾಯಕರನ್ನು ಉಳಿಸಿ ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಆರ್.ಟಿ.ಒ ಕಚೇರಿಯ ಆಽಕ್ಷ ಮೇಲಾಗಣಿ, ಮೇಲಾಽಕಾರಿಗಳ ಗಮನಕ್ಕೆ ತಂದು ನಮ್ಮ ಕಚೇರಿಯಲ್ಲಿ ಆಕ್ರಮ ದಂಧೆ ನಡೆದಿರುವ ಜೊತೆಗೆ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ಭರವಸೆಯನ್ನು ನೀಡಿದರು.

ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ, ನರಸಿಂಹಯ್ಯ, ಕೋಟೆ ಶ್ರೀನಿವಾಸ್, ಮಂಜುಳಾ, ಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‌ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಸುನೀಲ್‌ಕುಮಾರ್, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ವಿಶ್ವ, ವಿಜಯ್‌ಪಾಲ್ ಯಲ್ಲಪ್ಪ, ಹರೀಶ್, ಮಾಸ್ತಿ ವೆಂಕಟೇಶ್, ರಾಮಸಾಗರ ವೇಣು, ಶೈಲಜ, ರಾಧ, ರತ್ನಮ್ಮ, ನಾಗಮಣಿ, ಚೌಡಮ್ಮ, ಮುಂತಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!