• Wed. May 1st, 2024

PLACE YOUR AD HERE AT LOWEST PRICE

ಕೋಲಾರದ ಹಿಂದಿನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ಕಾರ್ಮಿಕರ ಪ್ರತಿಭಟನೆಗೆ ನಿರ್ಬಂಧ ವಿಽಸಿದ್ದರು. ಹೀಗಾಗಿ, ಕಾರ್ಮಿಕರ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಧಿಕಾರಿಯ ಕಾನೂನು ಬಾಹಿರ ಆದೇಶವನ್ನು ಹೈಕೋರ್ಟ್ ಈಗ ಆದೇಶ ಹೊರಡಿಸಿ ತೆರವುಗೊಳಿಸಿದೆ ಎಂದು ಇಂಡಸ್ಟ್ರಿಯಲ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಬಿ.ವಿ.ಸಂಪಂಗಿ ತಿಳಿಸಿದರು.

ಕೋಲಾರ  ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೦ರಲ್ಲಿ ಜಿಲ್ಲಾಽಕಾರಿಯಾಗಿದ್ದ ಸತ್ಯಭಾಮ ಧರಣಿ ನಡೆಸಬೇಕೆಂದರೆ ಡಿ.ಸಿ ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ ನಡೆಸಬಾರದೆಂದು ಜಿಲ್ಲಾ ಪೊಲೀಸ್ ಗೆ ಸೂಚನೆ ನೀಡಿದ್ದರು. ಅದಕ್ಕೆ ಕಾರಣ ವಿಸ್ಟ್ರಾನ್ ಘಟನೆ ಕಾರಣ. ಅದು ಅಚಾನಕ್ ಆಗಿ ನಡೆದ ಘಟನೆ. ಇದನ್ನೇ ನೆಪ ಮಾಡಿಕೊಂಡು ಕಾರ್ಮಿಕರ ಹಕ್ಕು ಹತ್ತಿಕ್ಕಿದರು ಎಂದು ಆರೋಪಿಸಿದರು.

ಶಾಂತಿಭಂಗ ಆಗುವ ಸ್ಥಳಕ್ಕೆ ಈ ರೀತಿ ಆದೇಶ ಹೊರಡಸಬೇಕು. ಆದರೆ, ಇಡೀ ಪ್ರದೇಶದಲ್ಲಿ ಪ್ರತಿಭಟನೆ ನಡೆಸಬಾರದೆಂದು ಹೇಳಿದರೆ ಹೇಗೆ? ನಾವು ಕೂಡ ಅಂದು ಪ್ರತಿಭಟನೆಗೆ ಅವಕಾಶಕೋರಿ ಪೊಲೀಸ್ ಠಾಣೆ ಅನುಮತಿ ಕೋರಿದ್ದೆವು ಎಂದರು.

ಜಿಲ್ಲಾಧಿಕಾರಿಯು ಬಂಡವಾಳಶಾಹಿಗಳ ಹಿತ ಕಾಯಲು ಆದೇಶ ಹೊರಡಿಸಿದ್ದರು. ಕಾರ್ಮಿಕರ ಹಕ್ಕು ದಮನ ಮಾಡಲು ಹೊರಟಿದ್ದರು. ಆದರೆ, ನ್ಯಾಯಾಲಯ ನಮ್ಮ ಪರ ತೀರ್ಪು ನೀಡಿದೆ. ಬೇಡಿಕೆ ಈಡೇರಿಸಿಕೊಳ್ಳಲು ಕಾನೂನು ರೀತಿಯಲ್ಲಿ ಮುಷ್ಕರ ನಡೆಸಲು ಅವಕಾಶ ಸಿಕ್ಕಿದೆ. ಹಿಂದಿನ ಜಿಲ್ಲಾಽಕಾರಿ ನಿರ್ಧಾರವನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಇದಲ್ಲದೆ ಜಿಲ್ಲೆಯ ಕಾರ್ಮಿಕರು ಹಾಗೂ ಉದ್ಯೋಗಾಕಾಂಕ್ಷಿಗಳ ಹಿತರಕ್ಷಣೆ ಸಂಬಂಧ ಕೆಲವೊಂದು ಬೇಡಿಕೆಗಳಿದ್ದು, ಅದನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯೆ ಮಮತ, ರಾಜ್ಯ ಪ್ರದಾನ ಕಾರ್ಯದರ್ಶಿ ಜೆ.ಹನುಮಂತರಾವ್, ರಾಜ್ಯ ಉಪಾಧ್ಯಕ್ಷ ಹರೀಶ್, ಮುಖಂಡರಾದ ಎಂ.ರಘುನಾಥ್, ಮಲ್ಲಿಕಾರ್ಜುನ್, ಎಸ್.ವಿಜಯಕುಮಾರ್, ನಾರಾಯಣಸ್ವಾಮಿ, ಡಿ.ಮಂಜುನಾಥ್, ಶ್ರೀಧರ್ ರಾವ್, ಎನ್.ಶಿವರಾಜ್ ಕುಮಾರ್, ಆಂಜಿ, ವೀರೇಂದ್ರ, ಶ್ರವಂತ್ ಹಾಜರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!