• Thu. May 16th, 2024

ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಂಭ್ರಮದ ಚಾಲನೆ ಜಾತಿ,ಧರ್ಮ ಬೇಧವಿಲ್ಲದೇ ಐದು ಗ್ಯಾರೆಂಟಿ ಈಡೇರಿಸುತ್ತೇವೆ-ಬೈರತಿ ಸುರೇಶ್

PLACE YOUR AD HERE AT LOWEST PRICE

ಜಾತಿ,ಧರ್ಮ,ಶ್ರೀಮಂತ,ಬಡವ ಯಾವುದೇ ಬೇಧವಿಲ್ಲದೇ ಎಲ್ಲಾ ಮಹಿಳೆಯರಿಗೂ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಮ್ಮನ್ನು ನಂಬಿ ಮತ ನೀಡಿದ ಮತದಾರರಿಗೆ ದ್ರೋಹ ಬಗೆಯದೇ ಎಲ್ಲಾ ಐದು ಗ್ಯಾರೆಂಟಿಗಳನ್ನು ಕಾರ್ಯಗತಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಿಸಿದರು.

ಕೋಲಾರ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಭಾನುವಾರ ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಉಚಿತ ಮಹಿಳೆಯರಿಗೆ ಉಚಿತಬಸ್ ಪ್ರಯಾಣ ಒದಗಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮತೀಯವಾಗಿ ಧರ್ಮಧರ್ಮಗಳ ನಡುವೆ ಇಲ್ಲಸಲ್ಲದನ್ನು ತಂದಿಡುತ್ತಿದ್ದ ಕೋಮುವಾದಿಗಳ ಆಡಳಿತವನ್ನು ಕೊನೆಗಾಣಿಸಿ ನಮಗೆ ಅಕಾರ ನೀಡಿದ್ದು, ಕಿಂಚಿತ್ತೂ, ದ್ರೋಹಬಗೆಯದ ರೀತಿಯಲ್ಲಿ ೫ ಯೋಜನೆಗಳನ್ನು ಜಾರಿಗೊಳಿಸಿ ನಿಮ್ಮ ಸೇವೆ ಮಾಡಿಸುವುದಗಿ ಭರವಸೆ ನೀಡಿದರು.

ಚುನಾವಣೆಗೆ ಮುನ್ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮನೆ ಯಜಮಾನಿಗೆ ೨ ಸಾವಿರರೂ, ೧೦ ಕೆಜಿ ಪಡಿತರ ಅಕ್ಕಿ, ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, ನಿರುದ್ಯೋಗ ಭತ್ಯೆ ಹಾಗೂ ೨೦೦ ಯೂನಿಟ್ ಎಂಬ ೫ ಪ್ರಮುಖ ಆಶ್ವಾಸನೆ ನೀಡಿದ್ದರು.

ಈ ದಿನ ಶಕ್ತಿ ಯೋಜನೆಗೆ ಚಾಲನೆ ನೀಡಿದ್ದು,. ಯಾವುದೇ ಜಾತಿ, ಧರ್ಮ, ಶ್ರೀಮಂತ, ಬಡವ ಇಲ್ಲ ಉಚಿತವಾಗಿ ಎಷ್ಟು ಬಾರಿ ಬೇಕಾದರೂ ಓಡಾಡಬಹುದು. ಎಲ್ಲರ ಸಹಕಾರ ಆಶೀರ್ವಾದದಿಂದ ಸರಕಾರ ಅಕಾರಕ್ಕೆ ಬಂದಿದೆ. ನೀವು ಗೆಲ್ಲಿಸದೇ ಇದ್ದರೆ ಆಶ್ವಾಸನೆ ಈಡೇರುತ್ತಿರಲಿಲ್ಲ. ಆಗಸ್ಟ್ ೧೫ ರಂದು ಮನೆ ಯಜಮಾನಿಗೆ ೨ ಸಾವಿರರೂ ನೀಡಲಾಗುವುದು, ಅನಂತರ ಗೃಹಜ್ಯೋತಿ ಸೇರಿದಂತೆ ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಹೊಸ ಸರಕಾರ ರಚನೆಯಾದ ೧೫-೨೦ ದಿನಗಳಲ್ಲಿಯೇ ಶಕ್ತಿ ಯೋಜನೆ ಜಾರಿಯ ದೊಡ್ಡ ಕಾರ್ಯಕ್ರಮವನ್ನು ನೀಡಲಾಗಿದೆ. ಜಿಲ್ಲೆಗೆ ಸಂಬಂಽಸಿದಂತೆ ಪ್ರತಿದಿನ ೧.೭೨ ಲಕ್ಷ ಮಂದಿ ಸರಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದು, ಆ ಪೈಕಿ ಸುಮಾರು ೭೫ ಸಾವಿರಕ್ಕೂ ಅಽಕ ಮಹಿಳೆಯರ ಉಚಿತ ಪ್ರಯಾಣಕ್ಕೆ ಯೋಜನೆಯಡಿ ಅವಕಾಶ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದಲ್ಲೆಡೆ ಓಡಾಡಬಹುದಾಗಿದೆ, ಹೊರರಾಜ್ಯಗಳಿಗೆ ಹೋಗುವಂತಿಲ್ಲ. ಸ್ಲೀಪರ್ ಕೋಚ್, ಎಸಿ ಬಸ್, ರಾಜಹಂಸ ಹೊರತುಪಡಿಸಿ ಉಳಿದ ಬಸ್‌ಗಳಲ್ಲಿ ಪ್ರಯಾಣಿಸಬಹುದಾಗಿದೆ ಎಂದರು.

ನನ್ನ ಅನಿಸಿಕೆಯ ಪ್ರಕಾರ ಎಲ್ಲರೂ ಟಿಕೆಟ್ ತೆಗೆದುಕೊಂಡು ಹೋಗುವುದು ಸೂಕ್ತ. ಆದರೆ ಹೆಣ್ಣುಮಕ್ಕಳಿಗೆ ಅನುಕೂಲವಾಗುವಂತೆ ಯೋಜನೆ ಜಾರಿ ಮಾಡಿದ್ದು, ಒಪ್ಪಿಕೊಳ್ಳಬಹುದಾಗಿದೆ ಎಂದ ಅವರು, ಪ್ರಯಾಣವು ಸುಖ ಹಾಗೂ ಲಾಭಕರವಾಗಿರಲಿ ಎಂದು ಆಶಿಸಿದರು.

ನಾನು ಸಹ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿದ್ದು, ಹೇಳಿರುವುದನ್ನು ಮಾಡುವ ಭರವಸೆ ನೀಡಿದ್ದಾರೆ. ಕೋಲಾರ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ತಾಲೂಕು, ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮೆಲ್ಲರ ಗುರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್‌ಕುಮಾರ್, ಜಿಲ್ಲಾಕಾರಿ ವೆಂಕಟ್‌ರಾಜಾ, ಜಿಪಂ ಸಿಇಒ ಯುಕೇಶ್‌ಕುಮಾರ್, ನಗರಸಭೆ ಸದಸ್ಯರು, ವಿವಿಧ ಅಕಾರಿಗಳು ಉಪಸ್ಥಿತರಿದ್ದರು.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!