• Mon. Sep 16th, 2024

PLACE YOUR AD HERE AT LOWEST PRICE

ಬಂಗಾರಪೇಟೆ.ಪಟ್ಟಣದಲ್ಲಿ ಒಂದು ವರ್ಷದೊಳಗೆ ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣ ಮಾಡಲಾಗುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭರವಸೆ ನೀಡಿದರು.

ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು ಒಂದು ವರ್ಷದ ಒಳಗೆ ಪಟ್ಟಣದಲ್ಲಿ ಕೆಎಸ್‍ಆರ್‍ಟಿಸಿ ಡಿಪೋ ನಿರ್ಮಾಣ ಮಾಡಲಾಗುವುದಾಗುವುದು ಎಂದು ಭರವಸೆ ನೀಡಿದರು.

ಹತ್ತು ವರ್ಷಗಳಲ್ಲಿ ನಾನು ಕ್ಷೇತ್ರದ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವೆ,ಈಗ ಹಲವು ವರ್ಷಗಳಿಂದ ಪಟ್ಟಣದಲ್ಲೆ ಡಿಪೋ ಆರಂಭಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿ ಒಂದು ವರ್ಷದೊಳಗೆ ಡಿಪೋ ಮಾಡಲಾಗುವುದು ಎಂದರು.

ಜತೆಗೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣವನ್ನು ಉನ್ನತಿಕರಿಸಲಾಗುವುದು ಮತ್ತು ಅನುದಾನದ ಕೊರತೆಯಿಂದ ನೆನೆಗುದಿಗೆ ಬಿದ್ದಿರುವ ಪುರಸಭೆ ಬಸ್ ನಿಲ್ದಾಣವನ್ನೂ ನಾಲ್ಕು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ,ಚುನಾವಣೆ ಪೂರ್ವದಲ್ಲಿ ಜನತೆಗೆ ಐದು ಭರವಸೆಗಳನ್ನು ನೀಡಿದ್ದು ಅದರಂತೆ ಭಾನುವಾರದಿಂದ ಮಹಿಳೆಯರು,ಬಾಲಕೀಯರು ಉಚಿತವಾಗಿ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದೆ.

ರಾಜ್ಯದ ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಹಂಬಲವಿದ್ದರೂ ಪ್ರಯಾಣ ಮಾಡಲು ಬಡವರಿಗೆ ಹಣಕಾಸಿನ ತೊಂದರೆಯಿತ್ತು. ಈಗ ಆ ತೊಂದರೆ ಇಲ್ಲ. ರಾಜ್ಯಾದ್ಯಂತ ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು ಎಂದರು.

ಈ ಯೋಜನೆ ಇದು ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರಲ್ಲದೆ ಬಾಲಕೀಯರೂ ಸಹ ಬಸ್ ಪಾಸ್ ಪಡೆಯಲು ಸಾಲಾಗಿ ನಿಂತು ಪಡೆಯಬೇಕಿತ್ತು. ಈಗ ಅದರ ಅಗತ್ಯವಿಲ್ಲ ಎಂದರು. ಇದು ಹೆಚ್ಚಿನ ಮಹತ್ವವಾದ ಯೋಜನೆಯಾಗಿದ್ದು ಇದನ್ನು ಮಹಿಳೆಯರು ಸದ್ಬಳಕೆ   ಮಾಡಿಕೊಳ್ಳಬೇಕೆಂದರು.

ತಹಸೀಲ್ದಾರ್ ಯು.ರಶ್ಮಿ ಮಾತನಾಡಿ ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿದಿರುವ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿಯಾಗಿದ್ದು,ಈ ಹಿಂದೆ ಬಸ್ ಪಾಸ್ ಪಡೆದು ಪ್ರಯಾಣ ಮಾಡುತ್ತಿದ್ದರು, ಈಗ ಉಚಿತವಾಗಿ ಪ್ರಯಾಣ ಜಾರಿಯಾಗಿರುವುದು ಮಹಿಳೆಯರ ಸ್ವಾವಲಂಭಿ ಜೀವನಕ್ಕೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಸಂಜೀವರಾಯಪ್ಪ ಡಿಸಿಸಿ ಬ್ಯಾಂಕ್ ನಿರ್ಧೇಶಕ ಪಿಚ್ಚಹಳ್ಳಿ ಗೋವಿಂದರಾಜು, ಕೆಯುಡಿಎ ಮಾಜಿ ಅಧ್ಯಕ್ಷ ಶಂಷುದ್ದಿನ್ ಬಾಬು, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗೋಪಾಲಗೌಡ, ಕಾಮಸಮುದ್ರ ಗ್ರಾಪಂ ಮಾಜಿ ಅದ್ಯಕ್ಷ ಆದಿನಾರಾಯಣ ಕುಟ್ಟಿ,ಮುಖಂಡರಾದ ಚಂದ್ರಕುಮಾರ್, ರಂಗಾಚಾರಿ, ಮುನಿರಾಜು, ಶಫಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಾದ ಮಂಜುನಾಥ್, ಸತೀಶ್, ಶ್ರೀನಿವಾಸ್  ಶಿಕ್ಷಕ ದೇವರಾಜ್ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!