• Sun. May 19th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಬಹು ಸಂಸ್ಕೃತಿಯಲ್ಲಿ ಉತ್ತಮ ಜೀವನ ನಡೆಸುತ್ತಿರುವ ನಮ್ಮ ಭಾರತ ದೆಶದಲ್ಲಿ ಏಕ ಸಂಸ್ಕೃತಿ ಹೇರಿಕೆಗೆ ಹುನ್ನಾರ ನಯುತ್ತಿದೆ. ವಿವಿಧತೆಯಲ್ಲಿ ಏಕತೆಯ ಜೀವನ ನಡೆಸುತ್ತಿರುವ ಭಾರತ ದೇಶದ ಭವಿಷ್ಯದ ದೃಷ್ಠಿಯಿಂದ ಏಕ ಸಂಸ್ಕೃತಿ ಹೇರಿಕೆಯನ್ನು ತಡೆಯಬೇಕಿದೆ ಎಂದು ಸಾಹಿತಿಗಳಾದ ಕಾ.ವೆಂ.ಶ್ರೀನಿವಾಸಮೂರ್ತಿ ಹೇಳಿದರು.

ಅವರು ಬಂಗಾರಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಮೆಲ್ ಸಮುದಾಯ ಮತ್ತು ಪ್ರಥಮ ದರ್ಜೆ ಕಾಲೇಜು ಜಂಟಿಯಾಗಿ ಏರ್ಪಡಿಸಿದ್ದ ಸಮುದಾಯ-40 ಬಹುತ್ವ ಸಂಸ್ಕೃತಿ ಮೇಳದ  ಅಂಗವಾಗಿ ಬಹುತ್ವ ಭಾರ-ಬಲಿಷ್ಟ ಭಾರತ ಎಂಬ ವಿಷಯದ ಬಗ್ಗೆ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಯ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಬಹು ಸಂಸ್ಕೃತಿ ವಿರೋಧಿ ಕೋಮುಶಕ್ತಗಳು ದೇಶದಲ್ಲಿ ಮತ್ತೆ ಏಕ ಸಂಸ್ಕೃತಿಯನ್ನು ಹೇರಲು  ಮುಂದಾಗಿದ್ದಾರೆ. ಇದು ಅತ್ಯಂದ ಗಂಡಾಂತರಕಾರಿ ಬೆಳವಣಿಗೆಯಾಗಿದೆ. ಏಕ ಸಂಸ್ಕೃತಿ ಜಾರಿಯಾದರೆ  ದೇಶದಲ್ಲಿ ದಲಿತರು, ಶೂದ್ರರು, ಅಲ್ಪಸಂಖ್ಯಾತರು ನೆಮ್ಮದಿಯಾಗಿ ಜೀವನ ನಡೆಸಲಾಗದೆ ಮತ್ತೆ ಬಹುಜನರು ನರಳಾಟದ ಜೀವನ ನಡೆಸಬೇಕಾಗಿ ಬರಬಹುದು.

ಈ ಬಗ್ಗೆ ಎಲ್ಲರೂ ಎಚ್ಚರಗೊಳ್ಳಬೇಕು. ಕವಿಗಳು, ಸಾಹಿತಿಗಳು ತಮ್ಮ ಜನಪರ ಮತ್ತು ಪ್ರಗತಿಪರವಾದ ಸಾಹಿತ್ಯಗಳ ಮೂಲಕ ಜನರನ್ನು ಎಚ್ಚರಿಸಬೇಕಿದೆ. ಯಾವ ಕವಿ ಜನಪರ ಸಾಹಿತ್ಯ ರಚಿಸುವುದಿಲ್ಲವೋ ಆ ಕವಿ ಸಾಮಾಜಿಕ ಕಸಕ್ಕೆ ಸಮ. ಆದ್ದರಿಂದ ಎಲ್ಲಾ ಸಾಹಿತಿಗಳು ಏಕ ಸಂಸ್ಕೃತಿ ಜಾರಿಯ ಹುನ್ನಾರದ ಬಗ್ಗೆ ಎಚ್ಚರಿಕೆ ವಹಿಸಿ ಹೆಚ್ಚು ಹೆಚ್ಚು ಸಾಹಿತ್ಯ ರಚಿಸಬೇಕು ಎಂದರು.

ಕವಿತೆಯಲ್ಲಿ ಚೈತನ್ಯವಿರಬೇಕು. ಅದು ಜನರಿಗೆ ಅನುಕೂಲಕರವಾಗಿರಬೇಕು. ಜನರನ್ನು ಚೈತನ್ಯಗೊಳಿಸುವ ವಿಷಯವಿರಬೇಕು. ಬರಹಗಾರರಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು. ಆಯಾ ಸಂದರ್ಭಕ್ಕೆ ಜನರನ್ನು ಸಂಕಷ್ಟಕ್ಕೆ ದೂಡುವ ಪರಿಸ್ಥಿಯ ಬಗ್ಗೆ ತಕ್ಷಣ ಆ ಬಗ್ಗೆ ಬರೆದು ಜನರ ಪರ ನಿಲ್ಲಬೇಕು ಎಂದರು.

ಏಕ ಸಂಸ್ಕೃತಿ ಜಾರಿಯ ಶಬ್ಧ ಬರುತ್ತಿರುವುದು ಮನುವಾದಿ, ಕೋಮುವಾದಿ ಶಕ್ತಿಗಳ ಕಡೆಯಿಂದ. ಅದು ಸನಾತನ ಭಾರದ ಮರುಸ್ಥಾಪನೆಯ ಹುನ್ನಾರವಾಗಿದೆ. ಅದು ಜಾರಿಯಾದರೆ ಮಹಿಳೆ ಮನೆಯಲ್ಲಿರಬೇಕು, ದಲಿತರು ಊರ ಹೊರಗಿರಬೇಕಾಗುತ್ತದೆ, ಶೂದ್ರರು ಶಿಕ್ಷಣ ಸರ್ಕಾರಿ ಉದ್ಯೋಗದಿಂದ ದೂರವಾಗುತ್ತಾರೆ. ಈ ಎಲ್ಲದರ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.

ಸಮಾಜಕ್ಕೆ ಸಮುದಾಯ ಸಂಘಟನೆಯ ಕೊಡುಗೆ ಅನನ್ಯವಾದುದು. ನಿರಂತರ ಚಟುವಟಿಕೆಗಳ ಮೂಲಕ ಬಹುತ್ವ ಮತ್ತು ಬಹು ಸಂಸ್ಕೃತಿಯ ಉಳಿವಿಗಾಗಿ ಸದಾ ಶ್ರಮಿಸುತ್ತಿರುವ ಸಂಘಟನೆಯಾಗಿದೆ.  ಸಮುದಾಯದಲ್ಲಿ ನಾನೂ ಒಂದು ಭಾಗ. ಕಳೆದ 20 ವರ್ಷಗಳ ಹಿಂದೆ ಸಮುದಾಯ 20 ಉತ್ಸವದ ವೇಳೆ ನಡೆದ ನಾಟಕದಲ್ಲಿ ನಾನು ಸಣ್ಣ ಪಾತ್ರ ಮಾಡಿದ್ದೇನೆ ಎಂದರು.

ಇದಕ್ಕೂ ಮೊದಲು ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ ಮಾತನಾಡಿ, ಬಹು ಸಂಸ್ಕೃತಿಯೇ ಭಾರತದ ಶಕ್ತಿ ಮತ್ತು ಸೊಬಗು. ಏಕ ಸಂಸ್ಕೃತಿ ಹೇರಿಕೆಯ ಹುನ್ನಾರ ಬಹು ಸಂಸ್ಕೃತಿಯ ಮೇಲಿನ ದಾಳಿಯಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಗಂಡಾಂತರ ಉಂಟಾಗಲಿದೆ.

ಭಾರತದ ಪ್ರಾಚೀನ ಇತಿಹಾಸದ ಅದ್ಯಯನದಿಂದ ತಿಳಿಯುವ ವಿಷಯವೇನೆಂದರ ದೇಶದಲ್ಲಿ ಯಾವೊತ್ತೂ ಏಕ ಸಂಸ್ಕೃತಿ ಇರಲಿಲ್ಲ. ಆದಿಮಾ ಸಂಸ್ಕೃತಿ ಇದೆ, ಆರ್ಯ ಸಂಸ್ಕೃತಿ ಇದೆ, ಹೀಗೆ ಅನೇಕ ರೀತಿಯ ಸಂಸ್ಕೃತಿಗಳಿವೆ. ಆಧುನಿಕ ಭಾರತದಲ್ಲೂ ಬಹು ಸಂಸ್ಕೃತಿಯಿಂದಲೇ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ದೇಶದಲ್ಲಿ ಬೇರೆ ಬೇರೆ ಸಂಸ್ಕೃತಿಗಳ ಮಿಶ್ರಣವಿದೆ. ಅವೆಲ್ಲವುಗಳ ಮಿಶ್ರಣವೇ ಭಾರದ ಸೌಂದರ್ಯ ಮತ್ತು ಶಕ್ತಿಯಾಗಿದೆ. ಅದನ್ನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸದ್ಯದ ಸ್ಥಿಯಿಯಲ್ಲಿ ದೇಶದಲ್ಲಿ ಏಕ ಸಂಸ್ಕೃತಿಯ ವಿಷಯ ಮತ್ತೆ ಪ್ರಚಲಿತಕ್ಕೆ ಬರುತ್ತಿದೆ. ಇದರ ಬಗ್ಗೆ ಎಲ್ಲರೂ ಎಚ್ಚರವಹಿಸಿ ಬಹು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಸಮುದಾಯ-40 ಉತ್ಸವ ಸಮಿತಿ ಗೌರವಾದ್ಯಕ್ಷ ಜೆ.ಜಿ.ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಲಾರದ ಆದಿಮ ಸಾಂಸ್ಕೃತಕ ಕೇಂದ್ರದ ಖಜಾಂಚಿ ಹ.ಮಾ.ರಾಮಚಂದ್ರ ಆಶಯ ನುಡಿಗಳನ್ನಾಡಿದರು. ಸಮುದಾಯ ಸಂಘಟನೆಯ ರಾಜ್ಯದ್ಯಕ್ಷ ಅಚ್ಚುತ ಮೊದಲಾದವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕವಿಗೋಷ್ಠಯಲ್ಲಿ ಕವಿಗಳಾದ ಆಸೀಫಾ ಬೇಗಂ, ಜನಾರ್ಧನ ಸಮುದಾಯ, ಬಾಲಾಜಿ.ಆರ್, ಸುಬ್ರಮಣಿ, ಡಾ.ಹೆಚ್.ಎನ್.ಪುಷ್ಪಲತಾ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಶ್ರೀಶೈಲ ಶಿರಸ್ಯಾಡ್, ಎಸ್.ಟಿ.ಭಾರತಿ ಬಹುತ್ವ ಭಾರತ-ಬಲಿಷ್ಠ ಭಾರತ ಎಂಬ ವಿಷಯದ ಬಗ್ಗೆ ಕಾವ್ಯ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್.ಓ.ಜಗದೀಶ್ ನಾಯಕ್, ಕಾ.ಹು.ಚಾನ್ ಪಾಷ, ರವೀಂದ್ರ, ಜನಾರ್ಧನ್, ಅಲಿಕ್, ಕೆ.ರಾಮಮೂರ್ತಿ, ಅನಿತ, ಸುಮ, ಚಿತ್ರ ಮೊದಲಾದವರಿದ್ದರು.

 

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!