• Sun. May 19th, 2024

ಕಾರಂಜಿಕಟ್ಟೆ ರೇಣುಕಾ ಯಲ್ಲಮ್ಮ ದೇವಾಲಯದಿಂದ ಕೋಲಾರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುನಿರಾಜುಗೆ ಸನ್ಮಾನ

PLACE YOUR AD HERE AT LOWEST PRICE

ಕೋಲಾರ ನಗರದ ಕಾರಂಜಿ ಕಟ್ಟೆ ಶಾಂತಿನಗರದ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದ ಸಮಿತಿ ವತಿಯಿಂದ ನಗರದ ಅರ್ಬನ್ ಬ್ಯಾಂಕ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸಂಬಂಧ ಎಂ.ಮುನಿರಾಜು ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಕಾಂಗ್ರೆಸ್‌ನ ಮುಖಂಡರು ಮತ್ತು ಆ ಭಾಗದ ಪ್ರಮುಖ ಮುಖಂಡರಾದ ಎಂ.ಚಂದ್ರಮೌಳಿ ರವರು ಮಾತನಾಡಿ, ಎಂ.ಮುನಿರಾಜು ರವರು ಸರಿ ಸುಮಾರು ಮೂರು ದಶಕಗಳಿಂದ ಸುದೀರ್ಘವಾಗಿ ಸಮುದಾಯದವರನ್ನು ಸಂಘಟಿಸುತ್ತಾ ಕೋ-ಚಿ ಎರಡೂ ಜಿಲ್ಲೆಗಳಲ್ಲಿ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಂತವರಾಗಿದ್ದಾರೆ.

ಸಮುದಾಯ ಮತ್ತು ಸಂಘಟನೆ ಎಂಬ ಎರಡು ಅಂಶದ ಕಾರ್ಯಕ್ರಮವನ್ನು ನಿರಂತರವಾಗಿ ಮಾಡುತ್ತಾ ಸಾಗಿದ ಪರಿಣಾಮ ತನ್ನ ಸಾಂಸಾರಿಕ ಮತ್ತು ವೈಯುಕ್ತಿಕ ಜೀವನಕ್ಕೂ ಸಮಯ ನೀಡುವಲ್ಲಿ ವಿಫಲವಾಗಿರುವುದನ್ನು ನಾವು ಕಂಡಿದ್ದೇವೆ. ಹಾಗೂ ಸಮುದಾಯದ ಜೊತೆ ಜೊತೆಯಲ್ಲಿ ಎಲ್ಲಾ ಸಮುದಾಗಳ ಬಡವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಜ್ವಲಂತ್ತ ಸಮಸ್ಯೆಗಳಿಗೆ ಸ್ಪಂದಿಸುವ ಹಾದಿಯಾಗಿ ನಡೆದು ಬಂದಂತವರಾಗಿದ್ದಾರೆ.

ಎಂ.ಮುನಿರಾಜು ರವರ ವ್ಯಕ್ತಿತ್ವವನ್ನು ಹಾಗೂ ಅವರ ಸಮಾನೆತೆಯ ಮನಃಸ್ಥಿತಿಯನ್ನು ಅರಿತು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.

ಲಾಭರಹಿತವಾಗಿ ಸ್ವಾರ್ಥ ರಹಿತವಾಗಿ ನಿರಂತರವಾಗಿ ಹೋರಾಟಗಳನ್ನು ಮಾಡಿರುವ ಮತ್ತು ಮಾಡುತ್ತಿರುವ ನನ್ನ ಹಿರಿಯ ಸಹೋದರರಾದ
ಎಂ.ಮುನಿರಾಜು ರವರನ್ನು ಸನ್ಮಾನಿಸಲು ನನಗೆ ಹೆಮ್ಮೆ ಅನಿಸುತ್ತಿದೆ ಎಂದು ನೂತನ ಅಧ್ಯಕ್ಷರ ಗುಣಗಾನ ಮಾಡಿದರು.

ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅರ್ಬನ್ ಬ್ಯಾಂಕ್‌ನ ನೂತನ ಅಧ್ಯಕ್ಷ ಎಂ.ಮುನಿರಾಕಿ, ನನಗೆ ಅರ್ಬನ್ ಬ್ಯಾಂಕ್‌ನಲ್ಲಿ ಅಧ್ಯಕ್ಷರ ಗಾದೆ ಸಿಕ್ಕಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಕಾರಣರಾಗಿದ್ದಾರೆ. ಸಂವಿಧಾನದ ಆಶಯದಂತೆ ಇಂದು ನಾನು ಅಧ್ಯಕ್ಷರಾಗಿದ್ದೇನೆ. ಹಾಗೂ ನಾನು ಅಧ್ಯಕ್ಷರಾಗಲು ಸಹಕರಿಸಿದ ಬ್ಯಾಂಕ್‌ನ ಎಲ್ಲಾ ನಿರ್ಧೇಶಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ನಗರದಲ್ಲಿನ ತಾವುಗಳು ಎಲ್ಲರೂ ಈ ಕೂಡಲೆ ಬ್ಯಾಂಕ್‌ನಲ್ಲಿ ಖಾತೆ ತೆರೆದು ವಹಿವಾಟು ಪ್ರಾರಂಭಿಸಿ, ಬ್ಯಾಂಕಿನಿಂದ ನಿಮಗೆ ಸಿಗಬೇಕಾದ ಎಲ್ಲಾ ರೀತಿಯ ಸಾಲ ಸೌಲಭ್ಯಗಳು ಸಿಗಲು ನಾನು ಬ್ಯಾಂಕ್‌ನ ನಿರ್ಧೇಶಕರೊಂದಿಗೆ ಚರ್ಚಿಸಿ ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ದೇವಾಲಯ ಸಮಿತಿಯ ಮುಖ್ಯಸ್ಥರಾದ ಪಿ.ವೆಂಕಟೇಶ್, ಕೃಷ್ಣಪ್ಪ,ಂ iತಿರಾಜ, ಚೀಫ್ ಅಫಿಸರ್ ಅಮರ್, ವೆಂಕಟೇಶಪ್ಪ, ಸರೋಜಮ್ಮ,
ಮೃತ್ಯಂಜಯ, ಗಿರೀಶ್, ಮಂಜುನಾಥ್ ಲವಕಾಂತ್, ಮುಖಂಡರಾದ ರಾಜಕುಮಾರ್, ರೇಣುಪ್ರಸಾದ್, ಬೆಳಮಾರನಹಳ್ಳಿ ಆನಂದ್, ಮಾಜಿ ನಗರಸಭಾ ನಾಮ ನಿರ್ದೇಶಕರಾದ ಡೆಕೋರೇಷನ್ ಕೃಷ್ಣ, ವಾಸುದೇವಮೂರ್ತಿ, ಗರಂಡಾ ನಾಗರಾಜ, ಸಿರಾಜ್ ಪಾಷ, ಶಂಕರ್,ಕುಂಬಾರಪೇಟೆ ಅನಂದ್, ಪುಷ್ಪ ಡೆಕೋರೇಷನ್ ಮಾಲಿಕರಾದ ನವೀನ್, ಚಿಟ್ಟಿ, ಕೃಷ್ಣಸಿಂಗ್, ಸುಮನ್, ಅಂಬರೀಶ್, ಸತೀಶ್ ಕುಮಾರ್, ಮೋಹನ್, ಕುಪೇಂದ್ರ, ಯೋಗಿ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!