• Thu. May 16th, 2024

ಸಮುದಾಯದ ವಿಶ್ವಾಸ ಪಡೆದು ಯಾದವ ಸಂಘಟನೆ ಬಲಗೊಳಿಸಲು ಕ್ರಮ ಬಾಲಕಿಯರ ಹಾಸ್ಟೆಲ್ ಶೀಘ್ರ ಆರಂಭಕ್ಕೆ ಆದ್ಯತೆ-ವಕ್ಕಲೇರಿ ನಾರಾಯಣಸ್ವಾಮಿ

PLACE YOUR AD HERE AT LOWEST PRICE

ಸಾಮಾಜಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಯಾದವ ಸಂಘಟನೆಯನ್ನು ಬಲಗೊಳಿಲು ಸಮುದಾಯದ ಎಲ್ಲಾ ಹಿರಿಯರ ವಿಶ್ವಾಸ ಪಡೆಯುವುದಾಗಿಯೂ ಹಾಗೂ ನಗರದಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಅಗತ್ಯ ಕ್ರಮವಹಿಸುವುದಾಗಿ ಜಿಲ್ಲಾ ಯಾದವ ಸಂಘದ ನೂತನ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿ ತಿಳಿಸಿದರು.

ಕೋಲಾರ ನಗರದ ಯಾದವ ಸಮುದಾಯ ಭವನದಲ್ಲಿ ಭಾನುವಾರ ನಿಕಟಪೂರ್ವ ಅಧ್ಯಕ್ಷ ಗೋಕುಲ ವಿ.ನಾರಾಯಣಸ್ವಾಮಿ, ಗೌರವ ಡಾಕ್ಟರೇಟ್ ವಿಜೇತ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಹಾಗೂ ತಮಗೆ ಸಮುದಾಯ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಸುಮಾರು ೩೦ ವರ್ಷಗಳಿಗೂ ಹೆಚ್ಚು ಕಾಲ ಯಾದವ ಸಂಘವನ್ನು ಮುನ್ನಡೆಸುವ ಮೂಲಕ ಜನಾಂಗಕ್ಕಾಗಿ ಸಮುದಾಯಭವನ, ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಅಪಾರ ಸೇವೆಯನ್ನು ಸಲ್ಲಿಸಿರುವ ಗೋಕುಲ ವಿ.ನಾರಾಯಣಸ್ವಾಮಿ ಅವರು ಹಾಕಿಕೊಟ್ಟ ಹಾದಿಯಲ್ಲೇ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ಮುನ್ನಡೆಸಿ ಸಂಘಟನೆಯನ್ನೂ ಬಲಗೊಳಿಸುವುದಾಗಿ ತಿಳಿಸಿ, ಸಮುದಾಯ ಭವನಕ್ಕೆ ಪೈಂಟಿಂಗ್ ಮಾಡಿಸುವುದಾಗಿ ತಿಳಿಸಿದರು.

ಯಾದವ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಇತರೆ ಸಮುದಾಯಗಳಿಗಿಂತ ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂದ ಅವರು, ಜಿಲ್ಲೆಯಲ್ಲಿ ಯಾದವ ಸರ್ಕಾರಿ ನೌಕರರ ಸಂಘಟನೆ ಬಲಗೊಳಿಸೋಣ, ಸಮುದಾಯದ ಅಭಿವೃದ್ದಿಗೆ ಕೈಜೋಡಿಸಲು ಎಲ್ಲರ ಸಹಕಾರ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.

ಕೊಂಡರಾಜನಹಳ್ಳಿ
ಕುಟುಂಬಗಳ ನೆರವು
ಯಾದವ ಸಂಘದ ನಿಕಟಪೂರ್ವ ಅಧ್ಯಕ್ಷ ಗೋಕುಲ ವಿ.ನಾರಾಯಣಸ್ವಾಮಿ ಸನ್ಮಾನ ಸ್ವೀಕರಿಸಿ ಮಾತನಾಡಿ, ೧೯೯೧ರಲ್ಲಿ ಕೇವಲ ೧.೧೨ ಲಕ್ಷ ರೂ ನೀಡಿ ಯಾದವ ಸಮುದಾಯವಿರುವ ಜಾಗವನ್ನು ಖರೀದಿ ಮಾಡಿದ್ದರ ಕುರಿತು ತಿಳಿಸಿ, ಈ ಕಾರ್ಯಕ್ಕೆ ಕೊಂಡರಾಜನಹಳ್ಳಿಯ ಯಾದವ ಸಮುದಾಯದ ಮುಖಂಡರ ನೆರವನ್ನು ಸ್ಮರಿಸಿದರು.

ಸಮುದಾಯಭವನ ನಿರ್ಮಿಸಲು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ವರ್ತೂರು ಪ್ರಕಾಶ್ ನೀಡಿದ ಆರ್ಥಿಕ ನೆರವು, ಕೊಳವೆ ಬಾವಿಗಳನ್ನು ಹಾಕಿಸಿಕೊಟ್ಟ ಶಾಸಕ ಕೆ.ಶ್ರೀನಿವಾಸಗೌಡ ಸೇರಿದಂತೆ ವಿಧಾನಪರಿಷತ್ ಸದಸ್ಯರು ತಮ್ಮ ನಿಯಿಂದ ನೀಡಿದ ನೆರವು ಸ್ಮರಣೀಯ ಎಂದರು.

ಸ್ವಾಭಿಮಾನದಿಂದ ಸಮಾಜ ಬದುಕಬೇಕು ಎಂಬುದೇ ಅಭಿಲಾಷೆ, ಸಮುದಾಯಭವನ ಬಾಲಕರ ಹಾಸ್ಟೆಲ್ ಮಾಡಿದ್ದೇನೆ, ಇದೀಗ ಬಾಲಕಿಯರ ಹಾಸ್ಟೆಲ್ ಅಗತ್ಯವಿದ್ದು, ಹೊಸ ಅಧ್ಯಕ್ಷರು ಮಾಡಲಿ ಎಂದು ಆಶಿಸಿದರು.

೨ ಎಕರೆ ಜಮೀನು
ಪಡೆಯಲು ಒಪ್ಪಿಗೆ
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ, ಶಾಸಕರಾದ ರೂಪಕಲಾ ಶಶಿಧರ್, ನಂಜೇಗೌಡ, ಕೊತ್ತೂರು ಮಂಜುನಾಥ್ ಅವರು ಸಮುದಾಯಕ್ಕೆ ೨ ಎಕರೆ ಜಮೀನು ನೀಡುವ ಕುರಿತು ಕ್ರಮವಹಿಸುವ ಭರವಸೆ ನೀಡಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪ್ರತಿಹಳ್ಳಿಗೂ ಭೇಟಿ ನೀಡಿ ಸಮುದಾಯದ ಜನರನ್ನು ಸಂಘಟಿಸುವ ಅಗತ್ಯವಿದೆ, ಸಂಘಕ್ಕೆ ಹಿರಿಯರು ಮಾಡಿರುವ ಆಸ್ತಿ ಉಳಿಸಿಕೊಳ್ಳುವ ಮೂಲಕ ಸಂಘವನ್ನು ಮತ್ತಷ್ಟು ಬಲಿಷ್ಟವಾಗಿ ಮಾಡಬೇಕು ಎಂದರು.
ದಕ್ಷಿಣ ರಾಜ್ಯಗಳ ಯಾದವ ಮುಖಂಡರ ಸಮಾವೇಶ ಮಾಡುವ ಮೂಲಕ ಉಳ್ಳವರ ನೆರವು ಪಡೆದು ಸಮುದಾಯಕ್ಕಾಗಿ ಅಗತ್ಯವಿರುವ ಕೆಲಸಗಳನ್ನು ಮತ್ತಷ್ಟು ಹೆಚ್ಚಿಸೋಣ, ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಜಿಲ್ಲಾ,ತಾಲ್ಲೂಕು ಪದಾಕಾರಿಗಳೊಂದಿಗೆ ಚರ್ಚಿಸಿ, ಎಲ್ಲರ ವಿಶ್ವಾಸ ಪಡೆದು ಮುಂದಡಿ ಇಡಲು ಕೋರಿದರು.

ಕೃಷ್ಟಜಯಂತಿಗೆ
ಪೂರ್ವಭಾವಿ ಸಭೆ
ಜಿಪಂ ಮಾಜಿ ಸದಸ್ಯ ಶ್ರೀನಿವಾಸ್, ಉಪಾಧ್ಯಕ್ಷ ಹಾಗೂ ವಕೀಲ ದಿವಾಕರ್, ಮಾಲೂರು ತಾಲ್ಲೂಕು ಅಧ್ಯಕ್ಷ ಗೋವಿಂದಪ್ಪ ಮಾತನಾಡಿ, ಸಮುದಾಯ ಒಗ್ಗಟ್ಟಾಗಿದ್ದರೆ ಮಾತ್ರವೇ ಶಕ್ತಿ, ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಕಳೆದ ಬಾರಿ ಆಚರಿಸಿದಂತೆ ಅದ್ದೂರಿಯಿಂದ ಆಚರಿಸೋಣ, ಅದಕ್ಕೂ ಮುನ್ನಾ ಪೂರ್ವಭಾವಿ ಸಭೆ ಕರೆದು ಸಿದ್ದತೆಗಳ ಕುರಿತು ಚರ್ಚಿಸೋಣ ಎಂದು ತಿಳಿಸಿದರು.
ವಕೀಲ ದಿವಾಕರ್ ಸಮುದಾಯದ ಜನತೆಗೆ ಉಚಿತ ಕಾನೂನು ನೆರವು ಒದಗಿಸುವ ಭರವಸೆ ನೀಡಿ, ತಮ್ಮನ್ನು ಸಂಪರ್ಕಿಸಲು ಕೋರಿದರು. ಮುಖಂಡ ಪುರುಷೋತ್ತಮ್ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ತಾವು ೧ ಲಕ್ಷ ನೆರವು ನೀಡುವುದಾಗಿ ಘೋಷಿಸಿದರು.
ಸಂಘದ ಕಾರ್ಯದರ್ಶಿ ಪಿಡಿಒ ನಾಗರಾಜ್ ನಿರೂಪಿಸಿ,ಸ್ವಾಗತಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಅಮರನಾಥ್ ವಹಿಸಿದ್ದು, ವೇದಿಕೆಯಲ್ಲಿ ಮುಖಂಡರಾದ ಮುಕ್ಕಡ್ ವೆಂಕಟೇಶ್, ರಾಜ್ಯ ಕಾರ್ಯಕಾರಿ ಸದಸ್ಯ ಶ್ರೀನಿವಾಸಯಾದವ್, ಕೆಎಂಕೆ ಗೋಪಾಲ್,ಪದಾಕಾರಿಗಳಾದ ಮಂಜುನಾಥ್,ಶ್ರೀನಿವಾಸ್, ಕೋಲಾರಮ್ಮ ಡ್ರೈವಿಂಗ್ ಶಾಲೆಯ ನಿತೀಶ್ ಯಾದವ್,ಅಮ್ಮೇರಹಳ್ಳಿ ಚಲಪತಿ, ಕೊಂಡರಾಜನಹಳ್ಳಿ ಪ್ರಶಾಂತ್ ಮತ್ತಿತರರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

 

Related Post

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ
ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್

Leave a Reply

Your email address will not be published. Required fields are marked *

You missed

error: Content is protected !!