• Sat. Apr 27th, 2024

PLACE YOUR AD HERE AT LOWEST PRICE

ಕೋಲಾರ:ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಇಂತಹ ಬಡ ಮಕ್ಕಳಿಗೆ ಸಹಾಯ ಮಾಡಲು ಶ್ರೀಮಂತ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಮುಂದೆ ಬರಬೇಕೆಂದರು ಎಂದು ವಕೀಲ ಸತೀಶ ರವರು ತಿಳಿಸಿದರು.

ಕೋಲಾರ ನಗರದ ಕುರುಬರಪೇಟೆಯಲ್ಲಿರುವ ಚುಟುಕು ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರದಲ್ಲಿ ಎಸ್ಸೆಸ್ಸೆಲ್ಸಿ ಸಾಧಕಿ ದಿವ್ಯಶ್ರೀ ಎಂಬ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಮಾತಾನಾಡುತ್ತಿದ್ದರು

ನಿವೃತ್ತ ಪೋಲೀಸ್ ಎಎಸ್‌ಐ ರವೀಂದ್ರನಾಥ್ ಮಾತನಾಡಿ, ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೊತ್ಸಾಹಿಸಿದರೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ. ಕಷ್ಟ ಮಾತ್ರವಲ್ಲಿ ಇಷ್ಟ ಪಟ್ಟು ಓದುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ ಎಂದು ಹೇಳಿದರು.

ಸಾರಿಗೆ ಸಂಸ್ಥೆಯ ಅಧಿಕಾರಿ ನಾ.ನಾರಾಯಣಸ್ವಾಮಿ, ಸಮಾಜಮುಖಿಗಳಾಗಬೇಕಾದರೆ ವಿದ್ಯಾಭ್ಯಾಸ ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ೬೨೫ಕ್ಕೆ ೬೦೦ ಅಂಕಗಳನ್ನು ಪಡೆದಿರುವ ದಿವ್ಯಶ್ರೀ ರವರಿಗೆ ಅಭಿನಂದನೆಗಳು ಎಂದರು.

ಪತ್ರಕರ್ತ ಪಾಲ್ಗುಣ ಮಾತನಾಡಿ,  ಸಮಾಜದಲ್ಲಿ ಭ್ರಷ್ಟಾಚಾರ, ಜಾತೀಯತೆ, ಸಂಕುಚಿತ ಮನೋಭಾವ ತಾಂಡವಾಡುತ್ತಿದ್ದು, ವಿದ್ಯಾರ್ಥಿಗಳು ಇವ್ಯಾವುದಕ್ಕೂ ವಿಚಲಿತರಾಗದೇ ಉತ್ತಮವಾಗಿ ಓದಿ ಗುರಿ ಸಾದಧಿಸಬೇಕೆಂದು ಸಲಹೆ ನೀಡಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪಿ ನಾರಾಯಣಪ್ಪ ಮಾತನಾಡಿ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳಬೇಕು. ತಮ್ಮ ಗುರಿಯಿಂದ ವಿಚಲಿತರಾಗದೇ ತಾವು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಪ್ರಭುತ್ವ ಗಳಿಸಿ ಕೊಳ್ಳಬೇಕು.

ನಿರಂತರವಾದ ಅಧ್ಯಯನದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಮಾಜದಲ್ಲಿ ಎಷ್ಟೇ ಕಲುಷಿತ ವಾತಾವರಣವಿದ್ದರೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆಯಿದೆ ಎಂದರು.

ಕಾರ್ಯಕ್ರಮದಲ್ಲಿ ತ್ಯಾಗರಾಜ್, ಜಿ. ಶ್ರೀನಿವಾಸ್,  ಕೋ.ನಾ.ಪರಮೇಶ್ವರನ್, ಟಿ.ಸುಬ್ಬರಾಮಯ್ಯ, ಶರಣಪ್ಪ ಗಬ್ಬೂರು,  ಕೆ.ಎನ್.ಪದ್ಮಾವತಿ, ಗೀತಾ ಬತ್ತೆಪ್ಪ, ಕುರುಬರಪೇಟೆ ಬೆಮೆಲ್ ಶ್ರೀನಿವಾಸ್, ಚಿಟ್ನಹಳ್ಳಿ ರಾಮಚಂದ್ರ, ವಿಹಾನ್, ಮೌರ್ಯ ಉಪಸ್ಥಿತರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!