• Fri. May 10th, 2024

PLACE YOUR AD HERE AT LOWEST PRICE

ಕೋಲಾರ:ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲೆಯ ೯ ಪತಕರ್ತರಿಗೆ ಸಂಘದಿಂದ ನೀಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ರಾಜ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ರಾಜ್ಯ ಆಯುಕ್ತ ಹೇಮಂತ್ ನಿಂಬಾಳ್ಕಾರ್, ರಾಜ್ಯಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಖಜಾಂಚಿ ವಾಸುದೇವಹೊಳ್ಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯಕಾರ್ಯಕಾರಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಮಹಮದ್ ಯೂನುಸ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್,ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮತ್ತಿತರರು ಸಾಧಕ ಪತ್ರತರ್ಕರನ್ನು ಸನ್ಮಾನಿಸಿದರು.

೯ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ.

ಈ ಬಾರಿಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರತಿವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟುಹೋದ ಹಿರಿಯ ಪತ್ರಕರ್ತರ ಹೆಸರಿನಲ್ಲಿ ನೀಡುತ್ತಿದ್ದು, ಕೆ.ಆರ್.ಕೃಷ್ಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ವಿಜಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಂ.ನಾರಾಯಣಸ್ವಾಮಿ, ಜಿ.ನಾರಾಯಣಸ್ವಾಮಿ ಅವರ ನೆನಪಿನಲ್ಲಿ: ಕೋಲಾರದ ಪ್ರಜಾವಾಣಿ ದಿನಪತ್ರಿಕೆಯ ಛಾಯಾಗ್ರಾಹಕ ಎ.ಸರ್ವಜ್ಞಮೂರ್ತಿ.

ಬಿ.ವಿ.ನರಸಿಂಹಮೂರ್ತಿ ಅವರ ನೆನಪಿನಲ್ಲಿ: ಉದಯವಾಣಿ ದಿನಪತ್ರಿಕೆಯ ಮಾಸ್ತಿ ಹೋಬಳಿ ವರದಿಗಾರ ಎಂ.ಮೂರ್ತಿ, ಎಂ.ಮಲ್ಲೇಶ್ ನೆನಪಿನಲ್ಲಿ: ಕೋಲಾರದ ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸಮೀರ್ ಅಹಮದ್ ಎನ್.ಎಂ, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಮುಳಬಾಗಿಲಿನ ಉದಯಕಾಲ ದಿನಪತ್ರಿಕೆಯ ತಾಲೂಕು ವರದಿಗಾರ ವಿ.ಸುಕುಮಾರ್,.

ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಬಂಗಾರಪೇಟೆಯ ವಾಸ್ತವ ಕರ್ನಾಟಕ ದಿನಪತ್ರಿಕೆಯ ಸಂಪಾದಕ ಹೆಚ್.ಎಲ್.ಸುರೇಶ್, ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್‌ನ ಸಾಕ್ಷಿ ದಿನಪತ್ರಿಕೆಯ ತಾಲೂಕು ವರದಿಗಾರ ಜೆ.ಸತ್ಯನಾರಾಯಣ, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಶ್ರೀನಿವಾಸಪುರದ ಚುಂಬಕವಾಣಿ ದಿನಪತ್ರಿಕೆಯ ತಾಲೂಕು ವರದಿಗಾರ ಬಿ.ಕೆ.ಉಪೇಂದ್ರ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಕೋಲಾರದ ಕೋಲಾರ ನ್ಯೂಸ್ ಸಂಪಾದಕ ಕೆ.ಎನ್.ಚಂದ್ರಶೇಖರ್ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಎಸ್ಸೆಸ್ಸೆಲ್ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಾಧಕ ಮಕ್ಕಳನ್ನು ಪುರಸ್ಕರಿಸಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಾದ ಯುಕ್ತಶ್ರೀ ಎಸ್.ಗೋಟೂರು, ಶ್ರಾವ್ಯ ವಿ.ರೆಡ್ಡಿ, ವರುಣ್‌ಗೌಡ ಎಸ್, ಎಲ್.ಎಂ.ಮನ್ವಂತ್,ತಹರೀನ್ ಫಾತಿಮಾ, ಬಿ.ಜಿ.ಪಲ್ಲವಿ,ಮಹಮದ್ ಜುಪ್ತಾನ್ ಪಾಷ, ಭಾವನ ಹೆಚ್., ರಚನ ಸಿಎಂ.

ಆರ್.ಎಸ್.ಚರಣ್‌ಜಿತ್,ಕೆ.ಎನ್.ಚೇತನ್ ಗೌಡ, ಎಂ.ಆರ್.ನಿತೀಶ್ ವೆಂಕಟ್, ಎಂ.ಆರ್.ಧನುಷ್, ಬಿ.ಯು ನಮಿತ, ಸಿ.ಕೀರ್ತಿ ವಿವೇಕ್, ಆಯುಷ್‌ಕುಮಾರ್‌ಗುರು, ಮೆಹರಾನ್‌ಫಾತಿಮಾ, ಹೇಮಂತ್ ರಆಜ್, ವಿಕಾಸ್‌ಗೌಡರನ್ನು ಪುರಸ್ಕರಿಸಲಾಯಿತು.

ಪಿಯುಸಿ ಹಾಗೂ ಪದವಿ,ಪಿಜಿ ಸಾಧಕರು.

ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಎ.ಸುಚೇಂದ್ರ, ಮಹಮದ್ ಶಯಾನ್ ಯೂನುಸ್, ಆರ್.ವರ್ಷಿತಾ, ಎಸ್.ರಾಹುಲ್ ಯಾದವ್ ಕೆ.ವಿ.ಪ್ರೇಮ್,ಎಂ.ಆರ್.ಪೂರ್ವಿರನ್ನು ನಗದು ಪುರಸ್ಕಾರದೊಂದಿಗೆ ಪುರಸ್ಕರಿಸಲಾಯಿತು.

ಪದವಿ ಮತ್ತು ಸ್ನಾತಕೋತ್ತರ ವಿಭಾಗ.

ಸಾಧನೆ ಮಾಡಿದ ಆರ್.ತೇಜಸ್, ಎಂ.ಪ್ರಣಿತಾ, ಎಂ.ಆನುಷಾ, ಸಿ.ಎಸ್.ಶ್ರೀವಿದ್ಯಾ,ಎ.ಎಸ್.ಶೋಭಿತಾ, ಎಂ.ಎನ್.ಗಗನ್‌ನಾಯಕ್, ಎಸ್.ನೇಹಾ, ಎಸ್.ಜಯಶ್ರೀ, ಆರ್.ರಕ್ಷಿತಾರನ್ನು ಪುರಸ್ಕರಿಸಲಾಯಿತು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!