• Fri. May 10th, 2024

PLACE YOUR AD HERE AT LOWEST PRICE

ಕೋಲಾರ:ವೈದ್ಯಕೀಯ ಕ್ಷೇತ್ರದಲ್ಲಿ ಹಣ ಗಳಿಕೆಗಿಂತ ಸೇವಾ ಮಾನೋಭಾವನೆಯಿಂದ ಮುನ್ನಡೆದರೆ ಮಾತ್ರ ವೃತ್ತಿ ಘನತೆ ಕಾಪಾಡಿಕೊಳ್ಳುವುದರೊಂದಿಗೆ ಯಶಸ್ಸು ಕಾಣಲು ಸಾಧ್ಯ ಎಂದು ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಕುಲಸಚಿವರು ಹಾಗೂ ಪ್ರಭಾರಿ ಕುಲಪತಿಗಳಾದ ಡಾ|| ಡಿ.ವಿ.ಎಲ್.ಎನ್. ಪ್ರಸಾದ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಆಡಿಟೋರಿಯಂನಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಹಾಗೂ ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ|| ಚಂದ್ರಶೇಖರ್ ಮೂರ್ತಿ (ಯೂರೋ ಗೈನಕಾಲಜಿಸ್ಟ್) ಹಾಗೂ ಡಾ||ಕೆ.ಎನ್. ರಮೇಶ್, ಪ್ರೊಫೆಸರ್ ಹಾಗೂ ಮುಖ್ಯಸ್ಥರು, ಜನರಲ್ ಮೆಡಿಸಿನ್ ವಿಭಾಗ, ನಂದಿ ಮೆಡಿಕಲ್ ಕಾಲೇಜು, ಚಿಕ್ಕಬಳ್ಳಾಪುರ ಅವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.

ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವನೆ ಕಾಣೆಯಾಗಿ ಹಣ ಗಳಿಕೆ ಪ್ರಾಮುಖ್ಯತೆ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸರಿ -ತಪ್ಪುಗಳ ಆತ್ಮವಿಮರ್ಶೆಯ ಮೂಲಕ ಆಗಿರುವ ಸೇವೆಗೆ ಆದ್ಯತೆ ನೀಡುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಬಿ.ಸಿ.ರಾಯ್ ಅವರ ಜನ್ಮ ದಿನಾಚರಣೆಯನ್ನೇ ವೈದ್ಯರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ.

ಪ್ರತಿಯೊಬ್ಬರು ಅವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಸೇವೆ ಮುಂದುವರೆಸಿದರೆ ಸಮಾಜದಲ್ಲಿ ಉತ್ತಮ ವೈದ್ಯರಾಗಿ ಹೆಸರು ಗಳಿಸಬಹುದು ಎಂದು ಹೇಳಿದರು. ದೇವರಾಜ್ ಅರಸ್ ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲರೂ ಹಾಗೂ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಆದ ಡಾ.ಕೆ.ಪ್ರಭಾಕರ್ ಮಾತನಾಡಿ.ಸ

ಮಾಜದಲ್ಲಾಗುತ್ತಿರುವ ಏರುಪೇರುಗಳಿಂದ ತೀವ್ರ ತರವಾದ ಕಾಯಿಲೆಗಳು ಪತ್ತೆಯಾಗುತ್ತಿವೆ. ಅವುಗಳನ್ನು ನಿಯಂತ್ರಿಸಲು ಹೊಸ ಹೊಸ ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದ್ದು, ಯುವ ವೈದ್ಯರು ಇದರಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದು ಕರೆ ನೀಡಿದರು.

ವೈದ್ಯರಲ್ಲಿ ಸೇವಾ ಮನೋಭಾವ ಬಲಗೊಳ್ಳಬೇಕು, ರೋಗಿಗಳು ನಿಮ್ಮಲ್ಲಿಗೆ ಬಂದಾಗ ಅವರನ್ನು ಪ್ರೀತಿಯಿಂದ ಮಾತನಾಡಿಸುವುದರಿಂದಲೇ ಅವರಲ್ಲಿ ಮನೋಸ್ಥೆöÊರ್ಯ ಹೆಚ್ಚಿ ರೋಗ ತಹಬಂದಿಗೆ ಬರುತ್ತದೆ, ಆದ್ದರಿಂದ ವೈದ್ಯರಿಗೆ ತಾಳ್ಮೆ, ಪ್ರೀತಿ ಅಗತ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಡಾ|| ಶಶಿಧರ್ ಕೆ. ಎನ್., ಕಾರ್ಯದರ್ಶಿ ಡಾ|| ವಿನಯ್‌ಬಾಬು, ಉಪಕಾರ್ಯದರ್ಶಿ ಡಾ|| ಅನಿತ .ಎ ಹಾಗೂ ಡಾ|| ಮುನಿನಾರಾಯಣ ಸಿ, ಖಜಾಂಚಿ, ಇವರುಗಳು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!