• Mon. May 20th, 2024

PLACE YOUR AD HERE AT LOWEST PRICE

ಮುಳಬಾಗಿಲು:ನಗರಸಭೆ ೫ ಕಿ.ಮೀ ವ್ಯಾಪ್ತಿಯ ೪೭ ಗ್ರಾಮಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿ, ಜಮೀನನ್ನು ಸಕ್ರಮಗೊಳಿಸುವುದನ್ನು ಸರ್ಕಾರ ನಿರ್ಬಂಧಿಸಲಾಗಿದ್ದರೂ ಕೆಲವು ನೌಕರರು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ವರ್ಷಗಳ ಹಿಂದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನುಗಳನ್ನು ಪರಭಾರೆ ಮಾಡುತ್ತಿದ್ದರೂ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ಪೌರ ಸಭೆಗಳ ಕಾಯ್ದೆ ೧೯೬೪ರ ೯ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ಸರ್ಕಾರ ಸಂಖ್ಯೆ ನಅಇ೨೦೮ ಎಂಎಲ್‌ಆರ್೨೦೧೩, ಬೆಂಗಳೂರು, ದಿ.೧೫/೧೨/೧೪ರಂತೆ ಮುಳಬಾಗಿಲು ಪುರಸಭೆ ಪ್ರದೇಶವನ್ನು ಸಣ್ಣ ನಗರಸಭೆ ಪ್ರದೇಶವೆಂದು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಸಿದ್ಧಿಕ್‌ಪಾಷ ಅವರು ಘೋಷಣೆ ಮಾಡಿರುತ್ತಾರೆ.

ಸರ್ಕಾರದ ಸಂಖ್ಯೆ : ಆರ್‌ಡಿ ೦೨ ಎಲ್‌ಜಿಪಿ ೨೦೨೧ ದಿ.೩೦/೦೧/೨೦೨೧ ರಂತೆ ಕನಾಟಕ ಪೌರಸಭೆಗಳ ಅಧಿನಿಯಮ ೧೯೬೪ರ ಉಪಬಂಧಗಳ ಅಡಿಯಲ್ಲಿ ಬರುವ ನಗರ ಪೌರಸಭೆಗಳು (ಸಿ.ಎಂ.ಸಿ.) ವ್ಯಾಪ್ತಿಯ ೫ ಕಿ.ಮೀ ವ್ಯಾಪ್ತಿಯ ಸರಹದ್ದಿನ ನಿರ್ಬಂಧಿತ ಅಂತರದಲ್ಲಿ ಸರ್ಕಾರದ ವಿವಿಧ ಕಲ್ಯಾಣ ಹಾಗೂ ಮೂಲಭೂತ ಸೌಕರ್ಯದ ಯೋಜನೆಗಳಿಗಾಗಿ ಸರ್ಕಾರಿ ಜಮೀನಿನ ತೀವ್ರ ಕೊರತೆಯಿದೆ.

ವಸತಿ, ಸ್ಮಶಾನ ಭೂಮಿಯಂತಹ ಸಾರ್ವಜನಿಕ ಉದ್ದೇಶಗಳಿಗೆ ಖಾಸಗೀಯವರಿಂದ ಜಮೀನು ಖರೀದಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿರುತ್ತದೆ, ಈ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನುಗಳ ಅನಧೀಕೃತ ಸಾಗುವಳಿಯ ಸಕ್ರಮಗೊಳಿಸುವುದನ್ನು ನಿರ್ಬಂಧಿಸಿ ಕಂದಾಯ ಇಲಾಖೆ (ಭೂ ಮಂಜೂರಾತಿ -೧) ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಬಲರಾಮ್ ಆದೇಶಿಸಿರುತ್ತಾರೆ.

ಮುಳಬಾಗಿಲು ನಗರಸಭೆಯ ೫ ಕಿ.ಮೀ ವ್ಯಾಪ್ತಿಯಲ್ಲಿನ ಕಸಬಾ ಹೋಬಳಿ ಚಾಮರೆಡ್ಡಿಹಳ್ಳಿ, ಜಿ.ವಡ್ಡಹಳ್ಳಿ, ಗುಮ್ಲಾಪುರ, ಕವತನಹಳ್ಳಿ, ಪಿ.ಗಂಗಾಪುರ, ಕೊತ್ತೂರು, ಕಸವಿರೆಡ್ಡಿಹಳ್ಳಿ, ನರಸೀಪುರದಿನ್ನೆ, ದೊಡ್ಡಬಂಡಹಳ್ಳಿ, ಕುಂಬಾರಹಳ್ಳಿ, ಚಿಕ್ಕಬಂಡಹಳ್ಳಿ, ಜಂಗಾಲಹಳ್ಳಿ, ಅಲ್ಲಾಲಸಂದ್ರ, ಕಪ್ಪಲಮಡಗು.

ಮನ್ನೇನಹಳ್ಳಿ, ದಾರೇನಹಳ್ಳಿ, ಸೊನ್ನವಾಡಿ, ಮಂಚಿಗಾನಹಳ್ಳಿ, ಖಾದ್ರೀಪುರ, ತುರುಕರಹಳ್ಳಿ, ಲಿಂಗಾಪುರ, ಸೋಮೇಶ್ವರಪಾಳ್ಯ, ಕದರೀಪುರ, ಸಿದ್ದಘಟ್ಟ, ಚಲುವನಾಯಕನಹಳ್ಳಿ, ದುಗ್ಗಸಂದ್ರ, ಮಾರಂಡಹಳ್ಳಿ, ಹೊಸಹಳ್ಳಿ, ಸೀಗೇನಹಳ್ಳಿ, ತೊರಡಿ, ಕುರುಬರಹಳ್ಳಿ, ಆವಣಿ ಹೋಬಳಿ ಮಲ್ಲಕಚ್ಚನಹಳ್ಳಿ, ಶೆಟ್ಟಿಬಣಕನಹಳ್ಳಿ.  ಅಸಲಿ ಅತ್ತಿಕುಂಟೆ, ಜಮ್ಮನಹಳ್ಳಿ, ದೊಡ್ಡಮಾದೇನಹಳ್ಳಿ, ವಿ.ಗುಟ್ಟಹಳ್ಳಿ, ಚಿಕ್ಕಮಾದೇನಹಳ್ಳಿ.

ಅನಂತಪುರ, ಕುಮುದೇನಹಳ್ಳಿ, ವರದಗಾನಹಳ್ಳಿ, ದುಗ್ಗಸಂದ್ರ ಹೋಬಳಿ ದೊಡ್ಡಗುರ್ಕಿ, ಹೆಚ್.ಗೊಲ್ಲಹಳ್ಳಿ, ರಚ್ಚಬಂಡಹಳ್ಳಿ, ಕೆ.ಜಿ.ಲಕ್ಷಿö್ಮಸಾಗರ, ಜಂಗಮ ಕನ್ನಸಂದ್ರ, ಕುರುಡುಮಲೆ ಗ್ರಾಮಗಳ ರೈತರು ಸರ್ಕಾರಿ ಜಮೀನುಗಳ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ನಿರ್ಬಂಧಿಸಲಾಗಿದೆ.

ಕಳೆದ ೨೦೧೯ರ ಜನವರಿಯಲ್ಲಿ ನಗರಸಭೆ ೫ ಕಿ.ಮೀ ವ್ಯಾಪ್ತಿಯಲ್ಲಿನ ೪೭ ಗ್ರಾಮಗಳ ರೈತರು ಅನಧೀಕೃತ ಸರ್ಕಾರಿ ಜಮೀನನ್ನು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಸಕ್ರಮಗೊಳಿಸಲು ಭೂ ಮಂಜೂರಾತಿಗಾಗಿ (ದರಕಾಸ್ತು) ಅರ್ಜಿ ೫೭ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಸರ್ಕಾರದ ಆದೇಶದಂತೆ ತಹಶೀಲ್ದಾರ್ ಬಿ.ಎನ್.ಪ್ರವೀಣ್ ಆದೇಶಿಸಿದ್ದರು.

ಆಗ ರೊಚ್ಚಿಗೆದ್ದ ಸಾವಿರಾರು ರೈತರು ಭೂ ಮಂಜೂರಾತಿಯಿಂದ ವಂಚಿತರಾಗಿ ಹಲವಾರು ಹೋರಾಟಗಳನ್ನು ಮಾಡಿದ್ದರೂ ಯಾವುದೇ ಪ್ರಯೋಜನೆಯಾಗಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೂ ಮಾಫಿಯಾದೊಂದಿಗೆ ಶಾಮೀಲಾಗಿ ಅಕ್ರಮವೆಸಗುತ್ತಿದ್ದಾರೆ.

ವಿಠಲಾಪುರ, ನರಸಿಂಹತೀರ್ಥ ನೂಗಲಬಂಡೆ ಸೇರಿದಂತೆ ಸುತ್ತಮುತ್ತಲಿನ ಮುಳಬಾಗಿಲು ರೂರಲ್ ಸರ್ವೇ ನಂಬರ್ ಗಳಲ್ಲಿನ ಕೋಟ್ಯಾಂತರ ರೂ.ಗಳ ಮೌಲ್ಯದ ಹಲವಾರು ಜಮೀನುಗಳು ಹಲವಾರು ವರ್ಷಗಳ ಹಿಂದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಮೀನುಗಳನ್ನು ಪರಭಾರೆ ಮಾಡುತ್ತಿದ್ದರೂ ಜಿಲ್ಲಾಡಳಿತ ತನಿಖೆ ಮಾಡಿ ಕ್ರಮ ಕೈಗೊಳ್ಳದೇ ಇರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮುಳಬಾಗಿಲು ಕಂದಾಯ ಇಲಾಖೆಯಲ್ಲಿನ ಕೆಲವು ಸ್ಥಳೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಲವಾರು ವರ್ಷಗಳಿಂದ ಇದೇ ತಾಲೂಕಿನಲ್ಲಿ ಉಳಿದುಕೊಂಡು ತಮ್ಮ ಸ್ವಾರ್ಥಕ್ಕಾಗಿ ಭೂ ಮಾಫಿಯಾದೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳ ಸೃಷ್ಟಿಸಿ ಮಾಡಲಾಗುತ್ತಿದೆ.

ದೇವರಾಯಸಮುದ್ರ, ನರಸಿಂಹತೀರ್ಥ ಮತ್ತು ನೂಗಲಬಂಡೆ ಪ್ರದೇಶಗಳಲ್ಲಿ ಕೋಟ್ಯಾಂತರ ಮೌಲ್ಯದ ಜಮೀನುಗಳನ್ನು ಮಾರಾಟ ಮಾಡುತ್ತಿರುವುದರಿಂದ ಜಿಲ್ಲಾಧಿಕಾರಿಗಳಾದ ಅಕ್ರಮ್‌ಪಾಷ ಅವರು ಈ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಪರಶುರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಕೀಲುಹೊಳಲಿ ಸತೀಶ್ ಒತ್ತಾಯಿಸಿದ್ದಾರೆ.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!