• Mon. May 20th, 2024

PLACE YOUR AD HERE AT LOWEST PRICE

ದಿಂದ .

ಕೋಲಾರ:ನಲವತ್ತೈದು ವರ್ಷಗಳ ಸಾಮಾಜಿಕ ಹೋರಾಟವನ್ನು ಪರಿಗಣಿಸಿ ಬೆಂಗಳೂರು ಉತ್ತರ ವಿವಿ ನೀಡುತ್ತಿರುವ ಗೌರವ ಡಾಕ್ಟರೇಟ್ ಅನ್ನು ದಲಿತ ಚಳವಳಿ ಹಾಗೂ ಜೀತಗಾರ ಶೋಷಿತ ಕುಟುಂಬಗಳಿಗೆ ಅರ್ಪಿಸುತ್ತಿದ್ದೇನೆ ಎಂದು ದಲಿತ ಹೋರಾಟಗಾರ ಸಿ.ಎಂ.ಮುನಿಯಪ್ಪ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪರವರನ್ನು ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಲಿತ ಚಳವಳಿಗೆ ಗೌರವ ಡಾಕ್ಟರೇಟ್ ಅರ್ಪಿಸುತ್ತೇನೆ. ೧೯೭೪ರಿಂದ ಧರ್ಮಯುತವಾಗಿ, ನ್ಯಾಯಯುತವಾಗಿ ಚಳವಳಿ ಮುನ್ನೆಡೆಸಲು ಕಾರಣರಾದ ನಾಯಕರಿಗೆ ಅರ್ಪಣೆ ಮಾಡುತ್ತೇನೆ. ನನಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ.

ನಾನು ದನ ಕಾಯುವ ವ್ಯಕ್ತಿಯ ಮಗ. ಕುಟುಂಬ ಜೀತದಾಳಾಗಿತ್ತು. ದಲಿತ ಚಳವಳಿ ನನಗೆ ನೈತಿಕ ಶಕ್ತಿ ತುಂಬಿತು. ದನ ಕಾಯುವ ಪುತ್ರ, ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಧೈರ್ಯ ತುಂಬಿದ್ದು ಚಳವಳಿ. ಇದು ನನ್ನೊಬ್ಬನ ಶ್ರಮ ಅಲ್ಲ. ಹಲವಾರ ಪರಿಶ್ರಮ ಇದೆ ಎಂದು ಹೇಳಿದರು.

ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ದಲಿತ ಚಳವಳಿ. ಹೋರಾಟಗಾರರಿಗೆ ನೈತಿಕ ಭಯ, ನೈತಿಕ ಎಚ್ಚರ ಇರಬೇಕು. ಆಗ ನಾವು ಭ್ರಷ್ಟರಾಗುವುದಿಲ್ಲ. ಅದೇ ದಿಕ್ಕಿನಲ್ಲಿ ನೈತಿಕ ಶಕ್ತಿಯಿಂದ ನಾವು ಹೋರಾಟ ರೂಪಿಸಿದೆವು ಎಂದರು.

ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು. ಪ್ರತಿ ತಾಲೂಕಿನಲ್ಲಿ ೧೦೦ ಯುವಕರು ಇದ್ದರೆ ಇಡೀ ಜಿಲ್ಲೆಯನ್ನು ನೈತಿಕ ಶಕ್ತಿಯಿಂದ ನಿಯಂತ್ರಿಸಬಹುದು. ದಲಿತರು, ಬಡವರು, ಶೋಷಿತರಿಗೆ ನ್ಯಾಯ ಕಲ್ಪಿಸಬಹುದು ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗ್ರಾಮದಲ್ಲಿ ಹುಟ್ಟುತ್ತಲೇ ಮಗುವಿಗೆ ಜೀತದ ಪಟ್ಟ ಕಟ್ಟುವ ಪದ್ಧತಿ ಇದ್ದದ್ದು ಶೋಚನೀಯ. ೧೫೦ ಮಂದಿ ಜೀತದಾಳರಾಗಿದ್ದರು. ಅಲ್ಲಿಂದ ದಲಿತ ಚಳವಳಿ ಹೋರಾಟ ಶುರುವಾಯಿತು ಎಂದರು.

ಈಗಿನ ಹೋರಾಟ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಹೋರಾಟಗಾರರಿಗೆ ಕಣ್ಣು, ಕಿವಿ ಇಲ್ಲ. ಸ್ವಾರ್ಥಕ್ಕಾಗಿ ಹೋರಾಟಗಳು ನಡೆಯುತ್ತಿದೆ. ನಗರದ ನಚಿಕೇತನ ವಿದ್ಯಾರ್ಥಿ ವಸತಿ ನಿಲಯವನ್ನು ಅಭಿವೃದ್ಧಿ ಪಡಿಸಿ ಐಎಎಸ್, ಐಪಿಎಸ್ ನಂತಹ ಸ್ಪರ್ಧಾತ್ಮಕ ತರಬೇತಿ ನೀಡುವ ಕೇಂದ್ರವನ್ನಾಗಿ ಮಾಡುವ ಆಸೆ ನನಗಿದೆ.

ಸಮಾಜಕಲ್ಯಾಣ ಇಲಾಖೆಯ ಭ್ರಷ್ಟಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ಬಗ್ಗೆ

ನಾನು ಹೆಚ್ಚು ಮಾತನಾಡಲ್ಲ ಎಂದರು. ಡಾಕ್ಟರೇಟ್ ಪದವಿ ಬಗ್ಗೆ ಮುಜುಗರ ನನಗೆ ಇದೆ. ಅದರ ಗೌರವ ಕಳೆದು ಹೋಗಿದೆ. ಯಾರು ಬೇಕಾದರೂ ಡಾಕ್ಟರೇಟ್ ಪದವಿ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಉತ್ತಮರಿಗೆ ಸಿಕ್ಕರೂ ಅದಕ್ಕೆ ಗೌರವ ಇಲ್ಲವಾಗಿದೆ ಎಂದು ವಿಷಾದಿಸಿದರು.

ಲೋಕಸಭೆ ಸ್ಪರ್ಧೆ ವಿಚಾರವಾಗಿ ನಾನು ಯಾವುದರ ಹಿಂದೆಯೂ ಹೋಗುವುದಿಲ್ಲ ಆಸೆ ಇಲ್ಲ. ಅದಾಗಿಯೇ ಬಂದರೆ ನೋಡೋಣ. ಬಹಳಷ್ಟು ನಿರೀಕ್ಷೆ ಇಲ್ಲ.ಅದಕ್ಕೆ ಬೇಕಾಗುವ ಹಣವೂ ಇಲ್ಲ. ದಲಿತ ಚಳವಳಿಯನ್ನು ಒತ್ತಡದ ಗುಂಪಾಗಿ ನಡೆಸಿಕೊಂಡು ಹೋಗಲು ಇಷ್ಟ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಇಡೀ ಪತ್ರಕರ್ತರಿಗೆ ಸಂತೋಷದ ವಿಚಾರ. ಪತ್ರಕರ್ತರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ವಿರಳ ಎಂದು ತಿಳಿಸಿದರು.

ದಲಿತ ಚಳವಳಿಗೆ ಮೂಲ ಕಾರಣರಲ್ಲಿ ಮುನಿಯಪ್ಪ ಕೂಡ ಒಬ್ಬರು. ೧೯೯೪ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕೋಲಾರಕ್ಕೆ ಜನತಾ ದರ್ಶನಕ್ಕೆ ಬಾರದಂತೆ ತಡೆಯೊಡ್ಡುವುದಾಗಿ ಹೇಳಿದ್ದ ಪ್ರಕರಣ ಹಾಸ್ಟೆಲ್ ನಲ್ಲಿ ಮಕ್ಕಳ ಸಂಖ್ಯೆ ಡಿತಗೊಳಿಸುವುದಾಗಿ ಹೇಳಿದ್ದ ಅಂದಿನ ಜಿ.ಪಂ ಸಿಇಒ ಬಿ.ಎಚ್.ಅನಿಲ್ ಕುಮಾರ್ ಅವರನ್ನು ಕಚೇರಿ ಒಳಗೆ ಹೋಗಲು ಬಿಡದಿದ್ದುದು ಸೇರಿದಂತೆ ವಿವಿಧ ಹೋರಾಟ ಉಲ್ಲೇಖಿಸಿದರು.

ನೇರ ಹೋರಾಟ ಅವರದ್ದು. ಸಂಚಿಕೆ ಪತ್ರಿಕೆಯ ಕಚೇರಿ ಎಂಬುದು ಹೋರಾಟಗಳ ಉಗಮ ಸ್ಥಳ ಎಂದು ನುಡಿದರು. ನಚಿಕೇತ ನಿಲಯ ಟಿ.ಚನ್ನಯ್ಯ ಅವರ ಕನಸಿನ ಕೂಸು. ಅದನ್ನು ಸಂಪನ್ಮೂಲ ಕೇಂದ್ರವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮುನಿಯಪ್ಪ ಪ್ರಯತ್ನಿಸಬೇಕು. ರಾಜ್ಯಾಕಾರ ಸಿಗುವ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.

ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ಚಳವಳಿಗಳ ತವರೂರು. ನಾಲ್ಕು ದಶಕಗಳ ಹೋರಾಟ. ಹೋರಾಟದ ಫಲವಾಗಿ ಅನೇಕ ಹಾಸ್ಟೆಲ್ ಆರಂಭವಾಯಿತು.

ಶೋಷಿತರು, ಬಡವರಿಗೆ ಭೂಮಿ ಸಿಕ್ಕಿತು. ನಾಯಕತ್ವದ ಗುಣ ಕರಗತವಾಗಿದೆ ಎಂದು ತಿಳಿಸಿದರು. ಸಿ.ಎಂ.ಮುನಿಯಪ್ಪ ಹೊಸ ಪೀಳಿಗೆಯನ್ನು ಹೋರಾಟಕ್ಕೆ ತರಲು ಪ್ರಯತ್ನಿಸಿದರು. ಈಗಿನ ಕಾಲಘಟ್ಟದಲ್ಲಿ ಆಗಿನ ರೀತಿ ಹೋರಾಟ ನಡೆಸಿದ್ದರೆ ಬದುಕಿ

ಉಳಿಯುತ್ತಿರಲಿಲ್ಲವೇನೋ? ಎಂದ ಅವರು, ರಾಜ್ಯಾಕಾರ ಪಡೆಯುವಲ್ಲಿ ಹೋರಾಟ ಯಶಸ್ವಿಯಾಗಿಲ್ಲ. ಆದರೆ, ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುನಿಯಪ್ಪ ಒಂದು ಶಕ್ತಿ ಎಂದು ನುಡಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು, ಹಿಂದಿನ ಹೋರಾಟ ಪ್ರಭಾವಕಾರಿಯಾಗಿತ್ತು. ಹೋರಾಟ ನಡೆದರೆ ಅಕಾರಿಗಳು ಬೆದರುತ್ತಿದ್ದರು. ಅಂಥ ಹೋರಾಟ ನಡೆಸಿದವರು ಮುನಿಯಪ್ಪ. ಸರ್ವ ಜನಾಂಗದವರಿಗೆ ನಾಯಕತ್ವ ನೀಡಿದವರು. ಈಗ ಸ್ವಾರ್ಥಕ್ಕೆ, ವೈಯಕ್ತಿಕ ಲಾಭಕ್ಕೆ ಹೋರಾಟ ನಡೆಸಲಾಗುತ್ತದೆ ಎಂದರು.

ಸಂಘದ ಖಜಾಂಚಿ ಸುರೇಶ್ ಕುಮಾರ್ ನಿರೂಪಿಸಿದರು. ಸದಸ್ಯ ಆಸಿಫ್ ಸ್ವಾಗತಿಸಿದರು. ಕೋ.ನಾ.ಮಂಜುನಾಥ್, ಸಿ.ವಿ.ನಾಗರಾಜ್, ಸುರೇಶ್ ಮಾತನಾಡಿದರು. ಪತ್ರಕರ್ತರು ಹಾಜರಿದ್ದು ಸಿ.ಎಂ.ಮುನಿಯಪ್ಪರನ್ನು ಸನ್ಮಾನಿಸಿದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872.ಕೆ.ರಾಮಮೂರ್ತಿ-9449675480.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!