• Mon. May 20th, 2024

PLACE YOUR AD HERE AT LOWEST PRICE

ಕೋಲಾರ:ಗುರು ಪೂರ್ಣಿಮಾ ಅಂಗವಾಗಿ ನಗರದ ಸಾಯಿಬಾಬಾ ಮಂದಿರದಲ್ಲಿ ಸೋಮವಾರ ವಿಶೇಷ ಪೂಜೆ, ವಿಶಿಷ್ಟ ರೀತಿಯ ಹೂವಿನ ಅಲಂಕಾರ,ವಾದ್ಯಗೋಷ್ಟಿ ಏರ್ಪಡಿಸಲಾಗಿದ್ದು, ಬಾಬಾ ದರ್ಶನಕ್ಕೆ ಸುಮಾರು ೨೦ ಸಾವಿರಕ್ಕೂ ಮೀರಿದ ಭಕ್ತ ಸಾಗರ ಹರಿದು ಬಂದಿದ್ದು, ಎಲ್ಲರಿಗೂ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಬ್ಬದೂಟದ ಬೃಹತ್ ದಾಸೋಹ ನಡೆಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ನಗರದ ಬಾಬಾ ಮಂದಿರದಲ್ಲಿ ಮುಂಜಾನೆಯಿಂದಲೇ ಗುರುವಿನ ಕೃಪೆ ಪಡೆಯಲು ಸಹಸ್ರಾರು ಮಂದಿ ಸರದಿ ಸಾಲಿನಲ್ಲಿ ನಿಂತಿದ್ದುದು ಕಂಡು ಬಂತು.

ಮುಂಜಾನೆಯ ಅಭಿಷೇಕ, ಗುರು ಭಜನೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಸಾಯಿಬಾಬಾ ಮೂರ್ತಿ ಹಾಗೂ ಇಡೀ ದೇವಾಲಯವನ್ನು ಬ್ಯಾಲಹಳ್ಳಿ ಗೋವಿಂದಗೌಡರ ಸಹಕಾರಿದಂದ ವಿಶಿಷ್ಟವಾದ ವಿಧವಿಧದ ಹೂಗಳಿಂದ ಅಲಂಕರಿಸಲಾಗಿತ್ತು.

ಸುಗಮ ದರ್ಶನಕ್ಕೆ ಪೊಲೀಸರ ನೆರವು ಭಕ್ತರ ಅನುಕೂಲಕ್ಕಾಗಿ ಹಾಗೂ ದರ್ಶನಕ್ಕೆ ಬಂದ ಸಹಸ್ರಾರು ಮಂದಿಯನ್ನು ನಿಯಂತ್ರಿಸಲು ಮಂದಿರದ ಮುಂಭಾಗ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಭಕ್ತರು ಸರದಿ ಸಾಲಿನಲ್ಲಿ ಮುನ್ನಡೆಯಲು ಸಕಲ ವ್ಯವಸ್ಥೆ ಮಾಡಲಾಗಿತ್ತಾದರೂ, ಸರದಿ ಸಾಲು ರೇಷ್ಮೆ ಬಿತ್ತನೆ ಕೋಠಿವರೆಗೂ ಇತ್ತ ಜಿಲ್ಲಾಸ್ಪತ್ರೆ ವೃತ್ತದವರೆಗೂ ಸಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಗುರುವಿನ ದರ್ಶನ ಪಡೆದರು.

ಭಕ್ತರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿದ್ದು, ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಾಬಾ ಭಕ್ತರ ಸೇವಾದಳ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿದ್ದು, ಸರಾಗವಾಗಿ ದರ್ಶನ ವ್ಯವಸ್ಥೆ, ಬರುವ ಭಕ್ತಾಧಿಗಳಿಗೆ ವಿಭೂತಿ, ತೀರ್ಥ, ಬಾದುಷಾ,ಪುಳಿಯೊಗರೆ ಪ್ರಸಾದ ನೀಡಿಕೆಯ ಉಸ್ತುವಾರಿಯನ್ನೂ ಮುಖಂಡರಾದ ಬಣಕನಹಳ್ಳಿ ನಟರಾಜ್, ಸುಕನ್ಯಾ, ನಾಗೇಶ್, ಚಂದ್ರಣ್ಣ, ನಾಗಮ್ಮ, ವೇಣುಗೋಪಾಲ್ ಮತ್ತಿತರರು ವಹಿಸಿದ್ದರು.

ಗೋವಿಂದಗೌಡರಿಂದ ೧೫ಸಾವಿರ ಜನಕ್ಕೆ ಊಟ ಗುರು ಪೌರ್ಣಿಮಾ ಈ ಬಾರಿ ಅದ್ದೂರಿಯಾಗಿ ನಡೆದಿದ್ದು, ಬಾಬಾ ಮಂದಿರಕ್ಕೆ ಹತ್ತಿರವಿರುವ ನಗರದ ರೈಲು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಬ್ಯಾಲಹಳ್ಳಿ ಗೋವಿಂದಗೌಡರು ಬಫೆ ಮಾದರಿಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಿದ್ದು, ಜನರ ಒತ್ತಡ ಎದುರಾಗದಂತೆ ೧೦ಕ್ಕೂ ಹೆಚ್ಚು

ಕೌಂಟರ್‌ಗಳನ್ನು ಮಾಡಲಾಗಿದ್ದು, ಬೆಳಗ್ಗೆ ೧೦-೩೦ ರಿಂದ ಮಧ್ಯಾಹ್ನ ೫ ಗಂಟೆವರೆಗೂ ಅನ್ನದಾಸೋಹ ಮುಂದುವರೆದಿತ್ತು.

ಬೃಹತ್ ಪೆಂಡಾಲ್‌ನ ಅಡಿಯಲ್ಲಿ ಈ ಬಾರಿ ಭಕ್ತಾಧಿಗಳಿಗೆ ತಟ್ಟೆಇಡ್ಲಿ,ಪಾಯಸ,ಬೂಂದಿ,

ಪಕೋಡ, ಮೆಂತ್ಯಬಾತ್, ಚಟ್ನಿ, ಅನ್ನ ನುಗ್ಗೆಕಾಯಿ ಸಾಂಬಾರು,ರಸಂ,ಮೊಸರೂ ಹೀಗೆ ಹಬ್ಬದ ಸಿಹಿಊಟ ಬಡಿಸಲಾಯಿತು.

ಊಟ ಸಿದ್ದಪಡಿಸುವ ಹಾಗೂ ಸ್ವಸಹಾಯ ಪದ್ದತಿಯಡಿ ವಿತರಣೆಯಲ್ಲಿ ೩೦೦ಕ್ಕೂ ಹೆಚ್ಚು ಮಂದಿ ಬಾಣಸಿಗರು ಎಂಜಿಎನ್  ಕ್ಯಾಟರಿಂಗ್‌ನ ನಾಗಭೂಷಣ್,ರಮೇಶ್ ನೇತೃತ್ವದಲ್ಲಿ ಕೆಲಸ ನಿರ್ವಹಿಸಿದ್ದು ೧೫ ಸಾವಿರಕ್ಕೂ ಮೀರಿದ ಜನ ಊಟ ಸವಿದರು.

ಸಾಮರಸ್ಯಕ್ಕಾಗಿ ಬಾಬಾ ಆದರ್ಶ ಬ್ಯಾಲಹಳ್ಳಿ ಗೋವಿಂದಗೌಡ ಮಾಧ್ಯಮದೊದಿಗೆ ಮಾತನಾಡಿ, ಕೋಮು ಸಾಮರಸ್ಯಕ್ಕಾಗಿ ಸಾಯಿಬಾಬಾ ಆದರ್ಶವಾಗಿದ್ದು, ದೇಶದಲ್ಲಿ ದ್ವೇಷದ ಭಾವನೆ ಹೋಗಿ ಶಾಂತಿ ನೆಲಸಲಿ, ಸ್ನೇಹ,ಸಂಬAಧಗಳು ಬಲಗೊಳ್ಳಲಿ ಎಂದು ಪ್ರಾರ್ಥಿಸಿ ಈ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.

ಗುರುಪೌರ್ಣಿಮವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು, ಗುರುವಿನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ,ಗೊಂದಲವಾಗದಂತೆ ಊಟದ ವ್ಯವಸ್ಥೆ ಕಲ್ಪಿಸುವ ಸಂಕಲ್ಪದೊಂದಿಗೆ ತಾವು ಕೆಲಸ ಮಾಡುತ್ತಿರುವುದಾಗಿ ತಿಳಿಸಿ, ಕೋಮುಗಳ ನಡುವೆ ಹೆಚ್ಚುತ್ತಿರುವ ದ್ವೇಷ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಶಾಸಕ ಸಂಸದರಿಂದ ಬಾಬಾ ದರ್ಶನ.

ಇದೇ ಸಂದರ್ಭದಲ್ಲಿ ಸಂಸದ ಎಸ್.ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮುಖಮಡ ಸಿಎಂಆರ್.ಶ್ರೀನಾಥ್, ಕಾಂಗ್ರೆಸ್ ಮುಖಂಡ ಕೆ.ಜಯದೇವ್, ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಮತ್ತಿತರರು ಬಾಬಾ ದರ್ಶನ ಪಡೆದರು.

ಊಟ,ಪೂಜಾ ಕಾರ್ಯಗಳ ಉಸ್ತುವಾರಿಯನ್ನು ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ತಂಡದ ಅಣ್ಣಿಹಳ್ಳಿ ನಾಗರಾಜ್, ಆಟೋ ನಾರಾಯಣಸ್ವಾಮಿ, ನೆನುಮನಹಳ್ಳಿ ಚಂದ್ರಶೇಖರ್, ಮುಖಂಡರಾದ ಶಶಿಧರ್, ನಗರಸಭಾ ಸದಸ್ಯ ರಾಕೇಶ್, ಎಸ್‌ಎಸ್‌ಎಲ್‌ವಿ ಶ್ರೀನಾಥ್, ಕೆಜಿಎಫ್ ತಾಲ್ಲೂಕಿನ ಭಾರ್ಗವ್‌ರಾಮ್, ಮೌನಿ ಮತ್ತಿತರರುವಹಿಸಿ ಕೆಲಸ ನಿರ್ವಹಿಸಿದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872.ಕೆ.ರಾಮಮೂರ್ತಿ-9449675480.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!